ಭಾರತೀಯ ಮೀಡಿಯಾದ ಇಂಟರ್ ನ್ಯಾಶನಲ್ ನ್ಯೂಸ್ : ಕನ್ನಡದಲ್ಲಿ ಕಾಲಮಿಸ್ಟರ ನ್ಯೂಸ್ !

ಡಿಸೆಂಬರ್ 24, 2010

ಭಾರತದ ಮೀಡಿಯಾ ಮಂದಿಗೆ ಕ್ರಿಕೆಟ್ ಗಿಂತ ವ್ಯಕ್ತಿಪೂಜೆಯೇ ಮುಖ್ಯ  ಎಂದು ದಕ್ಷಿಣ ಆಫ್ರಿಕಾದ ಸೂಪರ್ ಸ್ಪೋರ್ಟ್ಸ್ ವೆಬ್ ಸೈಟ್ ಬರೆದಿದೆ. ಹಾಗೆಯೇ ಬರ್ಖಾ ದತ್ ಎಂಬ ಪತ್ರಕರ್ತೆಯೇ ಈಗ ಭಾರತದಲ್ಲಿ ಸುದ್ದಿಯಾಗಿದ್ದಾಳೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ಬರೆದಿದೆ. ಎರಡೂ ನಮ್ಮ ಮಾಧ್ಯಮದ ಬಗ್ಗೆ ಈ ವಾರ ಬಂದಿರುವ  ಅಂತಾರಾಷ್ಟ್ರೀಯ ಸುದ್ದಿಗಳು!

ಭಾರತದ ಮೀಡಿಯಾ ಮಂದಿಗೆ ಕ್ರಿಕೆಟ್ ಗಿಂತ ವ್ಯಕ್ತಿಪೂಜೆಯೇ ಮುಖ್ಯ  ಎಂದು ದಕ್ಷಿಣ ಆಫ್ರಿಕಾದ ಸೂಪರ್ ಸ್ಪೋರ್ಟ್ಸ್ ವೆಬ್ ಸೈಟ್ ಕಟುವಾಗಿ ಟೀಕಿಸಿರೋದು ಸಚಿನ್ ತೆಂಡೂಲ್ಕರ್ 50ನೇ ಶತಕವನ್ನು ಬಾರಿಸಿದಾಗ. ದಕ್ಷಿಣ  ಆಫ್ರಿಕಾ ಪ್ರವಾಸದಲ್ಲಿರೋ ಭಾರತದ ಮಾಧ್ಯಮದವರರಲ್ಲಿ ಮುದ್ರಣ ಮಾಧ್ಯಮದಿಂದ ಬಂದವರು ಬೆರಳೆಣಿಕೆಯಷ್ಟು ಮಂದಿ. ಆದರೆ ಟಿವಿ ಮಾಧ್ಯಮದಿಂದ ಹಲವರು ಬಂದಿದ್ದರು. ಅವರಲ್ಲೂ ಕ್ರೀಡಾ ಚಾನೆಲ್ ಗಳಲ್ಲದೇ ಬೇರೆ ಚಾನೆಲ್ ಗಳವರೂ ಇದ್ದಾರೆ ಎಂದು ಲೆಕ್ಕ ಕೊಟ್ಟಿರುವ     ಈ ವರದಿಯು ಮಾಧ್ಯಮದ ವರ್ತನೆಯನ್ನು ಹಿಗ್ಗಾಮುಗ್ಗಾ ಟೀಕಿಸಿದೆ. ಆಟದ ಮೈದಾನದಲ್ಲಿ ಏನು ನಡೆಯಿತು ಅನ್ನೋದಕ್ಕಿಂತ   ಇವರಿಗೆ ವ್ಯಕ್ತಿಯೇ ಮುಖ್ಯ   ಎಂದೆಲ್ಲ   ಈ ವರದಿ ಕಟಕಿಯಾಡಿದೆ.

ಜಾಕ್ ಕ್ಯಾಲಿಸ್ ಗೆ ಎದುರಾದ ಮೊದಲ ಪ್ರಶ್ನೆ ಪಂದ್ಯವನ್ನು ಗೆದ್ದ ಬಗ್ಗೆಯೂ ಅಲ್ಲ;   ಅವರ ಮೊದಲ ಡಬಲ್ ಸೆಂಟಚುರಿಯ ಬಗ್ಗೆಯೂ ಅಲ್ಲ, ಬದಲಿಗೆ ಸಚಿನ್ ಶತಕದ ಸಮಯದಲ್ಲಿ ಟೀವಿಯಲ್ಲಿ ನೀವು ಚಪ್ಪಾಳೆ ತಟ್ಟಿದ ಹಾಗೆ ಕಾಣಲಿಲ್ಲವಲ್ಲ  ಎಂಬ ಪ್ರಶ್ನೆ.  `ಇಲ್ಲಾರೀ, ನಾನು ಚಪ್ಪಾಳೆ ತಟ್ಟಿದೆ. ಆಗ ಟಿವಿ ಚಾನೆಲ್ ಗಳಲ್ಲಿ ಸಚಿನ್ ರನ್ನೇ ತೋರಿಸಿದ್ದರು. ಟಿವಿ ಚಾನೆಲ್ ಗಳ ಕ್ಯಾಮೆರಾ ನನ್ನ ಕಡೆಗೆ ತಿರುಗೋ ಹೊತ್ತಿಗೆ ನಾನು ಚಪ್ಪಾಳೆ ತಟ್ಟೋದನ್ನು ನಿಲ್ಲಿಸಿದ್ದೆ ಅಂತ ಕಾಣ್ಸುತ್ತೆ’ ಎಂದು ಕ್ಯಾಲಿಸ್ ಹೇಳಿದರಂತೆ. `ಸಚಿನ್ ದು ನಿಜಕ್ಕೂ ಅದ್ವಿತೀಯ ಸಾಧನೆ. ಆದರೆ ದಕ್ಷಿಣ  ಆಫ್ರಿಕಾದವರೂ ಸಾಕಷ್ಟು ಸಾಧನೆ ಮಾಡಿದ್ದಾರೆ, ಅದನ್ನೂ ಗಮನಿಸಬೇಕು ಎಂದು ಕ್ಯಾಲಿಸ್ ಹೇಳಹೊರಟರಂತೆ.

ಭಾರತೀಯ ಮಾಧ್ಯಮದೆದುರು ಮಾತಾಡೋದಕ್ಕೆ ಸಚಿನ್ ಗೂ ಹಿಂಜರಿಕೆ ಇದ್ದಂತೆ ಕಂಡಿತು ಎಂದು ಈ ವೆಬ್ ಸೈಟ್ ಹೇಳಿದೆ. ಆದರೆ ಧೋನಿ ಮಾತ್ರ ತುಂಬಾ ಚೆನ್ನಾಗಿ ಮ್ಯಾನೇಜ್ ಮಾಡ್ತಾರೆ ಎಂದು ಅದು ಪ್ರಶಂಸಿಸಿದೆ.

ಅದಿರಲಿ, ಬರ್ಖಾದತ್ ರ ರಾಡಿಯಾ ಟೇಪ್ ಹಗರಣದ ಬಗ್ಗೆ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಯು ಸುದೀರ್ಘವಾದ ವರದಿಯನ್ನು ಪ್ರಕಟಿಸಿದೆ ಅನ್ನೋದು ಇನ್ನೂ ಮಹತ್ವದ ಸುದ್ದಿ. `A Journalist in India Ends Up in the Headlines’ ಅನ್ನೋ ಮಜವಾದ ಶೀರ್ಷಿಕೆ ಕೊಟ್ಟ ಪತ್ರಿಕೆಯು ಈಗ ಬರ್ಖಾ ದತ್ ಕುಟುಕು ಪ್ರಶ್ನೆಗಳನ್ನು ಕೇಳುವ ಬದಲು ಉತ್ತರಿಸೋ ಪ್ರಸಂಗ   ಎದುರಾಗಿದೆ ಎಂದು ಪರಿಹಾಸ್ಯ ಮಾಡಿದೆ.  ತನ್ನ  ಓರಗೆಯ ಪತ್ರಕರ್ತರ ಪ್ಯಾನೆಲ್ ಡಿಸ್ಕಶನ್ ನಲ್ಲಿ ಆಕೆ ಉತ್ತರಿಸಲು ತಡಬಡಾಯಿಸಿದಳು; ತನ್ನ ಕೋಪವನ್ನು ಹೇಗೋ ಹತ್ತಿಕ್ಕಿಕೊಂಡಳು ಎಂದು ಲಿಡ್ಯಾ ಪೋಲ್ ಗ್ರೀನ್ ತನ್ನ ವರದಿಯಲ್ಲಿ ಬರೆದಿದ್ದಾಳೆ.  ಕಾಂಗ್ರೆಸಿಗೆ ಸಂದೇಶ ತಲುಪಿಸುವ ಭರವಸೆಯನ್ನು ನೀರಾ ರಾಡಿಯಾಗೆ ನೀಡಿದ್ದಳೆಂಬ ವಿವರಗಳನ್ನು ಕೊಟ್ಟ   ಈ ವರದಿ ಕೊನೆಗೂ ಬರ್ಖಾ ದತ್ `ನಾನು ಇನ್ನೂ ಎಚ್ಚರಿಕೆಯಿಂದ ಇರಬೇಕಿತ್ತು’     ಎಂದಿದ್ದನ್ನು ಉಲ್ಲೇಖಿಸಿದೆ.  ಆರಾಮುಕುರ್ಚಿ ಜಾಲಗಳ  ಆದೇಶ –    ಅಪ್ಪಣೆಗಳಿಗೆ ನಮ್ಮ ಸಲಹಾ ಪತ್ರಿಕೋದ್ಯಮ  ಅಡವಿಟ್ಟುಹೋಗಿದೆ ಎಂದು ರಾಜದೀಪ್ ಸರ್ದೇಸಾಯಿ ಹೇಳಿದ್ದನ್ನು ಪತ್ರಿಕೆ ಉಲ್ಲೇಖಿಸಿದೆ.

(ಈ ರಾಜದೀಪ್ ಸರ್ದೇಸಾಯಿಯವರೇ ಟ್ವಿಟರ್ ಸಂದೇಶಗಳ ರೀತಿಯಲ್ಲಿ ಕೃತಕ ಸಂದೇಶಗಳನ್ನು ತಮ್ಮ ಚರ್ಚೆಯೊಂದರಲ್ಲಿ ಬಳಸಿಕೊಂಡಿದ್ದು, ಆಮೇಲೆ ಅವರು ಹೇಳಿದಂತೆ ಸ್ವಂತ ವೆಬ್ ಸೈಟಿನಲ್ಲಿ ಸಂಗ್ರಹಿಸಿದ ಮಾಹಿತಿ ಎಂಬುದೂ ಸುಳ್ಳಾಗಿದ್ದು ಈಗಿನ ಕಥೆ).

ಕನ್ನಡದ ಪತ್ರಿಕೋದ್ಯಮದಲ್ಲೂ ಕಾಲಮಿಸ್ಟುಗಳೇ ಕಾಲಂ ಸುದ್ದಿಯಾಗಿರೋದು ಇನ್ನೊಂದು ಕುತೂಹಲಕರ ಬೆಳವಣಿಗೆ. ಹಾಯ್ ಬೆಂಗಳೂರಿನಲ್ಲಿ ಮೂರು ವಾರಗಳಿಂದ ನಿರಂತರವಾಗಿ ಪತ್ರಕರ್ತರ ಬಗ್ಗೆ ಕಾಲಂಗಟ್ಟಳೆ ಸುದ್ದಿಗಳು ಬರುತ್ತಿವೆ. ಕೆಲವು ವ್ಯಂಗ್ಯವಾಗಿ, ಕೆಲವು ಅತ್ಯಂತ    ಆತ್ಮಕಥೆಯ ಭಾಗವೆಂಬಂತೆ. ಈ ಪತ್ರಿಕೆಯ ವರದಿಗಳನ್ನು ಸದಾ ವಿರೋಧಿಸುವ ದುನಿಯಾ ಪತ್ರಿಕೆಯಲ್ಲಿ ತದ್ವಿರುದ್ಧ ಕಾಲಂಗಳು ಬರುತ್ತಿವೆ! ಪತ್ರಕರ್ತರೇ ಸುದ್ದಿಯಾಗಿ ಅವರೇನೋ ಭಯಂಕರ ಸಮಾಜಸೇವಕರೆಂಬ ಭ್ರಮೆಯನ್ನು ನಾವೆಲ್ಲ ಹುಟ್ಟುಹಾಕುತ್ತಿದ್ದೇವೆಯೆ ಎಂದು ವಿಮರ್ಶಕಿಗೂ ಅನ್ನಿಸುತ್ತಿದೆ.

ಪತ್ರಕರ್ತರು ಎಲ್ಲರಂತೆ ಸಂಬಳ ಪಡೆದು ಅದಕ್ಕಾಗಿ ಕೆಲಸ ಮಾಡುವವರು. ಅದನ್ನು ಹವ್ಯಾಸ ಮಾಡಿಕೊಂಡು ಮೇಲೆದ್ದವರು ಕಡಿಮೆ. ವೃತ್ತಿಯಲ್ಲಿರುವ ಈ ಪತ್ರಕರ್ತರು ತಮ್ಮ ಸಂಸ್ಥೆಯ ಮರ್ಜಿಯಲ್ಲಿಯೇ ಇರುತ್ತಾರೆ. ಅಥವಾ ಸಂಸ್ಥೆಯು ಕೊಟ್ಟ ಸ್ವಾತಂತ್ರ್ಯದಡಿಯಲ್ಲಿ ಕೆಲಸ ಮಾಡುತ್ತಾರೆ. ಅವರೇನೂ ಚಿತ್ರ ಕಲಾವಿದರಂತೆ, ಜಾನಪದ ಕಲಾವಿದರಂತೆ ಮನೆತನದಿಂದ ಬಂದ ವೃತ್ತಿಯನ್ನೇನೂ ಮಾಡುತ್ತಿರುವವರಲ್ಲ (ಕೆಲವರನ್ನು ಬಿಟ್ಟು).   ಇಂಥ ಪತ್ರಕರ್ತರಲ್ಲಿ ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು ಬದುಕಿದವರು, ಬದುಕುತ್ತಿರುವವರು ಇದ್ದಾರೆ.  ಅವರನ್ನು ನಾವು ಗಮನಿಸುವುದೇ ಇಲ್ಲ.  ಅವರು ಹೆಸರು ಮಾಡಿಕೊಳ್ಳುವುದೂ ಇಲ್ಲ. ಕೊನೇ ಪಕ್ಷ ಸೈಟನ್ನೂ ಮಾಡಿಕೊಳ್ಳುವುದಿಲ್ಲ. ಪ್ರತಿಯೊಂದೂ ಮೈನ್ ಸ್ಟ್ರೀಮ್ ಪತ್ರಿಕೆಯಲ್ಲಿ ಇಂಥ ಕೆಲವರು ಇದ್ದಾರೆಂದೇ ಪತ್ರಿಕೆ ನಡೆಯುತ್ತಿರುತ್ತದೆ. ರಾತ್ರಿ ಪಾಳಿಯಲ್ಲಿ ಸರಿಯಾಗಿ ಪೇಜು ಕಟ್ಟುವ, ಹಗಲು ಪಾಳಿಯಲ್ಲಿ ಬಂದ ಸುದ್ದಿಗಳನ್ನು ಸರಿಯಾಗಿ ಸಂಗ್ರಹಿಸಿ ಇಡುವ   ಇಂಥ ಪತ್ರಕರ್ತರಿದ್ದಾರೆಂದೇ ಪತ್ರಿಕೆಗಳಿಗೆ ಜೀವ, ಜೀವಂತಿಕೆ ಇದೆ. ಹೊರತು ಹಗಲಿನ ಆರಾಮು ಡೆಡ್ ಲೈನ್ ಗಳಲ್ಲಿ ಯಾವಾಗ ಬೇಕಾದರೂ, ಯಾವ ವಿಷಯದ ಮೇಲೆ ಬೇಕಾದರೂ ಲೇಖನ ಬರೆಯಬಹುದಾದ, ಸಂಪಾದಿಸಬಹುದಾದ ಸ್ವಾತಂತ್ರ್ಯ    ಇರುವ ಕಾಲಮಿಸ್ಟುಗಳಿಂದಲೇ ಪತ್ರಿಕೆ ನಿಂತಿದೆ ಎಂದು ತಿಳಿಯುವಂತಿಲ್ಲ. ಕೊನೆಗೆ ಮುಂಜಾನೆ ಸೆಂಟರ್ ನಿಂದ ಪತ್ರಿಕೆಯನ್ನು ತಂದು ಸೈಕಲ್ಲಿಗೇರಿಸಿ ಮನೆಮನೆಗೆ ತಂದುಕೊಡುವ ಪೇಪರ್ ಹುಡುಗ    ಇಲ್ಲದಿದ್ದರೆ ಈ ಕಾಲಮಿಸ್ಟುಗಳು ಮಾಡುವುದೇನು? ಪತ್ರಿಕೆಗಳು ನಂಬರ್ 1,2,3, ಆಗುವುದು ಹೇಗೆ? !!  ಆದ್ದರಿಂದ ಸದಾ ರಾಜಕೀಯ ಸ್ಟ್ರಾಟೆಜಿಯ ಲೆಕ್ಕದಲ್ಲಿ ಕಾಲಂ ಬರೆಯುವ  ಅಥವಾ ಪತ್ರಿಕೆಯ  ಅಭಿಯಾನವನ್ನು ಹೆಣೆಯುವ ತಂತ್ರಗಳಿಂದಲೇ ಪತ್ರಿಕೆ ನಡೆಯುತ್ತಿದೆ ಎಂದು ತಿಳಿಯಬಾರದೆಂಬುದು ನನ್ನ  ಅನಿಸಿಕೆ. 

ಒಂದೊಮ್ಮೆ ನಮಗೆ ಹಿರಿಯ ಪತ್ರಕರ್ತರ ಮುಖವೇ ಗೊತ್ತಿರುತ್ತಿರಲಿಲ್ಲ.  ಅವರನ್ನು ಖುದ್ದಾಗಿ ಭೇಟಿ ಮಾಡಿದಾಗಲೇ ಅವರ ಮುಖ ಹೀಗಿದೆ ಎಂದು ಅರಿವಿಗೆ ಬರೋದು. ಈಗ? ಪತ್ರಕರ್ತನೊಬ್ಬನ ಹೆಸರು ಹೇಳಿದ ಕೂಡಲೇ ಅವನ ಹಲ್ಲುಕಿರಿದು ನಗುವ ಪೋಸ್, ಅಥವಾ ಯಾವುದೋ ದಿಕ್ಕಿನಲ್ಲಿ (ಜಿ ಕೆಟಗರಿ?) ಚಿಂತಾಮಗ್ನನಾಗಿರುವ ಭಂಗಿ ನೆನಪಾಗುತ್ತದೆ. ಕಾಲಮಿಷ್ಟುಗಳು ಬರೆದದ್ದೆಲ್ಲ ಪುಸ್ತಕವಾಗುತ್ತಿರುವ  ಈ ಕಾಲದಲ್ಲಿ ವರದಿ ಮಾಡಬೇಕಾದ ಪತ್ರಕರ್ತರೇ ಹೆಚ್ಚಾಗಿ ಸಮಾರಂಭದ ಮುಖ್ಯ  ಅತಿಥಿಗಳಾಗಿರುತ್ತಾರೆ; ಇಲ್ಲವೇ ಸ್ವತಃ ಲೇಖಕರಾಗಿ ವಿರಾಜಮಾನರಾಗಿರುತ್ತಾರೆ.  ಮುಂದೆಂದೋ ಬೇಕಾಗುತ್ತದೆ ಎಂಬ ಪೋಸ್ಟರಿಟಿ ಥಿಂಕಿಂಗ್ ನಲ್ಲೇ ಕಾಲ ಕಳೆಯುವ   ಈ ಕಾಲಮಿಸ್ಟರಂತೂ ವಿಷಯ ಹುಡುಕುವುದೇ ಪುಸ್ತಕವಾಗಿ ಈ ಲೇಖನ ಬಹಳಷ್ಟು ವರ್ಷಗಳ ಕಾಲ ನಿಲ್ಲಬಹುದೇ ಎಂದು ಯೋಚಿಸಿ!! ಇವರಿಂದ ಗ್ರಂಥಾಲಯಗಳ, ಮುಗ್ಧ ಫ್ಯಾನುಗಳ ಕಪಾಟು ತುಂಬಬಹುದೇ ವಿನಃ ಮತ್ತೇನೂ ಮೌಲಿಕ ಬದಲಾವಣೆ, ಪ್ರಭಾವ ಆಗುವಂತೆ ಕಾಣುವುದಿಲ್ಲ.  ಅತ್ಯವಶ್ಯವಾದ ಮತ್ತು ರಿಮಾರ್ಕಬಲ್ ಎನ್ನಿಸುವ ವಿಷಯಗಳನ್ನು ಒಳಗೊಂಡಿದ್ದರೆ ಮಾತ್ರ ಕಾಲಂ ಪ್ರಕಾಶನವನ್ನು ಒಪ್ಪಬಹುದು. ದಂಡಿಯಾಗಿ ಬರೆದದ್ದನ್ನೆಲ್ಲ ಸೌದೆ ಹೊರೆಯಂತೆ ಕಟ್ಟಿ ಪ್ರಕಟಿಸುವುದು ಸಂಸ್ಕೃತಿ ಪರಿಸರಕ್ಕೆ ಅಪಾಯಕಾರಿ!   

ಪತ್ರಕರ್ತರೇ ಸುದ್ದಿಯಾಗುವುದು ಕನ್ನಡದ ಸಂದರ್ಭದಲ್ಲಿ ಹೆಚ್ಚಾದಂತೆ ಕಾಣಿಸುತ್ತದೆ ಎಂದು ಇಷ್ಟೆಲ್ಲ ಬರೆಯಬೇಕಾಯಿತು. ಇಷ್ಟಕ್ಕೂ ನೋಡಿ: ಸಂಪಾದಕರು, ಮುಖ್ಯ ವರದಿಗಾರರು, ಕಾಲಮಿಷ್ಟುಗಳ ಪುಸ್ತಕಗಳನ್ನು ಬಿಟ್ಟರೆ, ಉಳಿದೆಲ್ಲ ಪತ್ರಕರ್ತರದು ಸಾಮಾನ್ಯವಾಗಿ ವಿಶೇಷ ವಿಷಯಗಳ ಮೇಲೆ, ಪ್ರತ್ಯೇಕವಾಗಿ ಬರೆದ ಪುಸ್ತಕಗಳೇ. ಅಂದರೆ ಅವರು ಪತ್ರಿಕೋದ್ಯಮದ ತಾಪತ್ರಯಗಳ ಮಧ್ಯೆಯೂ ಬೇರೇನೋ ಬರೆದಿರುತ್ತಾರೆ. ಅವರದು ನಿಜವಾದ ಪತ್ರಿಕೋದ್ಯಮ. ಪ್ಯಾಶನೇಟ್ ಆಗದೇ ಹೋದರೆ ಇವೆಲ್ಲ ಸಾಧ್ಯವಿಲ್ಲ. 

ಹಳೆ ಕಾಲಮಿಸ್ಟರ ಜಾಗಕ್ಕೆ ಬರೋ ಹೊಸ ಕಾಲಮಿಸ್ಟರು ಈ ಮಾತುಗಳನ್ನು ಕೇಳಿಸಿಕೊಂಡರೆ ಅಷ್ಟೇ ಸಾಕು!

 

 

 

 

 

Advertisements

4 Responses to “ಭಾರತೀಯ ಮೀಡಿಯಾದ ಇಂಟರ್ ನ್ಯಾಶನಲ್ ನ್ಯೂಸ್ : ಕನ್ನಡದಲ್ಲಿ ಕಾಲಮಿಸ್ಟರ ನ್ಯೂಸ್ !”

 1. Umapathi Says:

  Can Columnists too can make money? I wonder!! In Kannada media, the highest paid columnist of a largest circulated newspaper, gets a paltry sum of Rs.500-800 a piece 😉

 2. ಸುನಾಥ Says:

  ಒಂದಾನೊಂದು ಕಾಲದಲ್ಲಿ ಸತ್ಯನಿಷ್ಠ ಹಾಗು ಪತ್ರಿಕಾನಿಷ್ಠ ಸಂಪಾದಕರು ಪತ್ರಿಕೆಗಳನ್ನು ಬೆಳೆಸಿದರು. ಮೊದಲನೆಯ ಉದಾಹರಣೆ ಎಂದರೆ ಸಂಯುಕ್ತ ಕರ್ನಾಟಕದ ಮೊಹರೆ ಹಣಮಂತರಾಯರು, ಹ.ರಾ.ಪುರೋಹಿತ ಹಾಗು ಪಾ.ವೆಂ.ಆಚಾರ್ಯರು. ಎರಡನೆಯ ಉದಾಹರಣೆ ಎಂದರೆ ಪ್ರಜಾವಾಣಿಯ ಟಿ.ಎಸ್.ರಾಮಚಂದ್ರರಾವ. ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕಕ್ಕಿಂತಲೂ ತಮ್ಮ ಇಮೇಜನ್ನೇ ದೊಡ್ಡದಾಗಿ ಬಿಂಬಿಸುವ ಕೆಲಸ ಮಾಡಿದರು. ಈಗ ಕೆಲಸವನ್ನೇ ಕಳೆದುಕೊಂಡಿದ್ದಾರೆ.
  ವಿಮರ್ಶಕಿ: ಎಲ್ಲಿ ಸ್ವಾಮಿ ಅವರು ರಾಜೀನಾಮೆ ಕೊಟ್ಟಿದ್ದಲ್ವರ? ರಾಜೀನಾಮೆ ಕೊಟ್ರೆ ಕೆಲ್ಸ ಕಳ್ಕಂಡ್ರು ಅಂತ ಹೇಳ್ತಾರ? ಅವರ ಮೌನದ ಮೊಟ್ಟೆ ಒಡ್ದು ಯಾವ ಯೋಜನೆಯ ಮರಿ ಚೀಂವ್ ಚೀಂವ್ ಅಂತ ಬರ್ತೇತಿ ಅಂತ ಕಾಯೋದಷ್ಟೆ ನಮ್ಮ ಕೆಲ್ಸ ಬುಡಿ!

 3. sahana Says:

  So called journalists, columnists,editors,tv news anchors competing with corrupt politicians in amassing wealth…

 4. Avinash Kannammanavar Says:

  Seriously no comments!! 😉


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: