ನಿಂಗ್‌ಗೂ ಬಂತು ವಿಮರ್ಶಕಿ ‘ಪತ್ರಕರ್ತರ ಆಸ್ತಿ ಪ್ರಕಟಣೆ ಬೇಡಿಕೆ’ ಚರ್ಚೆ

ಅಕ್ಟೋಬರ್ 22, 2009

ಅಂತೂ ವಿಮರ್ಶಕಿಯು ಬರೆದ ಪತ್ರಕರ್ತರ ಆಸ್ತಿ ಪ್ರಕಟಣೆ ಕುರಿತ ಲೇಖನವು ನಿಂಗ್ ಎಂಬ ಸೋಶಿಯಲ್ ನೆಟ್‌ವರ್ಕ್‌ನ ಕನ್ನಡ ಜರ್ನಲಿಸ್ಟ್‌ಗಳ ವಿಭಾಗದಲ್ಲೂ ಜಾಗ ಪಡೆದಿದೆ.

ಪತ್ರಕರ್ತರ ಆಸ್ತಿ ಪ್ರಕಟಣೆ ಮಾಡಬೇಕೆ ?

 ಇಷ್ಟು ದಿನ ರಾಜಕಾರಣಿಗಳು ಮಾತ್ರ ತಮ್ಮ ಆಸ್ತಿ ವಿವರವನ್ನು ಸಲ್ಲಿಸುತ್ತಿದ್ದರು. ಇತ್ತೀಚೆಗೆ ನ್ಯಾಯಮೂರ್ತಿಗಳು ಸಹ ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಪತ್ರಕರ್ತರೂ ಕೂಡಾ ತಮ್ಮ ಆಸ್ತಿ ವಿವರವನ್ನು ಬಹಿರಂಗಪಡಿಸಬೇಕು ಎಂದು ಆಂಗ್ಲ ಪತ್ರಿಕೆಯಲ್ಲಿ ಲೇಖನವೊಂದು ಪ್ರಕಟವಾಯಿತು. “ವಿಮರ್ಶಕಿ” ಎಂಬ ಅನಾಮಿಕ ಬ್ಲಾಗೊಂದು ಇದನ್ನು ಬಲವಾಗಿ ಸಮರ್ಥಿಸಿಕೊಂಡಿದೆ. ಇದೀಗ ಇದು ಚರ್ಚೆಯ ವಿಷಯವಾಗಿದ್ದು, ವಿಮರ್ಶಕಿ ಬ್ಲಾಗಿನ ವರದಿಯನ್ನೇ “ದಟ್ಸ್ ಕನ್ನಡ”ದಲ್ಲಿ ಪ್ರಕಟಿಸಲಾಗಿದೆ. “ಪತ್ರಕರ್ತರ ಆಸ್ತಿ ಬಹಿರಂಗಪಡಿಸಿಬೇಕೆ”. ನೀವೂ ಹೇಳಿ ಬೇಕು, ಬೇಡ ಅಂತ ?

http://thatskannada.oneindia.in/mixed-bag/blogs/2009/1021-journalists-asset-declaration-manual.html

ಅಂತೂ ವಿಮರ್ಶಕಿಯು ಬರೆದ ಪತ್ರಕರ್ತರ ಆಸ್ತಿ ಪ್ರಕಟಣೆ ಕುರಿತ ಲೇಖನವು ನಿಂಗ್ ಎಂಬ ಸೋಶಿಯಲ್ ನೆಟ್‌ವರ್ಕ್‌ನ ಕನ್ನಡ ಜರ್ನಲಿಸ್ಟ್‌ಗಳ ವಿಭಾಗದಲ್ಲೂ ಜಾಗ ಪಡೆದಿದೆ. ಮೃತ್ಯುಂಜಯ ಕಲ್ಮಠ ಎಂಬುವವರು ವಿಮರ್ಶಕಿಯು ಆಂಗ್ಲ ಲೇಖನವನ್ನು ಸಮರ್ಥಿಸಿಕೊಂಡಿದ್ದಾಳೆ ಎಂದು ಬರೆದಿರುವುದು ಮಾತ್ರ ಸರಿಯಲ್ಲ. ವಿಮರ್ಶಕಿ ಬರೆದದ್ದು ಒರಿಜಿನಲ್ ಲೇಖನ. ಈ ಲೇಖನ ಬರೆಯೋದಕ್ಕಿಂತ ಮುಂಚೆಯೇ ಆದಿತ್ಯ ನಿಗಮ್ ಎನ್ನೋ ಚಿಂತಕರು ಈ ಬಗ್ಗೆ ಬರೆದಿದ್ದರು, ಇದಕ್ಕೂ ಕೆಲ ತಿಂಗಳುಗಳ ಮುನ್ನ ಎಕನಾಮಿಕ್ ಟೈಮ್ಸ್ ತನ್ನದೊಂದು ನೀತಿಯನ್ನು ಪ್ರಕಟಿಸಿತ್ತು  – ಇದು ವಾಸ್ತವ.  ಏನೇ ಇರಲಿ, ಈ ಚರ್ಚೆಯನ್ನು ನಿಂಗ್‌ಗೂ ತಂದಿಟ್ಟ ಕಲ್ಮಠರಿಗೆ ವಂದನೆಗಳು.
ನಿಂಗ್‌ನಲ್ಲಿ ನೂರಾರು ಪತ್ರಕರ್ತರಿದ್ದಾರೆ. ಎಲ್ಲರೂ ಈ ಚರ್ಚೆಯಲ್ಲಿ ಪಾಲ್ಗೊಳ್ಳಲಿ ಎಂದು ಆಶಿಸುತ್ತೇನೆ. ಆದರೆ ಚರ್ಚೆಯ ಮುಖ್ಯಬಿಂದುವಾದ ಆಸ್ತಿ ವಿವರ ಪ್ರಕಟಿಸಬೇಕಾದ ಪತ್ರಕರ್ತರು ಭಾಗವಹಿಸಬೇಕಾಗಿರೋದು ತುಂಬಾ ಮುಖ್ಯ ಅಲ್ವರ?
Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: