Archive for January, 2011

ಮುಸ್ಲಿಂ ದೇಶಗಳ ಕ್ರಾಂತಿ: ಮೀಡಿಯಾ ಜಿಂದಾಬಾದ್

January 30, 2011

ಅಂದು ಯೆಮೆನ್. ಇಂದು ಈಜಿಪ್ಟ್. ಎಲ್ಲೆಲ್ಲೂ ಕ್ರಾಂತಿಯ ಘೋಷಣೆ. ಪ್ರಜಾತಂತ್ರಕ್ಕಾಗಿ ಮುಸ್ಲಿಂ ದೇಶಗಳಲ್ಲಿ ಹೋರಾಟ; ರಕ್ತಪಾತ. ವೆಬ್ ೨.೦ ಯುಗದ ಈ ಹೊಸ ಕ್ರಾಂತಿಗಳಿಗೆ ಫೇಸ್‌ಬುಕ್, ಟ್ವಿಟರ್, ಮೊಬೈಲ್, ಹ್ಯಾಮ್, – ಎಲ್ಲ ಮಾಧ್ಯಮಗಳ, ಜಾಲತಾಣಗಳ ಬಳಕೆ. Read the rest of this entry »

ಪ್ರಜಾವಾಣಿ ವೆಬ್‌ಸೈಟಿನ ಬೀಟಾ ವರ್ಶನ್ ನೋಡಿದೀರ?

January 29, 2011

ಯಾವಾಗಲೋ ಯೂನಿಕೋಡ್‌ಗೆ ಹೋಗಿದ್ದ ಪ್ರಜಾವಾಣಿ ಈಗ ತನ್ನದೇ ಕಾರಣಗಳಿಗೆ ವೆಬ್‌ಸೈಟನ್ನು ಮರುವಿನ್ಯಾಸಗೊಳಿಸಿದೆ. ಇದೇನೋ ಸ್ವಾಗತಾರ್ಹ. ಈ ವೆಬ್‌ಸೈಟಿನ ಬಗ್ಗೆ ವಿಮರ್ಶಕಿಯ ಅಭಿಪ್ರಾಯಗಳು ಹೀಗಿವೆ: Read the rest of this entry »

ವಕ್ರತುಂಡೋಕ್ತಿ: ಸಂಬಳ ಕೊಟ್ಟರೆ ಪತ್ರಕರ್ತರು ರಾಜಕಾರಣಿಗಳನ್ನು ಬೈಯುತ್ತಾರೆ; ಕೊಡದಿದ್ದರೆ….

January 14, 2011

ನೀವು ಒಪ್ಪಿ, ಬಿಡಿ, ಬೇಕಾದರೆ ರಾಜೀನಾಮೆ ಕೊಡಿ. ಆದರೆ `ನನಗೂ, ನಾನು ಬರೆಯುವುದಕ್ಕೂ, ಮ್ಯಾನೇಜ್‌ಮೆಂಟ್‌ಗೂ ಯಾವ ಸಂಬಂಧವೂ ಇಲ್ಲ; ನಾನೇ ಬೇರೆ, ನನ್ನ ಸ್ಟೈಲೇ ಬೇರೆ’ ಎಂದು ಹೇಳುವಂತಿಲ್ಲ. ಇವತ್ತು ಕನ್ನಡವೇನು, ಜಗತ್ತಿನ ಪತ್ರಿಕಾರಂಗವೇ ಬಹುತೇಕವಾಗಿ ಖಾಸಗಿ ವ್ಯಕ್ತಿಗಳ ಕೈಯಲ್ಲಿದೆ. ಆದರೂ ಇಂಥ ಮ್ಯಾನೇಜ್‌ಮೆಂಟ್ ಪ್ರಭಾವವನ್ನೂ ಮೀರಿದ ಐದು ಪತ್ರಿಕೆಗಳು ಜೂಲಿಯಾನ್ ಅಸಾಂಜ್‌ನ ವಿಕಿಲೀಕ್ಸ್ ದಾಖಲೆಗಳನ್ನು ಪ್ರಕಟಿಸಿದ್ದು ಒಂದು ದಾಖಲೆಯೇ ಹೌದಲ್ವರ? ಮ್ಯಾನೇಜ್‌ಮೆಂಟ್‌ಗೂ, ಸಿಬ್ಬಂದಿಗಳಿಗೂ ತಿಕ್ಕಾಟ ಇದ್ದಿದ್ದೆ. ಆದರೆ ಅದನ್ನು ವೃತ್ತಿಯ ಅವಧಿಯಲ್ಲಿ ಪ್ರಕಟಿಸಿ ಹೊರಬರುವುದಕ್ಕೂ, ಆಮೇಲೆ ವಿಷ ಕಾರುವುದಕ್ಕೂ ವ್ಯತ್ಯಾಸವಿದೆ. Read the rest of this entry »

ವಿಮರ್ಶಕಿಯ ಸಂಪಾದಕೀಯ: ಪತ್ರಕರ್ತರು ವದಂತಿಗಿರಣಿಗಳಾದಾಗ…

January 13, 2011

ಅವ್ರು ಈ ಪತ್ರಿಕೆ ಸೇರ್‍ತಾರಂತೆ, ಇವ್ರನ್ನು ೧೫ನೇ ತಾರೀಖು ಒದ್ದು ಹೊರಗೆ ಹಾಕ್ತಾರಂತೆ, ಇವ್ರಿಗೆ ಅವ್ರು ದುಡ್ಡು ಹಾಕಿ ಹೊಸ ಪೇಪರ್ ತರ್‍ತಾರಂತೆ, ಅವ್ರು ಮತ್ತು ಇವ್ರು ಇಬ್ರೂ ಸೇರಿ ಆ ಪತ್ರಿಕೆ ಸೇರೋದಕ್ಕೆ ಕಾಯ್ತಾ ಇದಾರಂತೆ, ಇವ್ರು ಒಂದು ಎರಡು ಮೂರು ನಾಲ್ಕು ಆಮೇಲಿನ್ನೇನು ಅಂತ ಹಾಡ್ತಾ ಇದಾರಂತೆ… ಇವ್ರ ಫೋನ್ ಸ್ವಿಚ್‌ಆಫ್… ಅವ್ರ ಮ್ಯಾನೇಜ್‌ಮೆಂಟ್ ಸ್ಟೇಕ್ ಇನ್ನು ಒಂದೇ ವಾರದಲ್ಲಿ ಹೆಚ್ಚಾಗುತ್ತಂತೆ….  ಅಕಸ್ಮಾತ್ ಅವ್ರು ಬಿಟ್ಟಿದ್ದೇ ಆದ್ರೆ ಈ ಪತ್ರಿಕೆಯಿಂದ ಇವ್ರು ಅಲ್ಲಿಗೆ ಹೋಗೋದಕ್ಕೆ ತಯಾರಿ ನಡೆದಿದೆಯಂತೆ… Read the rest of this entry »

Follow

Get every new post delivered to your Inbox.

Join 40 other followers