ನೀವು ಒಪ್ಪಿ, ಬಿಡಿ, ಬೇಕಾದರೆ ರಾಜೀನಾಮೆ ಕೊಡಿ. ಆದರೆ `ನನಗೂ, ನಾನು ಬರೆಯುವುದಕ್ಕೂ, ಮ್ಯಾನೇಜ್‌ಮೆಂಟ್‌ಗೂ ಯಾವ ಸಂಬಂಧವೂ ಇಲ್ಲ; ನಾನೇ ಬೇರೆ, ನನ್ನ ಸ್ಟೈಲೇ ಬೇರೆ’ ಎಂದು ಹೇಳುವಂತಿಲ್ಲ. ಇವತ್ತು ಕನ್ನಡವೇನು, ಜಗತ್ತಿನ ಪತ್ರಿಕಾರಂಗವೇ ಬಹುತೇಕವಾಗಿ ಖಾಸಗಿ ವ್ಯಕ್ತಿಗಳ ಕೈಯಲ್ಲಿದೆ. ಆದರೂ ಇಂಥ ಮ್ಯಾನೇಜ್‌ಮೆಂಟ್ ಪ್ರಭಾವವನ್ನೂ ಮೀರಿದ ಐದು ಪತ್ರಿಕೆಗಳು ಜೂಲಿಯಾನ್ ಅಸಾಂಜ್‌ನ ವಿಕಿಲೀಕ್ಸ್ ದಾಖಲೆಗಳನ್ನು ಪ್ರಕಟಿಸಿದ್ದು ಒಂದು ದಾಖಲೆಯೇ ಹೌದಲ್ವರ? ಮ್ಯಾನೇಜ್‌ಮೆಂಟ್‌ಗೂ, ಸಿಬ್ಬಂದಿಗಳಿಗೂ ತಿಕ್ಕಾಟ ಇದ್ದಿದ್ದೆ. ಆದರೆ ಅದನ್ನು ವೃತ್ತಿಯ ಅವಧಿಯಲ್ಲಿ ಪ್ರಕಟಿಸಿ ಹೊರಬರುವುದಕ್ಕೂ, ಆಮೇಲೆ ವಿಷ ಕಾರುವುದಕ್ಕೂ ವ್ಯತ್ಯಾಸವಿದೆ. Read the rest of this entry »