ಸುದ್ದಿ ಮಾಡೋದಕ್ಕೆ ೧೯ ವಿಧಾನಗಳು

ಡಿಸೆಂಬರ್ 22, 2010

೨೦೧೦ರಲ್ಲಿ ವಿವಿಧ ಬಗೆಯ ಸುದ್ದಿಗಳನ್ನು ಪತ್ರಿಕಾರಂಗ ಕಂಡಿದೆ. ಅಂಥ ೧೯ ವಿದ್ಯಮಾನಗಳು ಇಲ್ಲಿವೆ.

 1. ಹೈಟಿ ಭೂಕಂಪವಾದ ನಂತರ ಸಿ ಎನ್ ಎನ್ ಸುದ್ದಿ ಸಂಸ್ಥೆಯು ಒಂದು ಡಾಟಾಬೇಸ್ ರೂಪಿಸಿತು. ಇಲ್ಲಿ ಕಳೆದುಹೋದವರ, ತಪ್ಪಿಸಿಕೊಂಡವರ, ಕಾಣೆಯಾದವರ ಒಂದು ದೊಡ್ಡ ಜಾಲವೇ ಏರ್ಪಟ್ಟಿತು.  ನಾಗರಿಕ ಪತ್ರಿಕೋದ್ಯಮಕ್ಕೆ ಇದು ದೊಡ್ಡ ಕೊಡುಗೆ. ಬೇಕಾದ್ರೆ ಇಲ್ಲಿ ಕ್ಲಿಕ್ ಮಾಡಿ. ನೂರಾರು ಜನ ಸಂತ್ರಸ್ತರಿರೋ ಉತ್ತರ ಕರ್ನಾಟಕದ ಪ್ರವಾಹದ ಕಥೆಯಲ್ಲೂ ಇಂಥದ್ದೊಂದು ಯತ್ನವನ್ನು ಯಾವುದಾದರೂ ಪತ್ರಿಕೆ ಮಾಡಬಹುದಿತ್ತೋ ಏನೋ…
 2. ಫೇಸ್‌ಬುಕ್‌ನ ಬರಹವೇ ಒಂದು ದೊಡ್ಡ ಕಥೆಯಾಗಿದ್ದು ವಾಶಿಂಗ್ಟನ್ ಪೋಸ್ಟ್‌ನಲ್ಲಿ. ನಾನು ಪ್ರತಾಪಣ್ಣನ ಕಥೆಯನ್ನೂ ಫೇಸ್‌ಬುಕ್‌ನಿಂದ್ಲೇ (ಗೆಳೆಯರ ಸಹಾಯ ಪಡೆದು) ತೆಗೆದೆ! ವಾಶಿಂಗ್ಟನ್ ಪೋಸ್ಟ್‌ನ ವರದಿಗಾರ್ತಿ ಅಯಾನ್ ಶಪೀರಾ ಹೀಗೆ ಫೇಸ್ ಬುಕ್ ಎಂಟ್ರಿಗಳನ್ನೆಲ್ಲ ತನ್ನದೇ ಕಾಮೆಂಟ್ ಬರೆದು ಪ್ರಕಟಿಸಿ ಪತ್ರಿಕೋದ್ಯಮಕ್ಕೆ ಒಂದು ಒಳ್ಳೆ ಮುಖ ತಂದುಕೊಟ್ಟಿದ್ದಾಳೆ.
 3. ಇರಾಖ್ ಮತ್ತು ಅಫಘಾನಿಸ್ತಾನ ಯುದ್ಧದಲ್ಲಿ ಮಡಿದ ೨೦ಕ್ಕೂ ಹೆಚ್ಚು ದೇಶಗಳ ಆರು ಸಾವಿರಕ್ಕೂ ಹೆಚ್ಚು ಸೈನಿಕರ ಜನ್ಮತಾಣ, ಮರಣತಾಣ ಮತ್ತು ಸತ್ತ ದಿನಾಂಕವನ್ನು ನಕಾಶೆಯಲ್ಲಿ ನಮೂದಿಸುವ ಮೂಲಕ ಸಿ ಎನ್ ಎನ್ ಮತ್ತೊಂದು ಸುದ್ದಿಕಥೆ ಮಾಡಿದೆ. ಕಾರ್ಗಿಲ್ ನೆನಪಾಯಿತೆ?
 4. ಪಿಕ್ಟೊರಿ ಎಂಬುದು ಒಂದು ಫೋಟೋಬ್ಲಾಗ್. ಲಾರಾ ಬ್ರುನೋವ್ ಎಂಬಾಕೆ ರೂಪಿಸಿದ್ದು. ಸೀಕ್ರೆಟ್ಸ್ ಆಫ್ ಇನ್‌ಸ್ಪೈರಿಂಗ್ ವುಮೆನ್ ಅನ್ನೋದ್ರಿಂದ ಹಿಡಿದು ಚಿತ್ರವಿಚಿತ್ರ ಚಿತ್ರಕಥೆಗಳು ಇದರಲ್ಲಿವೆ.
 5. ನ್ಯೂಯಾರ್ಕ್ ಮ್ಯಾಗಜಿನ್‌ನಲ್ಲಿ ಛಾಯಾಚಿತ್ರಗಳ ಸ್ಲೈಡ್‌ಶೋ ಜನಪ್ರಿಯವಾಗಿದೆ. ಒಬ್ಬ ನೃತ್ಯಪಟುವಿನ ಎಲ್ಲ ಚಲನೆಗಳನ್ನೂ ಸ್ಲೈಡ್‌ಗಳ ಮೂಲಕ ಹಿಡಿದಿಡೋ ಈ ಫಾರ್ಮುಲಾ ಪತ್ರಿಕೋದ್ಯಮದ ಹೊಸ ಜಾಡು.
 6. ಅಮೆರಿಕಾದ ಒಂದೂಮುಕ್ಕಾಲು ಕೋಟಿ ಜನರ ಹಣಕಾಸು ಸ್ಥಿತಿಯನ್ನು ಬಿಂಬಿಸುವ ಆನ್‌ಲೈನ್ ನಕಾಶೆಗಳನ್ನು ಮಿಂಟ್ ಡಾಟ್‌ಕಾಮ್ ಪ್ರಕಟಿಸಿದೆ. ಯಾರ್‍ಯಾರು ಯಾವ್ಯಾವುದಕ್ಕೆ ಹಣ ಖರ್ಚು ಮಾಡ್ತಾ ಇದಾರೆ ಎಂದು ತೋರಿಸುವ ಈ ತಾಣ ಈಗ ತುಂಬಾ ಜನಪ್ರಿಯ.
 7. ಪ್ರೋಪಬ್ಲಿಕಾ ಅನ್ನೋದು ಸಮುದಾಯ ಪತ್ರಿಕೋದ್ಯಮದ ಇನ್ನೊಂದು ಪರ್ವ. ಈ ಸಂಸ್ಥೆಯು ಕತ್ರೀನಾ ಚಂಡಮಾರುತದ ಬಗ್ಗೆ ಮಾಡಿದ ಸುದ್ದಿಕಥೆಗಳು ಅತ್ಯಂತ ಸಮರ್ಪಕವಾಗಿದ್ದವು. ಈ ತಾಣದಲ್ಲಿ ಇಂಟರ್ ಆಕ್ಟಿವ್ ಟೈಮ್‌ಲೈನ್ ಕೂಡಾ ಇರುತ್ತದೆ.
 8. ಇತಿಹಾಸವನ್ನೇ ಚಿತ್ರಗಳ ಮೂಲಕ ದಾಖಲಿಸಿರುವ ಲೈಫ್ ಮ್ಯಾಗಜಿನ್ ಈಗ ಹಲವಾರು ಘಟನೆಗಳ, ವ್ಯಕ್ತಿಗಳ ಅಪರೂಪದ ಐತಿಹಾಸಿಕ ಕ್ಷಣಗಳ ಚಿತ್ರಮಾಲೆಯನ್ನು ಪ್ರಕಟಿಸಿ ತನ್ನ ವಿಶಿಷ್ಟತೆಯನ್ನು ಮೆರೆದಿದೆ.
 9. ಗ್ರೂಪನ್: ಇದು ಸುದ್ದಿಯ ತಾಣವಲ್ಲ. ಆದರೆ ತಾನು ಮಾರೋ ಕೂಪನ್‌ಗಳ ಬಗ್ಗೆ, ಖರೀದಿ ಮಾಡ್ತಾ ಇರೋ ವಸ್ತುಗಳ ಬಗ್ಗೆ ವಿವರ ಕೊಡೋದೇ ಈ ತಾಣದ ಕೆಲಸ. ಸುದ್ದಿಯಲ್ಲದ್ದನ್ನೂ ಜನ ಓದ್ತಾರೆ ಅನ್ನೋದಕ್ಕೇ ಗ್ರೂಪನ್ನೇ ಸಾಕ್ಷಿ.
