ಈ ವಾರದ ಸಾಪ್ತಾಹಿಕಗಳನ್ನು ನೋಡ್ತಾ ಇದ್ದರೆ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ಪತ್ರಿಕೆಗಳು ಎಚ್ಚರಿಕೆ ವಹಿಸಿದಾವಲ್ಲಾ ಎಂದು ಸಂತೋಷವಾಗುತ್ತವೆ. ಕನ್ನಡಪ್ರಭ, ಪ್ರಜಾವಾಣಿಯಲ್ಲಿ ಎಂಡೋ ಸಲ್ಪಾನ್ ಮಾರಿಯ ಬಗ್ಗೆ ವಿಶಿಷ್ಟ ಲೇಖನಗಳು, ಹೊಸದಿಗಂತದಲ್ಲಿ ಜೀವವೈವಿಧ್ಯದ ಬಗ್ಗೆ ಕೊನೆಯ ಫೀಚರ್ (ಮರೆತಿರ? 2010 ಅಂತಾರಾಷ್ಟ್ರೀಯ ಜೀವವೈವಿಧ್ಯ ವರ್ಷ… ಮುಗಿದೇ ಹೋಯ್ತು!) . ಪರವಾಗಿಲ್ಲ, ನಮ್ಮ ಪತ್ರಿಕೋದ್ಯಮಕ್ಕೆ ಇನ್ನೂ ಸಂವೇದನೆ ಇದೆ. ವಿಜಯ ಕರ್ನಾಟಕದಲ್ಲಿ ಬೆಳೆ ವಿಮೆ ಬಗ್ಗೆ ಬಂದ ಒಂದು ಸಂಗ್ರಹಿತ ಲೇಖನ ಕೃಷಿಕರಿಗೆ ಇನ್ನೂ ಈ ಸಾಪ್ತಾಹಿಕದಲ್ಲಿ ಜಾಗ ಇದೆ ಅನ್ನೋ ಭರವಸೆ ಮೂಡಿಸಿದೆ.
ಜೋಕ್: ಹೊಸದಿಗಂತದವರು ಮಾತ್ರ ಭಾರತೀಯ ನಾರಿ ಅಂದ್ರೆ ಹಣೆಯಲ್ಲಿ ಕುಂಕುಮ ಇರಲೇಬೇಕು ಎನ್ನುವವರು. ಈ ಸಲದ ಅವರ ಕ್ಯಾಲೆಂಡರಿನಲ್ಲಿ ಮಾತ್ರ ಈ ರೂಲ್ ಮರೆತಿದ್ದಾರೆ. ಬಹುಶಃ ಆಧುನಿಕ ಭಾರತೀಯ ನಾರಿಯ ಚಿತ್ರಣ ಎಂಬ ಖಚಿತ ನಿಲುವು ಅವರದಾಗಿರಬಹುದು!