ಸುದ್ದಿ ಮನೆ ವ್ಯಥೆ : ವಿಜಯ ಕರ್ನಾಟಕವೇನು ಉಂಡೆಸೆವ ಬಾಳೆ ಎಲೆಯೆ?

ಡಿಸೆಂಬರ್ 21, 2010

ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕ ಬಿಟ್ಟ ಮೇಲೆ ಅವರು ತಂದಿದ್ದ ಕಾಲಮಿಸ್ಟುಗಳು ಯಾಕೆ ಇರಬೇಕು? ಅವರೆಲ್ಲರೂ ಭಟ್ಟರೊಂದಿಗೇ ನಿರ್ಗಮಿಸಬೇಕು ಎಂಬ ವಾದವನ್ನು ಭಟ್ಟರ ಕೈಕೆಳಗೆ ಮಾತ್ರವೇ ಆಜೀವ ಪರ್ಯಂತ ದುಡಿಯುವುದಾಗಿ ಪ್ರಕಟಿಸಿದ ಪ್ರತಾಪ ಸಿಂಹರು ಹೇಳಿರುವುದು, ಅದಕ್ಕಾಗಿ ತನ್ನ ಮಾತನ್ನು ಕೇಳದ ಅಂಕಣಕಾರ ಶ್ರೀವತ್ಸ ಜೋಶಿಯವರನ್ನು ಹಿಗ್ಗಾಮುಗ್ಗಾ / ವಾಚಾಮಗೋಚರವಾಗಿ ನಿಂದಿಸಲು ಆರಂಭಿಸಿರುವುದು ಸುದ್ದಿಮನೆಯ ಒಂದು ವ್ಯಥೆ ಎನ್ನಬಹುದು!
( ವಿಮರ್ಶಕಿ ಈ ಮೈಲ್ ಐಡಿನ ತೆಪ್ಪಾಗಿ ತಿಳ್ಕಂಬುಟು ಕೆಲವ್ರು ಪ್ರಸ್ನೆ ಕೇಳವ್ರೆ!! ಯಪಾ, ನಂಗೆ ನೀವು vimarshaki [at] gmail.com ಗೆ ಈ ಮೈಲ್ ಹಾಕ್ರಪೋ…)

ಭಟ್ಟರನ್ನು ತೀರಾ ಇತ್ತೀಚೆಗಿನ ಸಂಚಿಕೆಯವರೆಗೆ ಅತೀವವಾಗಿ ಬೆಂಬಲಿಸಿದ್ದ ರವಿ ಬೆಳಗೆರೆಯವರ ಕಾಲಂ ನಿಂತಿತು. ಹಾಲ್ದೊಡ್ಡೇರಿ ಸುಧೀಂದ್ರರ ನೆಟ್‌ನೋಟ ನಿಂತಿತು. ಸ್ವಾಮಿಗಳ ಬೆಳದಿಂಗಳು ನಿಂತಿತು. ಮೀಡಿಯಾ ಮಿರ್ಚಿಯೇನೋ ಕಳೆದ ವಾರ ಬಂತು. ಇತ್ತ ಶ್ರೀವತ್ಸ ಜೋಶಿಯವರ ಸ್ಥಿತಿ ಈಗ ಚಿತ್ರಾನ್ನವಾಗಿದೆ! ಹಾಗಂತ ಅವರೇ ಮೆದುಮಾತಿನಲ್ಲಿ ಉತ್ತರಿಸಿದರೆ, ಅದೆಲ್ಲಾ ನಿಮ್ಮ ಬ್ಲಫಿಂಗ್ ಎಂದು ಪ್ರತಾಪಣ್ಣ ಗುರುಗುಟ್ಟಿರೋದು ಮಾತ್ರ ವಿಚಿತ್ರವಾಗಿದೆ. ಹಾಗೇ ಲಲಿತಾ ಭಟ್ ಎನ್ನುವವರು ಶ್ರೀವತ್ಸ ಜೋಶಿಯವರಿಗೆ ಪತ್ರವನ್ನೂ ಬರೆದು ಇದನ್ನೆಲ್ಲ ಪ್ರಶ್ನಿಸಿದ್ದು ಈ ಕಥೆ, ಕ್ಷಮ್ಸಿ, ವ್ಯಥೆಯ ಮೊದಲ ಭಾಗ.

ಆತ್ಮೀಯ ಲಲಿತಾ ಭಟ್ ಅವರಿಗೆ ನಮಸ್ಕಾರಗಳು.

ನಿಮ್ಮ ಪತ್ರಕ್ಕಾಗಿ, ಇಷ್ಟು ವಿವರವಾಗಿ ಕನ್ನಡದಲ್ಲೇ ಟೈಪ್ ಮಾಡಿ ಕಳಿಸಿದ್ದಕ್ಕಾಗಿ, ನಿಮಗೆ ತುಂಬ ಧನ್ಯವಾದಗಳು. ನಿಮ್ಮ ಪತ್ರದ ಹೂರಣವನ್ನು ಗ್ರಹಿಸಿ ಅರಗಿಸಿಕೊಂಡಿದ್ದೇನೆ. ವಿಭಟ್ ಅವರ ರಾಜೀನಾಮೆ (ಬುಧವಾರ ಡಿ.೮) ಮತ್ತು ಅವರ ಸಮರ್ಥ ತಂಡದವರ ರಾಜೀನಾಮೆಯ ನಂತರದ ವಿದ್ಯಮಾನಗಳನ್ನು ನಾನು ಸಮಚಿತ್ತದಿಂದಲೇ ಗಮನಿಸುತ್ತ ಬಂದಿದ್ದೇನೆ. ಶುಕ್ರವಾರ (ಡಿಸೆಂಬರ್ ೧೦) ದಿನವೇ ಆ ಬಗ್ಗೆ ನಾನು, ಶಾಮಸುಂದರ್ ಮತ್ತು ವಿಭಟ್ (ಅವರಿಬ್ಬರೂ “ಪತ್ರಿಕಾ ಬರವಣಿಗೆ”ಗೆ ಸಂಬಂಧಿಸಿದಂತೆ ನನ್ನ ಆದ್ಯಹಿತೈಷಿಗಳು) ಅವರೊಂದಿಗೆ ವಿಚಾರವಿನಿಮಯವನ್ನೂ ಮಾಡಿದ್ದೇನೆ. ಪ್ರತಾಪ್‌ಸಿಂಹರೊಂದಿಗೆ ದೂರವಾಣಿಸಂಭಾಷಣೆಯನ್ನೂ ಮಾಡಿದ್ದೇನೆ. ಈ ಎಲ್ಲ ಬೆಳವಣಿಗೆಗಳಿಂದ, ಅವುಗಳ ಸುತ್ತ ಹರಡಿರುವ ವದಂತಿಗಳಿಂದ, ಬೇಡವೆಂದರೂ ಸಾಕಷ್ಟು ಗೊಂದಲವುಳ್ಳವನೂ, ಅಥವಾ ಸಂಸ್ಕೃತ ಬಳಸುವುದಾದರೆ  ‘ಕಿಂಕರ್ತವ್ಯವಿಮೂಢ’ನೂ ಆಗಿದ್ದೇನೆ. ಅನೇಕ ಓದುಗರೂ ಮತ್ತು ವಿಕ ಹೊಸ ಸಂಪಾದಕರು “ದಯವಿಟ್ಟು ಅಂಕಣವನ್ನು ಮುಂದುವರಿಸಿ” ಎಂದಿರುವುದು ನನ್ನ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.

ಸ್ವಭಾವತಃ ನಾನು “ತಣ್ಣೀರನ್ನಾದರೂ ತಣಿಸಿ ಕುಡಿಯೋಣ” ಕ್ಯಾಟೆಗರಿಯವನು. ಆವೇಶದ/ಆತುರದ ನಿರ್ಧಾರಗಳು ಬೇಡ, ಸಮಂಜಸವೂ ಅಲ್ಲ ಎನ್ನುವವನು. “ಅಂಕಣ ಬರೆಯುವುದನ್ನು ನಿಲ್ಲಿಸಿದರಷ್ಟೇನೇ ವಿಭಟ್ ಅವರಿಗೆ ಗೌರವ/ಕೃತಜ್ಞತೆ/ ನೈತಿಕಬೆಂಬಲ ತೋರಿಸಿದಂತೆ”,  “ಅಂಕಣವನ್ನು ಮುಂದುವರೆಸಿದರೆ ವಿಭಟ್ ತೋರಿಸಿದ್ದ ಪ್ರೀತಿವಿಶ್ವಾಸಗಳನ್ನೆಲ್ಲ ಮರೆತು ಕೃತಘ್ನನಾದಂತೆ…” ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅಂಕಣವನ್ನು ಮುಂದುವರಿಸಲಿಕ್ಕೆ ಇದು ಸಬೂಬುಎಂದೂ ಹೇಳುತ್ತಿಲ್ಲ. ನಾನು ಓದುಗರ ಅಪೇಕ್ಷೆ ನಿರೀಕ್ಷೆಗಳಿಗೆ ತುಂಬ ಬೆಲೆ ಕೊಡುತ್ತೇನೆ. ನನ್ನ ಯಾವುದೇ ನಿಲುವು ಎಲ್ಲರನ್ನೂ ಸಂತುಷ್ಟಗೊಳಿಸುತ್ತದೆ ಎಂಬ ಭ್ರಮೆ ನನಗಿಲ್ಲ. ಹೇಗೆ ಮಾಡಿದರೂ ಒಬ್ಬರಲ್ಲ ಒಬ್ಬರಿಗೆ ಅಸಮಾಧಾನ (ಸಿಟ್ಟು ಸಹ!) ಆಗಿಯೇ ಆಗುತ್ತದೆ ಎಂದು ನನಗೆ ಗೊತ್ತು. ಆದರೆ ಒಂದುವೇಳೆ ಅಂಕಣವನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದರೂ   ಯಥಾಯೋಗ್ಯವಾಗಿ ಬರೆದು, ಓದುಗರಿಗೆ ವಿದಾಯ ಹೇಳಿ exit ತೆಗೆದುಕೊಳ್ಳುತ್ತೇನೆ (ಇದೆಲ್ಲ ಈಗ ನನ್ನ ವಿವೇಚನೆಗೆ ಬಿಟ್ಟಿರುವುದರಿಂದ). ಇದು ಯಾವಾಗಕ್ಕಾದರೂ ಒಳ್ಳೆಯದೇ. ಅಲ್ಲವೇ?

Pratap Simha : Mr. Joshi, stop bluffing.

Srivathsa Joshi Dear Pratap, a request. Can we/shall we cross verify with Shamsundar as to which part/portion in the above response of mine is “bluffing”? That’s because, I have shared and confided with him every minutest detail of my dilemma and related developments ever since Sri VBhat resigned. If Sham opines that ‘Srivathsa Joshi indeed is speaking in dual tone here’ I shall admit it. Else I would opt to ignore.

ಭಟ್ಟರನ್ನು ಬೆಂಬಲಿಸಿ ಕಾಲಂ ನಿಲ್ಲಿಸಿದರೆ ಯಾರೂ ಏನೂ ಹೇಳಲಾಗದು. ಅದು ಅವರವರ ಮರ್ಜಿ. ಹಾಗೆಯೇ ತನ್ನ ವಿವೇಚನೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವೆ ಎಂದು ಶ್ರೀವತ್ಸ ಜೋಶಿಯವರು ಹೇಳಿದ್ದರೆ ಅದರಲ್ಲೂ ಯಾವ ತಪ್ಪೂ ಇಲ್ಲ. ಇಷ್ಟಕ್ಕೂ ಭಟ್ಟರ ಇನ್ನೊಂದು ಪತ್ರಿಕೆ ಬಂದು, ಅದರಲ್ಲಿ ಈ ಎಲ್ಲರೂ ಕಾಲಂ ಬರೆಯವುದಕ್ಕೆ ಶುರುಮಾಡ್ತಾರೆ ಅಂದುಕೊಂಡರೂ, ಅದು ರಾತ್ರೋರಾತ್ರಿ ಆಗಿಬಿಡುವ ಸಂಗತಿಯಲ್ಲ.

ಇಲ್ಲಿ ಭಟ್ಟರೊಂದಿಗೆ ಯಾರು ಹೋದರು ಎಂಬ ಸಂಖ್ಯೆ, ಎಷ್ಟು ಕಾಲಮ್ಮುಗಳು ನಿಂತುಹೋದವು ಎಂಬ  ಲೆಕ್ಕಾಚಾರವೇ ವಿಜಯ ಕರ್ನಾಟಕದ ಭವಿಷ್ಯದ ಗೆರೆಗಳನ್ನು ಬರೆದುಬಿಡುತ್ತದೆ ಎಂದು ಭಾವಿಸುವುದು ಹಾಸ್ಯಾಸ್ಪದ. ಒಂದು ದಶಕದಿಂದ ಅನ್ನ ಹಾಕಿದ, ಬೆಳೆಯಲು ಜಾಗ ಕೊಟ್ಟ ಸಂಸ್ಥೆಯನ್ನು ಬಿಟ್ಟಾಗ, ಅದೇ ಸಂಸ್ಥೆಯು ಕಾಲಮ್ಮುಗಳಿಲ್ಲದೆ ಮುಳುಗಿಹೋಗಲಿ ಎಂದು ಶಪಿಸುವುದು ಅಪ್ಪಟ ಕುತ್ಸಿತ ಮನೋಭಾವವಲ್ಲದೆ ಮತ್ತೇನೂ ಅಲ್ಲ. ಉಂಡ ಮನೆಯ ಗಳವನ್ನು ಎಂದಾದರೂ ಎಣಿಸಬಹುದೆ?

ಕಳೆದ ವರ್ಷ ಕನ್ನಡಪ್ರಭವನ್ನು ಅದನ್ನು ಸಾಕಷ್ಟು ಚೆನ್ನಾಗಿಯೇ ಬೆಳೆಸಿದ್ದ ರಂಗನಾಥ, ರವಿ ಹೆಗಡೆಯವರು ಮತ್ತು ಎರಡು ಡಜನ್ ಸಿಬ್ಬಂದಿಗಳು ಬಿಟ್ಟು ಸುವರ್ಣ ನ್ಯೂಸ್ ಚಾನೆಲ್ ಸೇರಿದಾಗ ಆಗಿದ್ದೇನು? ಕನ್ನಡಪ್ರಭದಲ್ಲಿ ಇದ್ದ ಪಡ್ಡೆ ಹುಡುಗರು, ಹುಡುಗಿಯರು ಪಣ ತೊಟ್ಟಂತೆ ಕನ್ನಡಪ್ರಭದ ಸುದ್ದಿ ಮೌಲ್ಯವನ್ನು ಬೆಳೆಸಿದರು. ತಾರಾಮೌಲ್ಯ ಎನ್ನುವುದೊಂದು ಭ್ರಮೆ ಎಂಬ ಕಟು ವಾಸ್ತವವನ್ನು ತೋರಿಸಿಕೊಟ್ಟವರೇ ಕನ್ನಡಪ್ರಭದ ತಂಡದವರು. ಅದರ ಪರಿಣಾಮವಾಗೇ ಕನ್ನಡಪ್ರಭದ ಓದುಗರ ಸಂಖ್ಯೆ ಶೇ. ೩೦ರಷ್ಟು ಬೆಳೆಯಿತು. ಈ ಪ್ರಮಾಣದ ಏರುಗತಿ ಕನ್ನಡಪ್ರಭ ಇತಿಹಾಸದಲ್ಲೇ ಒಂದು ದಾಖಲೆಯೇ ಇರಬಹುದು. ಅಂಥ ಹುಡುಗರನ್ನು ಬೆಳೆಸಿದ ಸಂಪಾದಕ ಶಿವಸುಬ್ರಹ್ಮಣ್ಯ ರಾಜ್ಯ ಪ್ರಶಸ್ತಿ ತಿರಸ್ಕರಿಸಿದರು ಅನ್ನೋದೂ ಒಂದು ದಾಖಲೆ. (ಈಗ ಸುವರ್ಣ ನ್ಯೂಸ್‌ನ ಸ್ಥಿತಿ ಹೇಗಿದೆ ಎಂದು ವಿಮರ್ಶಕಿಗೆ ಗೊತ್ತಿಲ್ಲ; ಬಡಪಾಯಿ ವಿಮರ್ಶಕಿಯು ಇನ್ನೂ ಮುದ್ರಣ ಮಾಧ್ಯಮದಲ್ಲೇ ಇದ್ದಾಳೆ. ಹಾಗೆ ಅನುಕೂಲವೇ ಆಗಿದ್ದರೆ ಒಳ್ಳೇದೇ ಬುಡಿ).  