 10. ಕತ್ರೀನಾ ಚಂಡಮಾರುತದ ನಂತರ ಏನಾಗಿದೆ ಎಂದು ಯು ಎಸ್ ಎ ಟುಡೇ ರೂಪಿಸಿದ ಈ ಚಿತ್ರಾವಳಿಯು ಇಡೀ ಸುದ್ದಿಯನ್ನು ದೃಶ್ಯವತ್ತಾಗಿ ನಿಮ್ಮ ಮುಂದಿಡುತ್ತದೆ. ಒಂಥರ ಕಾದಂಬರಿ ಓದಿದ ಹಾಗೆ ಆಗುತ್ತಂತೆ. ನೀವೂ ಪ್ರಯತ್ನಿಸಿ!
 11. ಡಾಟಾ ಮೈನಿಂಗ್ ಅನ್ನೋ ತಂತ್ರಜ್ಞಾನದ ಲಾಭವನ್ನು ಪಡೆಯೋ ಹಾದಿಯಲ್ಲಿ ಲಾಸ್ ಏಂಜಲಿಸ್ ಟೈಮ್ಸ್ ಮುನ್ನಡೆಯಲ್ಲಿದೆ. ಶಿಕ್ಷಕರ ರೇಟಿಂಗ್‌ನ್ನು ಅದು ಕೊಟ್ಟಿರೋ ರೀತಿಯೇ ಇದಕ್ಕೆ ಸಾಕ್ಷಿ. ತನ್ನ ಓದುಗರಿಗೆ ಡಿಜಿಟಲ್ ಲೈಬ್ರರಿ ಸೇವೆಯನ್ನು ಒದಗಿಸೋ ಈ ವಿದ್ಯಮಾನ ಪತ್ರಿಕೋದ್ಯಮಕ್ಕೆ ಹೊಸತು.
 12. ನೀವು ಇದನ್ನು ಪತ್ರಿಕೋದ್ಯಮ ಅಂತ ಕರೀತೀರೋ ಇಲ್ಲವೋ, ಗೊತ್ತಿಲ್ಲ. ಆದರೆ ಭಾರತದ ಹಲವಾರು ಪತ್ರಿಕೆಗಳೂ ಸೇರಿದಂತೆ ಪ್ರಪಂಚದ ಬಹುತೇಕ ಪತ್ರಿಕೆಗಳು ಸಬ್ ಎಡಿಟರ್‌ಗಳಿಗೆ ರಜೆ ಕೊಟ್ಟು ಪುಟಗಟ್ಟಳೆ ವಿಕಿಲೀಕ್ಸ್ ಸುದ್ದಿಗಳನ್ನು ದಿನಂಪ್ರತಿ ಪ್ರಕಟಿಸುತ್ತಿವೆ. ಸದ್ಯ ಈವರೆಗೆ ಅಮೆಝಾನ್ ಕಾಡಿನ ಪ್ರಮಾಣದ ಮಾಹಿತಿಯಲ್ಲಿ ಒಂದೆರಡು ಎಲೆಗಳು ಮಾತ್ರ ಉದುರಿವೆ ಅನ್ನಬಹುದು!! (ವಿಜಯ ಕರ್ನಾಟಕ, ಕನ್ನಡಪ್ರಭದಂಥ ಸುದ್ದಿ ಮಾಡುವ ಪತ್ರಿಕೆಗಳೂ ವಿಕಿಲೀಕ್ಸ್ ಸುದ್ದಿಗಳನ್ನು ನಿರ್ಲಕ್ಷಿಸಿರೋದು ವಾಸ್ತವ).
 13. ಕಳೆದ ಅಕ್ಟೋಬರಿನಲ್ಲಿ ವಾಶಿಂಗ್ಟನ್‌ನ ಒಂದು ನೈಟ್‌ಕ್ಲಬ್‌ನಲ್ಲಿ ಶೂಟಿಂಗ್ ನಡೆಯಿತು.  ಟ್ವೀಟ್‌ಗಳಿಂದಲೇ ಸಂಗ್ರಹಿಸಿ ಕೊಟ್ಟ ಈ ಸುದ್ದಿಯನ್ನು ನೋಡಿ. ಇದನ್ನು ಸ್ಟೋರಿಫಿಕೇಶನ್ ಅಂತ ಕರೀತಾರಂತೆ.
 14. ಒಂದು ಒಳ್ಳೆಯ ಚಿತ್ರವನ್ನು ಹಾಕಿ ಅದಕ್ಕೆ ತಕ್ಕಂತೆ ಓದುಗನೊಂದಿಗೆ ಸರಳವಾಗಿ ಹರಟೆ ಹೊಡೆಯುವ ರೀತಿಯಲ್ಲಿ ಇರೋ ಅಟ್ಲಾಂಟಿಕ್ ಟಂಬ್ಲರ್‌ನ ಈ ವೆಬ್‌ಸೈಟ್ ಧಾವಂತದ ಬದುಕಿಗೆ ಕೊಂಚ ತಡೆ ಹಿಡಿಯುತ್ತದೆ.
 15. ಬಿಪಿ ತೈಲ ಕಂಪೆನಿ ಗೊತ್ತಲ್ಲ? ಅದರ ತೈಲಸೋರಿಕೆಯೇ ದೊಡ್ಡ ಸುದ್ದಿಯಾಗಿ ವಿಶ್ವದಾದ್ಯಂತ ಸೋರಿ ಸಂಸ್ಥೆಗೆ ಭಾರೀ ಕೆಟ್ಟ ಹೆಸರು ತಂದಿತ್ತು. ಈಗ ಬಿಪಿ ಕಂಪೆನಿ ತನ್ನೆಲ್ಲ ೧೨ ತೈಲ ಕೊಳವೆಗಳನ್ನೂ ಆನ್‌ಲೈನ್ ವೀಕ್ಷಣೆಗೆ ತೆರೆದಿಟ್ಟು ಹೊಸ ಬಗೆಯ ಕಾರ್ಪೋರೇಟ್ ಜರ್ನಲಿಸಂಗೆ ದಾರಿ ಮಾಡಿಕೊಟ್ಟಿದೆ.
 16. ನಿರೂಪಣೆಯೇ ಇಲ್ಲದ ಒಂದು ಪುಟ್ಟ ವಿಡಿಯೋ ಮತ್ತು ಆಳವಾದ ವರದಿಗಾರಿಕೆಯನ್ನು ಬಿಂಬಿಸುವ ಬರಹ – ಇವುಗಳಿಂದ ಕೂಡಿದ `ಎ ಯಿಯರ್ ಎಟ್ ವಾರ್’ ಅನ್ನೋ ಈ ಪ್ರಾಜೆಕ್ಟ್ ಕೂಡ ಪತ್ರಕರ್ತರಿಗೆ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸೂಕ್ತವಾದ ಲಿಂಕ್.
 17. ನಾರ್ಥ್ ಕೆರೋಲಿನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರೂಪಿಸಿ `ಪವರಿಂಗ್ ಎ ನೇಶನ್’ ಅನ್ನೋ ಈ ಯೋಜನೆ ಕೂಡಾ ಒಂದು ಮಾದರಿಯೇ. ಮಲ್ಟಿಮೀಡಿಯಾ ಸಂದರ್ಶನಗಳು, ವರದಿಗಳು, ಇಂಟರ್ ಆಕ್ಞಿವ್ ಆಟಗಳು ಈ ತಾಣದ ವಿಶೇಷ.
 18. ಅಮೆರಿಕಾದ ಕಾಂಗ್ರೆಸ್  ಅಭ್ಯರ್ಥಿಗಳ ಹಣಕಾಸು ವೆಚ್ಚಗಳ ಹೇಳಿಕೆಗಳ ವಿವರಗಳನ್ನೇ ಸೂಕ್ತವಾಗಿ ಡಿಜಿಟಲ್ ಲೈಬ್ರರಿ ಥರ ಕೊಟ್ಟ ಟೆಕ್ಸಾಸ್ ಟ್ರಿಬ್ಯೂನ್‌ನ ಈ ಯೋಜನೆ ಭಾರತಕ್ಕೂ ಹೇಳಿ ಮಾಡಿಸಿದ ಮಾದರಿ ಅಲ್ಲವೆ?
 19. ಎಲ್ಲಕ್ಕಿಂತ ಭಾರತಕ್ಕೆ ಮುಖ್ಯವಾಗೋದು ಔಟ್‌ಲುಕ್ ಪತ್ರಿಕೆಯು ರಾಡಿಯಾ ಟೇಪ್‌ಗಳನ್ನು ಸಾಲು ಸಾಲಾಗಿ ಪ್ರಕಟಿಸ್ತಾ ಇರೋದು. ಬಹುಶಃ ಇಂಥದ್ದೊಂದು ಬೃಹತ್ ತನಿಖಾ ಪ್ರಕರಣ ಭಾರತದಲ್ಲಿ ನಡೆದಿದ್ದರ ಮತ್ತು ಬಹಿರಂಗವಾಗಿದ್ದರ ದಾಖಲೆ ಇಲ್ಲ. ಇದ್ದರೆ ತಿಳಿಸಿ.

 ವಿಮರ್ಶಕಿಯು ತನಗೆ ತಿಳಿದ ಮಟ್ಟಿಗೆ ಇಂಥ ವಿಚಾರಗಳನ್ನು ಬರೆದು ಪ್ರಕಟಿಸೋ ಕೆಲಸ ಮಾಡ್ತಾನೇ ಇರ್‍ತಾಳೆ. ಅದರ ಉಪಯೋಗ ಮಾಡಿಕೊಳ್ಳೋದು ನಿಮಗೆ ಬಿಟ್ಟಿದ್ದು.

 

Advertisements

5 Responses to “ಸುದ್ದಿ ಮಾಡೋದಕ್ಕೆ ೧೯ ವಿಧಾನಗಳು”

 1. sunaath Says:

  ನೀವು ಸೂಚಿಸಿದ ವಿದೇಶಿ ಜಾಲತಾಣಗಳನ್ನು ವೀಕ್ಷಿಸಿದ ಬಳಿಕ ಅಲ್ಲಿಯ ಮುದ್ರಣಮಾಧ್ಯಮ ಹಾಗು ಅಂತರ್ಜಾಲ ಮಾಧ್ಯಮಗಳ ಹರವನ್ನು ಕಂಡು ಬೆರಗಾಯಿತು.
  ಧನ್ಯವಾದಗಳು.

 2. sahana Says:

  Really thanks aunty. I think you are a university lecture/reader/professor. Most journalism professors speak of US & UK media. I think u r like one of them.
  And, VK or KP scribe are not able to read, understand, analyze and report/reproduce it. Most of them don’t knwo kannada (sic) English. So one cant expect it.
  our is page filling journalism bla bla bla

 3. harsha Says:

  Very usefull hints and links.. Thank you.

 4. Veeru Says:

  hu antu.. intu post modke suru madideyallakka.. super bidu..


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: