ಎತ್ತು ಉಚ್ಚೆ ಹೊಯ್ದಂತೆ ಎಂಬ ಗಾದೆ ಮಾತಿಗೆ ಈ ಬ್ಲಾಗ್ ಒಳ್ಳೆ ಉದಾಹರಣೆ:
ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಡೇಟ್: 27-12-3010 ಬೆಂಗಳೂರು ಆಂಕರ್: ಓಬಳಾಪುರಂ ಗಣಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ 2007-08 ನೇ ಸಾಲಿನಲ್ಲಿ 86 ಕೋಟಿ 42 ಲಕ್ಷ ರುಪಾಯಿ ತೆರಿಗೆ ವಂಚನೆ ಮಾಡಿದ್ದಾರೆಂದು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುವ ಸಲುವಾಗಿ ಸಿದ್ಧಪಡಿಸಿರುವ ಇಲಾಖೆಯ ಆಂತರಿಕ ವರದಿಯ ದಾಖಲೆಗಳು ಸಮಯ ನ್ಯೂಸ್ಗೆ ಲಭ್ಯವಾಗಿವೆ. ಫ್ಯಾಕೇಜ್ ಫಾಲೋಸ್……… ವಾಯ್ಸ್ ಓವರ್ 1; ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡತನದ ಗಣಿ ಕಂಪನಿಗಳ ಮೇಲೆ ಕಳೆದ ಅಕ್ಟೋಬರ್ನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣದ ಕಾಗದ ಪತ್ರಗಳನ್ನು ವಶಪಡಿಸಿಕೊಂಡಿದ್ದರು. ಅದರಲ್ಲಿ ಓಬಳಾಪುರಂ ಮೈನ್ಸ್, ಅನಂತಪುರಂ ಮೈನಿಂಗ್ಕಾಪರ್ೊರೇಷನ್ ಸೇರಿದಂತೆ ರೆಡ್ಡಿಗಳ ಒಡತನ ಹಾಗೂ ಹಿಡಿತದಲ್ಲಿರುವ ಐದು ಕಂಪನಿಗಳ ಆಥರ್ಿಕ ವಹಿವಾಟುಗಳ ಬಗ್ಗೆ ವಶಪಡಿಸಿಕೊಂಡ ಕಾಗದ ಪತ್ರಗಳ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆ ತನಿಖೆ ಕೈಗೊಂಡಿತ್ತು. ತನಿಖೆ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಕಲೆ ಹಾಕಿರುವ ಮಾಹಿತಿ ಪ್ರಕಾರ, ಜನಾರ್ದನ ರೆಡ್ಡಿ ಒಡತನದ ಓಬಳಾಪುರಂ ಮೈನಿಂಗ್ ಕಾಪರ್ೊರೇಷನ್ 2007-08 ನೇ ಸಾಲಿನಲ್ಲಿ ಒಟ್ಟು 86 ಕೋಟಿ, 42 ಲಕ್ಷ ರುಪಾಯಿ ತೆರಿಗೆ ವಂಚನೆ ಮಾಡಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಸಿದ್ಧಪಡಿಸಿರುವ ಆಂತರಿಕ ದಾಖಲೆಗಳು ಸಮಯ ನ್ಯೂಸ್ಗೆ ಲಭ್ಯವಾಗಿವೆ. (ಗ್ರಾಫಿಕ್ ಪಾಯಿಂಟ್ಸ್: 86 ಕೋಟಿ, 43 ಲಕ್ಷ ತೆರಿಗೆ ವಂಚನೆ, ಓಬಳಾಪುರಂ ಗಣಿ ಮಾಲೀಕ, ಸಚಿವ ಜನಾರ್ದನರೆಡ್ಡಿಯಿಂದ, ಆದಾಯ ತೆರಿಗೆ ಅಧಿಕಾರಿಗಳಿಂದ ಪತ್ತೆ) ದಾಖಲೆಗಳ ಪ್ರಕಾರ, ಸಿಂಗಾಪುರದ ಜಿಎಲ್ಎ ಟ್ರೇಡಿಂಗ್ ಇಂಟರ್ನ್ಯಾಷನಲ್ ಕಂಪನಿ ಜತೆ ಕಬ್ಬಿಣದ ಅದಿರು ಸರಬರಾಜು ಮಾಡುವ ಸಲುವಾಗಿ ಓಎಂಸಿ ಕಂಪನಿ ಜ್ಞಾಪನಾ ಪತ್ರಕ್ಕೆ ಸಹಿ ಹಾಕಿದೆ. ಬಳಿಕ ಜಿಎಲ್ಎಗೆ ಜನಾರ್ದನ ರೆಡ್ಡಿ ನಿದರ್ೇಶಕರಾಗಿ ನೇಮಕಗೊಂಡಿದ್ದಾರೆ. ಆನಂತರ ಓಎಂಸಿ ಕಂಪನಿ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಜಿಎಲ್ಎ ಕಂಪನಿಗೆ ಉತೃಷ್ಟ ಗುಣಮಟ್ಟದ ಕಬ್ಬಿಣದ ಅದಿರನ್ನು ರಫ್ತು ಮಾಡಿದೆ. ಈ ವ್ಯವಹಾರದಲ್ಲಿ ಕಡಿಮೆ ಇನ್ವಾಯ್ಸ್ ತೋರಿಸಿ ಅಪಾರ ಪ್ರಮಾಣದ ತೆರಿಗೆ ವಂಚಿಸಲಾಗಿದೆ. ಇದರ ಅಂದಾಜು ಸುಮಾರು 86 ಕೋಟಿ, 42 ಲಕ್ಷ ರುಪಾಯಿಗಳೆಂದು ದಾಖಲಿಸಲಾಗಿದೆ. ಆಂಧ್ರದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತಿರುವ ಈ ಸಂದರ್ಭದಲ್ಲಿಯೇ ಆದಾಯ ತೆರಿಗೆ ಇಲಾಖೆ ಓಬಳಾಪುರಂ ಗಣಿಯಿಂದ ತೆರಿಗೆ ವಂಚನೆ ಆಗಿರುವುದನ್ನು ಪತ್ತೆ ಹಚ್ಚಿದೆ. ಈ ಬೆಳವಣಿಗೆ ಸಚಿವ ಜನಾರ್ದನ ರೆಡ್ಡಿಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಜನಾರ್ದನ ರೆಡ್ಡಿ ಗಣಿ ವ್ಯವಹಾರಗಳು ಆಂಧ್ರದಲ್ಲೂ ಇರುವುದರಿಂದ ಯಾವುದೇ ಕ್ಷಣದಲ್ಲಿ ಸಿಬಿಐ ಅಧಿಕಾರಿಗಳು, ರೆಡ್ಡಿ ಅವರನ್ನು ಪ್ರಶ್ನಿಸುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ಸಕರ್ಾರ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. –ಎಂ. ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು.
ಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿ
February 1, 2011 at 5:38 am
Pathetic state of news channels
January 6, 2011 at 2:21 pm
ವಿಮರ್ಶಕಿ ನೀವು ಏನು ಹೇಳೋಕೆ ಹೊರಟ್ರಿ ಅಂತ ಗೊತ್ತಾಗಿದೆ ಬಿಡಿ, ನಿಮ್ಮ ಸೂಕ್ಷ್ಮ ಪ್ರಜ್ಞೆಗೆ ಹ್ಯಾಟ್ಸ್ ಆಫ್.
December 28, 2010 at 9:13 am
ಎಲ್ಲಾ OK, ಆದ್ರೆ ಡೇಟ್: 27-12-3010 ಯಾಕೆ?
December 28, 2010 at 8:58 am
ಓದಿದೆಓದಿದೆಓದಿದೆ;ಈ ಸಮಾಚಾರದ ತಿರುಳೇ ಗೊತ್ತಾಗತಾ ಇಲ್ಲ!