ವಿಜಯ ಕರ್ನಾಟಕವನ್ನು ವಿಶ್ವೇಶ್ವರ ಭಟ್ಟರು ಸೇರಿದಾಗ ಇದ್ದ ಪ್ರಸರಣ ಸಂಖ್ಯೆ ಈಗ ಎಷ್ಟೆಲ್ಲ ಏರಿತ್ತು, ಅದಕ್ಕೆ ಅವರೇ ಕಾರಣ ಎನ್ನುವುದಾದರೆ, ಇತ್ತೀಚೆಗೆ ಅದರ ಓದುಗರ ಸಂಖ್ಯೆಯ ಏರುಗತಿಯ ಕುಸಿತ, ಪ್ರಸರಣ ಸಂಖ್ಯೆ ಇಳಿದಿದ್ದಕ್ಕೂ ಯಾರೆಲ್ಲ ಕಾರಣ ಎನ್ನುವುದನ್ನೂ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಯಶಸ್ಸಿಗೆ ಮಾತ್ರ ನಾನು, ನನ್ನ ನೆಚ್ಚಿನ ತಂಡ ಹೊಣೆ, ವಿಫಲತೆಗೆಲ್ಲ ಮ್ಯಾನೇಜ್‌ಮೆಂಟ್ ಮತ್ತು ಇತರರು ಕಾರಣ ಎನ್ನುವುದು ಸಿಬ್ಬಂದಿಗಳ ಹಳೆ ಸೂತ್ರ ಬಿಡಿ!

ಭಟ್ಟರು, ಪ್ರತಾಪ ಸಿಂಹರಂತ ಘಟಾನುಘಟಿಗಳೇ ವಿಜಯ ಕರ್ನಾಟಕದಲ್ಲಿ ಬರೆಯುತ್ತಿಲ್ಲ ಎಂದು ಪ್ರಸರಣ ಸಂಖ್ಯೆ ವಿಪರೀತ ಕುಸಿಯುತ್ತಿದ್ದರೆ ಶ್ರೀವತ್ಸ ಜೋಶಿಯವರ ಕಾಲಂ ನಿಲ್ಲಿಸೋದ್ರಿಂದ ಏನಾದೀತು? ಇನ್ನು ಶ್ರೀವತ್ಸ ಜೋಶಿಯವರಿಗೆ ಅವರದೇ ನಿಲುವುಗಳಿವೆ. ಅವರೆಂದೂ ಯಾವ ವಿಷಯಗಳಿಗೂ ಸುಮ್ಮನೆ, ಚರ್ಚಿಸದೆ ಒಪ್ಪಿಕೊಂಡವರಲ್ಲ. ಹಿಂದೆ ವಿಮರ್ಶಕಿಯನ್ನೂ ಅವರು ಸೀರಿಯಸ್ಸಾಗಿ ಕಿಚಾಯಿಸಿದ್ದರು. ಅದೇನೇ ಇರಲಿ, ಅವರೊಬ್ಬ ಒಳ್ಳೆಯ, ಸಮಚಿತ್ತದ ಬರಹಗಾರ ಅನ್ನೋದನ್ನ ಒಪ್ಪಿಕೊಳ್ಳಬಾರದೆ?

ಇಷ್ಟಾಗಿ, ಇದನ್ನೆಲ್ಲ ಪ್ರತಾಪಸಿಂಹರ ಗೋಡೆಯಲ್ಲೇ ಕಾಣುತ್ತೇವೆಯೇ ಹೊರತು, ಭಟ್ಟರು ಅವರೇ ಹೇಳಿದಂತೆ ಮೌನಕ್ಕೆ ಶರಣಾಗಿದ್ದಾರೆ.  ಜೋಶಿ, ಭಟ್ಟರು ಮತ್ತು ದಟ್ಸ್‌ಕನ್ನಡದ ಶ್ಯಾಮ್ ನಡುವಣ ಸಂಭಾಷಣೆಯನ್ನು ಜೋಶಿ ಉಲ್ಲೇಖಿಸಿದರೆ ಅದನ್ನು ಪ್ರತಾಪಸಿಂಹ ಅಲ್ಲಗಳೆಯುತ್ತಿದ್ದಾರೆ. ಶ್ರೀವತ್ಸ ಜೋಶಿಯವರಿಗೂ, ಭಟ್ಟರಿಗೂ ನಡೆದ `ಮೌನ ಸಂಭಾಷಣೆ’ ಯಾಕೆ ಪ್ರತಾಪಸಿಂಹರಿಗೆ ಸಮ್ಮತವಲ್ಲ? ಹೀಗೆ ಬುಲ್ಲಿಯಿಂಗ್ ಮಾಡುವುದರಿಂದ ಏನಾದರೂ ಸಾಧನೆಯಾದೀತೆ? 

ಇನ್ನು ಲಲಿತಾ ಭಟ್ಟರು `ಟೈಮ್ಸ್ ಬಳಗದ ನಿಲುವಿಗೆ ವಿರೋಧ ವ್ಯಕ್ತಪಡಿಸಿ’ ಕಾಲಂಗಳನ್ನು ನಿಲ್ಲಿಸಲಾಗುತ್ತಿದೆ ಎಂದು ಬರೆದಿದ್ದಾರೆ. ಉನ್ನತ ವ್ಯಾಸಂಗಕ್ಕೆಂದು ರಾಜೀನಾಮೆ ಕೊಟ್ಟವರು ಭಟ್ಟರು; ಅವರಿಲ್ಲದೆ ನಾನಿಲ್ಲ ಎಂದು ಪತ್ರಿಕೆಯನ್ನು ಬಿಟ್ಟವರು ಪ್ರತಾಪಸಿಂಹರು. ಇಲ್ಲಿ ಟೈಮ್ಸ್ ಬಳಗದ ನಿಲುವು ಎಂದರೇನು? ರಾಜೀನಾಮೆಯನ್ನು ಅಂಗೀಕರಿಸಿದ್ದೆ? ಚುರುಮುರಿಗೂ ಗೊತ್ತಿಲ್ಲದ ಈ ನಿಲುವು ಲಲಿತಾ ಭಟ್ಟರಿಗೆ ಗೊತ್ತಿರೋದು ಮಜಾ ಸಂಗತಿ. ಇನ್ನು ಸ್ವಾಮಿನಿಷ್ಠೆ: ಅದನ್ನೂ ಪ್ರತಾಪಸಿಂಹರಿಂದ ಕಲಿಯಬೇಕೆಂದು ಶ್ರೀವತ್ಸ ಜೋಶಿಯವರಿಗೆ ಹೇಳಲು ಈ ಲಲಿತಾ ಭಟ್ಟರು ಯಾರು? ಈವರೆಗೂ ಶ್ರೀವತ್ಸರು ಸ್ವಾಮಿನಿಷ್ಠೆ ತೋರಿಸಿದ್ದರೆಂದು, ಈಗ ಯಾಕೋ ತೋರುತ್ತಿಲ್ಲವೆಂದು ವಿಶ್ವೇಶ್ವರ ಭಟ್ಟರು ಭಾವಿಸಿದ್ದಾರೆಂದು ಲಲಿತಾ ಭಟ್ಟರು ಹೇಳುತ್ತಿದ್ದಾರೆಂದು ನಾವೆಲ್ಲ ಭಾವಿಸಬೇಕೆ?

ಹೋಗಲಿ, ಈ ವಿಕ ಬಿಟ್ಟ ಭಟ್ಟರ ಬೆಂಬಲಿಗ ಕಾಲಮಿಸ್ಟರೆಲ್ಲ ಸೇರಿ ತಮ್ಮ ಕಾಲಮ್ಮುಗಳನ್ನು ಮತ್ತೊಂದು ಭಾರೀ ಪತ್ರಿಕೆ ಹೊರಬರೋವರೆಗೆ ಯಾವುದಾದರೂ ಬ್ಲಾಗಿನಲ್ಲಿ (ಪ್ರತಾಪಸಿಂಹರದ್ದೇ ವೆಬ್‌ಸೈಟ್ ಇದೆಯಲ್ಲ) ನಿಯಮಿತವಾಗಿ ಪ್ರಕಟಿಸಬಹುದಲ್ಲ? ಯಾಕೆ ಎಲ್ಲರೂ ರಜೆ ತೆಗೆದುಕೊಂಡವರ ಹಾಗೆ ಬರೆಯದೇ ಸುಮ್ಮನುಳಿದಿದ್ದಾರೆ? ಬರೆಯಬೇಡಿ ಎಂದು ಬೆದರಿಕೆ ಹಾಕುವುದಕ್ಕಿಂತ ಬ್ಲಾಗಿನಲ್ಲಿ ಬರೆಯಿರಿ ಎನ್ನುವುದು ಒಳ್ಳೆಯ, ಪರ್ಯಾಯವಲ್ಲವೆ? `ಕಾಲಂ ಬರೀರಿ ಸಾರ್’ ಎಂದು ಒಂದೇ ಸವನೆ ಗೋಗರೆಯುತ್ತ ಕಣ್ಣೀರಿಡುತ್ತಿರುವ ಓದುಗರಿಗೂ ಅನುಕೂಲಕರ.

ವಿಜಯ ಕರ್ನಾಟಕವು ಇಂಥ ಕಾಲಮಿಸ್ಟರಿಲ್ಲದೇ ಹೋದರೆ ಕುಸಿದೇ ಬಿಡುತ್ತದೆ ಎಂದು ಮಾತಾಡುವುದು, ಪತ್ರಿಕೆಯ ಹೂರಣವೇ ಖಾಲಿ ಎಂದು ಬೊಬ್ಬಿಡುವುದು ಅತೀ ಅವಸರದ ಮಾತು. ಕುಸಿಯಬಹುದು, ಇಲ್ಲದಿರಬಹುದು; ಅದಕ್ಕೆ ಕಾಲವೇ ಉತ್ತರ ಹೇಳುತ್ತದೆ. ಮೇಲಾಗಿ ವಿಜಯ ಕರ್ನಾಟಕದಲ್ಲಿ ಭಟ್ಟರೇ ಪ್ರೋತ್ಸಾಹಿಸಿದ, ಆದರೆ ಭಟ್ಟರ ಹಿಂದೆ ಹೋಗದ ಪತ್ರಕರ್ತರು, ನ್ಯೂಟ್ರಲ್ ಆಗಿದ್ದ ಪತ್ರಕರ್ತರು, ಸುದ್ದಿಮನೆಯಲ್ಲೂ ಸುದ್ದಿಯಾಗದೆ ತಮ್ಮಷ್ಟಕ್ಕೆ ತಾವು ಕೆಲಸ ಮಾಡಿಕೊಂಡಿರುವ ಸಿಬ್ಬಂದಿಗಳೂ ಇದ್ದಾರೆ. ಪತ್ರಿಕೆಗೆ ಸ್ಥಾನ, ಮಾನ, ಪ್ರಸರಣದ ಖ್ಯಾತಿ ಬಂದಿದ್ದರೆ ಅದಕ್ಕೆ ಈ ಎಲ್ಲ ಸಿಬ್ಬಂದಿಗಳು, ಪ್ರಸರಣ ವಿಭಾಗದ ಸಿಬ್ಬಂದಿಗಳು, ಜಾಹೀರಾತು ವಿಭಾಗದವರೂ ಸಮವಾಗಿ ಕಾರಣರು.

ಪತ್ರಿಕೋದ್ಯಮದಲ್ಲಿ ಏನೇ ಹೆಸರಿರಲಿ, ವರ್ಷಕ್ಕೊಮ್ಮೆ ಆಸ್ತಿ ವಿವರ ಪ್ರಕಟಿಸುತ್ತಿರೋ ರವಿ ಬೆಳಗೆರೆಯವರು, ಆಸ್ತಿಯನ್ನು ಸರ್ಕಾರದಿಂದಲೇ ಪಡೆದ ಸುದ್ದಿಯು ಎಲ್ಲೂ ಪ್ರಕಟವಾಗಕೂಡದು ಎಂದು ಭಾವಿಸುವ ಪತ್ರಕರ್ತರಿಗಿಂತ ಉತ್ತಮ. ಅದರರ್ಥ ರವಿಯವರ ಎಲ್ಲ ಕೃತ್ಯಗಳೂ ಸಮರ್ಥನೀಯ ಎಂದಲ್ಲ. ಅವರು ಕುಡಿದಿದ್ದಕ್ಕೂ ಎಷ್ಟೋ ಸಲ ಖಾಸ್‌ಬಾತ್ ಬರೆದಿದ್ದಾರೆ; ಕುಡಿತ ಬಿಟ್ಟಿದ್ದಕ್ಕೂ ಬರೆದಿದ್ದಾರೆ. ಖುಷವಂತಸಿಂಗರನ್ನು ಮನಸಾರೆ ಅನುಸರಿಸೋ ಇಬ್ಬರೇ ಕನ್ನಡದ ಪತ್ರಕರ್ತರಲ್ಲಿ ಅವರೂ ಒಬ್ಬರು!

ವಿಜಯ ಕರ್ನಾಟಕವನ್ನು ವಿಮರ್ಶಕಿ ಸಾಕಷ್ಟು ಸಲ ಟೀಕಿಸಿದ್ದಾಳೆ. ಅದರರ್ಥ ವಿಜಯ ಕರ್ನಾಟಕ ಮುಳುಗಿಹೋಗಬೇಕೆಂದಲ್ಲ; ನಂಬರ್ ೧ ಪತ್ರಿಕೆಯು ತನ್ನ ಕರ್ತವ್ಯಗಳನ್ನು ಮರೆಯಬಾರದು ಅಂತ ವಿಮರ್ಶಕಿ ಭಾವಿಸಿ ಬ್ಲಾಗಿಸಿದ್ದಳು. ಮುಂದೆಯೂ ವಿಜಯ ಕರ್ನಾಟಕದ ಮೇಲೆ ವಿಮರ್ಶಕಿಯ ವಾರೆನೋಟ ತಪ್ಪಿದ್ದಲ್ಲ ಬುಡಿ!

ಕಾಲಮಿಸ್ಟರು ಮಾತ್ರ ವಿಕ ಬಿಡಿ ಅಂತ ಪ್ರತಾಪಸಿಂಹ ಯಾಕೆ ಹೇಳುತ್ತಿದ್ದಾರೆ? ವಿಜಯ ಕರ್ನಾಟಕದ ಸಿಬ್ಬಂದಿಗಳು ಲೆಕ್ಕಕ್ಕಿಲ್ಲವೆ? ನೀವು ಸರಿಯಾಗಿ ನೋಡಿದರೆ, ಪ್ರತಾಪರ ಹಾಗೆ ದೀರ್ಘಕಾಲದಿಂದ ವಾರಕ್ಕೊಂದು ಕಾಲಂ ಬರೆದೂ ಫೇಸ್ ಬುಕ್, ಆರ್ಕುಟ್‌ಗಳಲ್ಲಿ ರಾರಾಜಿಸುತ್ತಿರೋ ವಿಜಯ ಕರ್ನಾಟಕದ ಪತ್ರಕರ್ತರ ಸಂಖ್ಯೆ ವಿರಳ.

ಪ್ರತಾಪಣ್ಣ, ನಿಂಗೆ ಈ ಬ್ಲಾಗ್ ಓದಿ ಬೇಜಾರಾದ್ರೆ ಕ್ಷಮಿಸಣ್ಣ; ನಂಗೆ ಕಾನೂನು ವಿಚಾರ ಗೊತ್ತಿಲ್ಲ. ಈ ಥರಥರ ಚಳೀಲಿ ಇನ್ನೂ ನಡುಗೋ ಥರ ನಂಗೂ ಇಂಜಕ್ಷನ್ ಕೊಟ್ಟುಬುಟ್ಟೀಯ…. ಬ್ಯಾಡ ಕಣಣ…! ನೀನು ಶ್ರೀವತ್ಸ ಜೋಶಿಯವರನ್ನ ಬ್ಲಫ್ ಪಾರ್ಟಿ ಅಂತ ಕರೀತೀಯಲ್ಲ ಇಂಟರ್‌ನೆಟ್‌ನಲ್ಲಿ…. ಅದೇನು ಇಂಜಕ್ಷನ್‌ಗೆ ಅನರ್ಹವಾ?

ಶ್ರೀವತ್ಸ ಜೋಶಿಯವರು ತಮ್ಮ ಅಂಕಣದ ಈ ಮೈಲ್ ಜೊತೆಗೆ ಕಳಿಸಿರಬಹುದಾದ ಇನ್ನೊಂದು ಪತ್ರವು ವಿಮರ್ಶಕಿಗೆ ಸಿಕ್ಕಿಲ್ಲ. ಹೀಗಾಗಿ, ಆ ಪತ್ರದ ಸಾರಾಂಶವೇನು, ಅದರಲ್ಲಿ ಜೋಶಿಯವರು ಅಂಕಣ ನಿಲ್ಲಿಸುತ್ತಿದ್ದೇನೆ ಎಂದು ಪ್ರಕಟಿಸಿದ್ದಾರೆಯೆ? – ಗೊತ್ತಿಲ್ಲ.

ವಿಜಯ ಕರ್ನಾಟಕವನ್ನು ಕಟ್ಟಿ ಬೆಳೆಸಿದ್ದು ಓದುಗರು; ಆ ಓದುಗರಲ್ಲಿ ಹಲವು ಬಿಟ್ಟುಹೋದವರ ಅಭಿಮಾನಿಗಳಿರಬಹುದು; ಅವರು ಆಕ್ರೋಶ ವ್ಯಕ್ತಪಡಿಸಲೂಬಹುದು. ಆದರೆ ಅದೊಂದು ಒತ್ತಡ ತಂತ್ರವಾಗಿ ಭಟ್ಟರ ಕಾಲದಲ್ಲಿ ಕಾಲಂ ಬರೆಯಲು ಆರಂಭಿಸಿದವರೆಲ್ಲರೂ ನಿಲ್ಲಿಸಬೇಕು ಎಂದು ಬೆದರಿಕೆ ಹಾಕುವುದು ಸರಿಯಲ್ಲ.

ಮನೆಯಲ್ಲಿ ಜಗಳ ಇರಬಹುದು. ಆದರೆ ಉಂಡ ಮನೆಯ ಗಳ ಎಣಿಸುವುದು ದುರುಳ ಚಿಂತನೆ.

 

Advertisements

10 Responses to “ಸುದ್ದಿ ಮನೆ ವ್ಯಥೆ : ವಿಜಯ ಕರ್ನಾಟಕವೇನು ಉಂಡೆಸೆವ ಬಾಳೆ ಎಲೆಯೆ?”

 1. vithalrao Kulkarni Malkhed(GLB) Says:

  gouri akka modalind nee psuedo secular vichardaki…adakka ninage ps hagu vb andar aagi baralla…avar ibbaralli Quality iruvadu sulla alla..adakka ninage hotte kichcha aste …. !!!
  khushvant rannu anusariso innobba lekhak andar avaru lankesh…

 2. gola Says:

  pratapavannu torisuvvaro, patrikadharmave tamma vishva endu bhaavisuvvarige nijavada patrikadharma enembude maretuhogide. ivaru ondoovare roopayiya vijaykarnatakada ratenindaagi tamma lekhanagala readershipbandid nirlakshsiddare.times group 125varshdida ide.aadrinda vkya ee columnistgalu hodre aa columnistgalu bartaare.it is routine for times. ee roudigala ransom nadeyodilla. enendre vk was dominated by one particular sect of a community.but communities are so many.
  KEEP IT UP.@ TIMES BETTR LATE THAN NEVER

 3. ashoshettar Says:

  ಪ್ರಿಯ ವಿಮರ್ಶಕಿ,
  ನೀವು ಶ್ರೀವತ್ಸ್ ಜೋಷಿಯವರ ಫೇಸ್ಬುಕ್ ಪೇಜಿನಲ್ಲಿ ಜಯಕುಮಾರ ಚಂದರಡ್ಡಿ ದೊಡ್ಡಮನಿ ಅವರ ಪೋಸ್ಟ್ ನೋಡಿದಂತಿಲ್ಲ.ಜೋಷಿಯವರು ವಿಜಯ ಕರ್ನಾಟಕದಲ್ಲಿ ತಮ್ಮ ಅಂಕಣ ಮುಂದುವರಿಸುವ ಕುರಿತು ದೃಢವಾಗಿದ್ದಂತಿದೆ.

 4. Arna Pandith Says:

  Nijavaagi Aadru Vishweshawar Bhat Raajiname kottiddu yaaake?

 5. manasibhat Says:

  ಜರ್ನಲಿಸಂನಲ್ಲಿ ವೌಲ್ಯಗಳು ಮುಖ್ಯ. ವ್ಯಕ್ತಿ ನಿಷ್ಠೆ ಮುಖ್ಯ ಅಲ್ಲ. ಭಾರತದ ಜರ್ನಲಿಸಂನಲ್ಲಿ ಎಂತೆಂಥೋರೋ ಆಗಿ ಹೋಗಿದ್ದಾರೆ. ಯಾರೂ ಸೈಕೋಫ್ಯಾನ್ಸಿ ಭಟ್ಟಂಗಿಗಳನ್ನು ಇಟ್ಟುಕೊಂಡಿರಲಿಲ್ಲ. ಹಿಂದೆ ಎಂಜಿಆರ್ ಸತ್ತನೆಂದು ನೂರಾರೂ ಹುಚ್ಚು ಅಭಿಮಾನಿಗಳು ವಿಷ ಕುಡಿದು ಆತ್ಮ ಹತ್ಯೆ ಮಾಡಿಕೊಂಡರು. ಹಾಗೆಯೇ ಈಗ ನಮ್ಮ ಭಟ್ಟಂಗಿಗಳ ಮನಸ್ಥಿತಿಯೂ ಅಂತಹದ್ದೇ. ಇವರ್ಯಾರು ಪ್ರಬುದ್ಧರಲ್ಲ. ವಿವೇಕವಂತರು, ಪ್ರಬುದ್ಧರು ಈ ರೀರ್ತಿ ವರ್ತಿಸಲು ಸಾಧ್ಯವಿಲ್ಲ. ಮನೋವಿಜ್ಞಾನದ ಪ್ರಕಾರ ಸೈಕೋಫ್ಯಾನ್ಸಿಗಳು ಹುಟ್ಟಿಕೊಳ್ಳುವುದು ಮತ್ತು ಅವರನ್ನು ಕಟ್ಟಿಕೊಳ್ಳುವುದು ಆತ್ಮರತಿಯ ಸಲುವಾಗಿ. ತಮ್ಮ ಮೇಲೆ ತಮಗೆ ವಿಶ್ವಾಸ ಇಲ್ಲದವರು ಅಥವಾ ತಾವೊಬ್ಬ ಸೂಪರ್ ಸ್ಟಾರ್ ನಂತೆ ಮೆರೆಯಬೇಕು ಎಂಬ ಹಂಬಲವುಳ್ಳವನು ಇಂತಹ ಸೈಕೋಫ್ಯಾನ್ಸಿಗಳ ಕೋಟೆಯನ್ನು ಕಟ್ಟುತ್ತಾ ಹೋಗುತ್ತಾನೆ. ಸೈಕೋಫ್ಯಾನ್ಸಿಗಳೂ ಆ ಕೋಟೆಯ ಮೂಲಕ ತಮ್ಮ ತಲೆಯ ಮೇಲೆ ತಾವೇ ಕಿರೀಟ ಇಟ್ಟುಕೊಂಡು ಮೆರೆಯುತ್ತಾರೆ. ಇದೊಂದು ಮನೋವ್ಯಾಧಿ.
  ಯಾವುದೇ ನೈಜ, ವೃತ್ತಿಪರ, ಸಿದ್ಧಾಂತ ಬದ್ಧ ಪತ್ರಕರ್ತ ತನ್ನನ್ನು ತಾನು ಸೂಪರ್ ಬೀಯಿಂಗ್‌ ಎಂದು ಭಾವಿಸುವುದಿಲ್ಲ. ತೀರಾ ಸರಳರಾಗಿಯೇ ಇರುತ್ತಾರೆ. ವೈಎನ್ಕೆ, ಟಿಎಸ್ಸಾರ್, ಖಾದ್ರಿ, ಸತ್ಯ, ಶ್ಯಾಮರಾವ್, ಟಿ.ಜೆ.ಎಸ್‌.ಜಾರ್ಜ್‌, ಅರುಣ್‌ಶೌರಿ, ಎಂ.ವಿ.ಕಾಮತ್‌ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ. ಎಲ್ಲಾ ಭಟ್ಟರ ನಿಷ್ಠ ಕಾಲಮಿಷ್ಟರು ರಾಜಿನಾಮೆ ಪತ್ರ ಬರೆದು ಬಿಸಾಕಬೇಕು ಎನ್ನುವ ಮತ್ತು ಭಟ್ಟರಿಗಾಗಿಯೇ ತನ್ನ ಪೆನ್ನು ಝಳಪಿಸುತ್ತೇನೆ ಎಂಬ ಮನಸ್ಥಿತಿ ರೋಗಿಷ್ಠವಲ್ಲದೆ ಬೇರೇನೂ ಅಲ್ಲ. ಇಂತಹವರಿಗಾಗಿ ವಿಮರ್ಶಕಿ ಸ್ಪೇಸ್‌ ವೇಸ್ಟ್ ಮಾಡುತ್ತಿರುವುದು ನಿಜಕ್ಕೂ ಖೇದಕರ. ಗಾಯಗೊಂಡ ಶ್ವಾನಗಳು ಮತ್ತೆ ಮತ್ತೆ ಗಾಯವನ್ನೇ ನೆಕ್ಕುತ್ತಲೇ ಇರುತ್ತವೆ. ಬುದ್ಧಿವಂತರು ಗಾಯಕ್ಕೆ ಔಷಧಿ ಹಚ್ಚುತ್ತಾರೆ ಅಷ್ಟೇ.
  ಮಾನಸಿ ಭಟ್‌

 6. Veeru Says:

  namaskara kanakko.. nin article nalli ಸುದ್ದಿಮನೆಯಲ್ಲೂ ಸುದ್ದಿಯಾಗದೆ ತಮ್ಮಷ್ಟಕ್ಕೆ ತಾವು ಕೆಲಸ ಮಾಡಿಕೊಂಡಿರುವ ಸಿಬ್ಬಂದಿಗಳೂ ಇದ್ದಾರೆ. ಪತ್ರಿಕೆಗೆ ಸ್ಥಾನ, ಮಾನ, ಪ್ರಸರಣದ ಖ್ಯಾತಿ ಬಂದಿದ್ದರೆ ಅದಕ್ಕೆ ಈ ಎಲ್ಲ ಸಿಬ್ಬಂದಿಗಳು, ಪ್ರಸರಣ ವಿಭಾಗದ ಸಿಬ್ಬಂದಿಗಳು, ಜಾಹೀರಾತು ವಿಭಾಗದವರೂ ಸಮವಾಗಿ ಕಾರಣರು. annodu ishta aytu.. idu nijavada sangati. ಅದೇನೇ ಇರಲಿ, ಅವರೊಬ್ಬ ಒಳ್ಳೆಯ, ಸಮಚಿತ್ತದ ಬರಹಗಾರ annodu Joshi avara visyadalli nijavada maatu.. Hands off to u dear Vimarshaki…..

 7. Avinash Kannammanavar Says:

  ನಮಸ್ಕಾರಕ್ಕೌ,,

  ನೀ ಮತ್ತ ಭಾರಸಾಕ ಶುರುಹಚ್ಚಿದ್ದು ಭಾಳ ಖುಷಿ ಆತ್ ನೋಡಬೆ, ನೀ ಹೆಳಿದ್ದಕ್ಕೆಲ್ಲಾ ನಾ “ಹು೦” ಅ೦ತಿನಿ, ಅ೦ದ೦ಗ “ಖುಷವಂತಸಿಂಗರನ್ನು ಮನಸಾರೆ ಅನುಸರಿಸೋ ಇಬ್ಬರೇ ಕನ್ನಡದ ಪತ್ರಕರ್ತರಲ್ಲಿ ಅವರೂ ಒಬ್ಬರು!” ಆ ಇನ್ನೊಬ್ಬ ಪತ್ರಕತ೯ ಯಾರಬೆ??

  thanks for coming back,


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: