ವೆಲ್‌ಕಮ್: ಡಾಟಾ ಜರ್ನಲಿಸಂ !

ಡಿಸೆಂಬರ್ 24, 2010

ಡಾಟಾ ಜರ್ನಲಿಸಂ ಅಂದ್ರೆ ವಿಶೇಷವೇನೂ ಅಲ್ಲ. ಸರ್ಕಾರ, ಸಂಸ್ಥೆಗಳು ಪ್ರಕಟಿಸೋ ದತ್ತಾಂಶಗಳನ್ನೇ ಅಧ್ಯಯನ ಮಾಡೋದು, ಅವುಗಳ ಕುರಿತ ಸಾಮಾಜಿಕ ಮಹತ್ವದ ಸುದ್ದಿಗಳನ್ನು ಖಚಿತ ಮಾಹಿತಿ, ಉಲ್ಲೇಖಗಳೊಂದಿಗೆ ವರದಿ ಮಾಡೋದು.

೨೦೧೧ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಜನಗಣತಿ ನಡೆಯುತ್ತಲ್ವರ? ಅದು ಕರ್ನಾಟಕದಲ್ಲಿ ಬರುವ ಜನವರಿ ೨ರಿಂದ ಔಪಚಾರಿಕವಾಗಿ ಉದ್ಘಾಟನೆಯಾಗ್ತಾ ಇದೆ. ಅಲ್ಲಿಂದ ಶುರು ಮಾಡಿ ಇಡೀ ವರ್ಷದುದ್ದಕ್ಕೂ ನಮ್ಮ ಕನ್ನಡದ ಪತ್ರಿಕೆಗಳು ವಿಶೇಷವಾಗಿ ಕರ್ನಾಟಕದ ಮತ್ತು ಸಾಮಾನ್ಯವಾಗಿ ಇಡೀ ದೇಶದ ಜನಗಣತಿಯ ಬಗ್ಗೆ ವಿಶೇಷ ಲೇಖನಗಳನ್ನು ಮಾಡಬಹುದು. ವಿಮರ್ಶಕಿಯು ಬರೀ ಟೀಕೆ – ಟಿಪ್ಪಣಿಗಳಲ್ಲಿ ತೊಡಗಬಾರದು, ರಚನಾತ್ಮಕವಾಗಿ ಪತ್ರಕರ್ತರಿಗೆ ನೆರವಾಗಬೇಕು ಎಂದು ಈ ಬ್ಲಾಗನ್ನು ಬರೆದಿರುವಳು!

ಜನವರಿ ೨ರಂದು ವಿಕಾಸ ಸೌಧದ ೧೨೨ನೇ ನಂಬರ್ ಕೊಠಡಿಯಲ್ಲಿ ನಿಯಂತ್ರಿತವಾಗಿರುವ ಒಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಜನಗಣತಿಯ ಸಿದ್ಧತೆಗಳು ಆರಂಭವಾಗಲಿವೆ. ಅಂದು ಮೈಸೂರು ಮತ್ತು ಗುಲಬರ್ಗಾ ವಿಭಾಗಗಳ ಪ್ರಾದೇಶಿಕ ಕಮಿಶನರ್‌ಗಳ ಸಭೆಯನ್ನು ಕರ್ನಾಟಕದ ಜನಗಣತಿಯ ಕಾರ್ಯಾಚರಣೆಗಳ ನಿರ್ದೇಶಕ ಟಿ ಕೆ ಅನಿಲ್ ಕುಮಾರ್ ಕರೆದಿದ್ದಾರೆ.

ಜನವರಿ ೪ರಂದು ಬೆಳಗಾವಿ ವಿಭಾಗ, ಜನವರಿ ೭ರಂದು ಬೆಂಗಳೂರು ವಿಭಾಗದ ಸಭೆಗಳು ನಡೆಯಲಿವೆ. ಜನವರಿ ೬ರಂದು ರಾಜ್ಯ ಮಟ್ಟದ ಜನಗಣತಿ ಸಮನ್ವಯ ಸಮಿತಿ ಸಭೆಯು ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥರ ಅಧ್ಯಕ್ಷತೆಯಲ್ಲಿ ಸಭೆ ಸೇರಲಿದೆ. ಜನವರಿ ೨೨ರಂದು ಪ್ರಚಾರ ಕಾರ್ಯದ ಪ್ರಾಥಮಿಕ ಸಭೆ; ಫೆಬ್ರುವರಿ ೬ರಂದು ಪ್ರಧಾನ ಗಣತಿ ಅಧಿಕಾರಿಗಳ ಮತ್ತು ೩೦ ಜಿಲ್ಲಾಧಿಕಾರಿಗಳ ಸಭೆ; ಮಾರ್ಚ್ ೨ರಂದು ಮತ್ತೊಂದು ರಾಜ್ಯಮಟ್ಟದ ವಿಡಿಯೋ ಕಾನ್ಫರೆನ್ಸ್; ಏಪ್ರಿಲ್ ೧೩ರಂದು ಮನೆಪಟ್ಟೀಕರಣ ಮತ್ತು ಮನೆಗಣತಿಯ ಕುರಿತು ಪತ್ರಿಕಾಗೋಷ್ಠಿ ನಡೆದು ಏಪ್ರಿಲ್ ೧೫ರಂದು ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲ ಎಚ್ ಆರ್ ಭಾರದ್ವಾಜರ ಮತ್ತು ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪನವರ ಹೆಸರುಗಳ ನೋಂದಣಿ ನಡೆಯಲಿದೆ.

ಜನಗಣತಿ ಗೊತ್ತಿಲ್ವ? ಈಕೀನೇ ಇಷ್ಟೆಲ್ಲ ಹೇಳ್ಬೇಕ ಅಂತೇಳ್ಬೇಡಿ ಮತ್ತೆ.. ಡಾಟಾಜರ್ನಲಿಸಂ ಅಂದ್ರೆ ಇಷ್ಟೇ ಅಲ್ಲ ಅಲ್ವರ?

ಉದಾಹರಣೆಗೆ ಅಮೆರಿಕಾದಲ್ಲಿ ೨೦೧೦ರ ಜನಗಣತಿ ವಿವರಗಳು ೨೦೧೧ರ ವರ್ಷವಿಡೀ ಪ್ರಕಟವಾಗುತ್ತವಂತೆ. ಇದರ ಬಗ್ಗೆ ಪತ್ರಕರ್ತರು ಪ್ರತ್ಯೇಕ ವರದಿಗಳನ್ನು ಮಾಡಬೇಕು ಅಂತ ಪತ್ರಿಕಾರಂಗದ ಪ್ರಮುಖ ವೆಬ್‌ಸೈಟ್ ಪಾಯಿಂಟರ್‌ನ ಟಾಮ್‌ಕಿನ್ಸ್ ಹೇಳ್ತಾನೆ. ಸೆನ್ಸಸ್ ಬೀಟ್ ಅಂತ್ಲೇ ಪ್ರತ್ಯೇಕವಾಗಿ ವರದಿಗಾರರನ್ನು ನೇಮಿಸಬೇಕು ಅಂತ ಆ ವಯ್ಯ ತುಂಬಾ ಒತ್ತಾಯ ಮಾಡಿದಾನೆ.

ಪ್ರಾಥಮಿಕ ಮಾಹಿತಿಗಳನ್ನು ಸಂಸ್ಥೆಯು ಕೊಡೋ ಡಾಟಾಶೀಟ್‌ಗಳಿಂದ ವಿಶ್ಲೇಷಿಸಿ ಹಾಕಬೌದು. ಆದ್ರೆ ಇನ್ನೂ ಆಳವಾದ ಅಧ್ಯಯನ ಮಾಡಬೇಕು ಅಂತಂದ್ರೆ ನಿಮಗೆ ಅಂಕಿ ಅಂಶಗಳನ್ನು ವಿಶ್ಲೇಷಣೆ ಮಾಡೋ ತಜ್ಞತೆನೂ ಕೊಂಚ ಇರಬೇಕು.

ಭಾರತದ ೨೦೧೧ರ ಜನಗಣತಿಗಾಗಿ ಈಗಾಗ್ಲೇ ವೆಬ್‌ಸೈಟ್ ಶುರು ಆಗೈತಿ: ಇದನ್ನು ನೋಡ್ರಿ. ನೀವು ಉಚಿತವಾಗಿ ನೋಂದಣಿ ಮಾಡ್ಕಂಡ್ರೆ ನಿಮಗೆ ಹಳೆ ಮಾಹಿತಿಗಳೆಲ್ಲ ಸಿಗುತ್ತವೆ. ನಿಜಾ ಹೇಳ್ಬಕು ಅಂದ್ರೆ  ಈ ವೆಬ್‌ಸೈಟ್‌ನಿಂದ ಭಾರೀ ಪ್ರಯೋಜ್ನ.

ಜನಗಣತಿಯನ್ನೇ ಒಂದು ಪ್ರಯೋಗವಾಗಿ ತಗಂಡು ಮುಂದೆ ಡಾಟಾ ಜರ್ನಲಿಸಮ್‌ನ್ನು ನೀವು ಬೆಳೆಸಿಕೊಂಡು ಹೋಗಾಕೂ ಬರ್‍ತತಿ. ಹ್ಯಾಂಗಪಾ? ಆರ್ ಟಿ ಐ ಕೆಳಗೆ ನೀವು ಮಾಹಿತಿ ಕೇಳಬೌದಲ್ವರ? ಅಲ್ಲೂ ಬರೀ ಅವ್ರಿಗೆ ಸೈಟ್ ಕೊಟ್ರ, ಇವ್ರಿಗ್ ಕೊಟ್ರ ಅಂತಷ್ಟನೇ ಕೇಳದೆ, ಡಾಟಾಶೀಟ್‌ಗಳನ್ನೂ ಕೇಳಿ. ಆಗ ಅವೆಲ್ಲವೂ ಸುದ್ದಿಗೆ ಮೂಲವಾಗಿ ನೀವು ಒಳ್ಳೊಳ್ಳೇ ಅನಲಿಸಿಸ್ ಬರೀಬೌದು. ಸರ್ಕಾರ ಹೇಳೋದೇನು, ವಾಸ್ತವ ಏನು ಅಂತ ಇಲ್ಲೂ ನೀವು ತನಿಖಾ ವರದಿ ಮಾಡಬೌದು.

ಮುಂದಿನ ದಿನಗಳಲ್ಲಿ ಡಾಟಾ ಜರ್ನಲಿಸಂ ತುಂಬಾ ಬೆಳೀತೈತಿ ಅನ್ನೋದಂತೂ ಖರೆ. ಹಂಗಂತ ವಿಶ್ವವ್ಯಾಪಿ ಜಾಲವನ್ನೇ ಕಂಡು ಹಿಡಿದವ್ನಲ್ಲ, ಟಿಮ್ ಬರ್ನರ್ಸ್ ಲೀ, ಅವನೇ ಹೇಳವ್ನೆ: ಭವಿಷ್ಯದ ಜರ್ನಲಿಸಂನಲ್ಲಿ ಡಾಟಾ ಅನಾಲಿಸಿಸ್ ಮಾಡೋದೇ ಪ್ರಮುಖವಾದ ಸಾಧನ ಅಂತ ಅವನು ಬರೆದೇ ಬಿಟ್ಟಿದಾನೆ.

ಉದಾಹರಣೆಗೆ ವಿಕಿಲೀಕ್ಸ್‌ನೇ ತಗಳಿ. ಎರಡೂವರೆ ಲಕ್ಸ ದಾಖಲೆಗಳನ್ನ ಯಾರಾರ ಒಂದೇ ಸಲ ಓದಕ್ಕಾಗ್ತದ? ಬರೆಯಕ್ಕಾಗ್ತದ? ಅದರಲ್ಲಿರೋ ಸುಳ್ಳು, ಜಳ್ಳು ತೆಗೆದು ಒಳ್ಳೇದನ್ನಷ್ಟೇ ಸುದ್ದಿ ಮಾಡಕ್ಕಾಯ್ತದ? ಅದಕ್ಕೇ ಆ ವಯ್ಯ ಅಸಾಂಜ್ ಐದು ಪತ್ರಿಕೆಗಳಿಗೆ ಈ ಡಾಟಾಶೀಟ್‌ಗಳನ್ನು ಹಂಚಿಕೊಟ್ಟ ಅಲ್ವರ? ಅದಕ್ಕೇ ಈಗ ನೋಡಿ: ಎರಡೂವರೆ ಲಕ್ಷದಲ್ಲಿ ಇವತ್ತಿನವರೆಗೆ ಬರೀ ೧೯೦೦ ಕೇಬಲ್‌ಗಳಷ್ಟೇ ಪಬ್ಲಿಶ್ ಆಗಿದಾವೆ. ಉಳಿದದ್ದೆನ್ನ ಅನಲೈಸ್ ಮಾಡ್ತಾ ತಲೆ ಕೆಡಿಸ್ಕಂಡವ್ರೆ ! ಇದು ಡಾಟಾ ಜರ್ನಲಿಸಂ ಯುಗ ಬಂದಿದೆ ಅನ್ನೋದಕ್ಕೆ ಒಳ್ಳೇ ಉದಾಹರಣೆ.

ಇನ್ನೇನು ಯೇಳದು? ಇಂಗ್ಲೆಂಡಿನ್ ಗಾರ್ಡಿಯನ್ ಪತ್ರಿಕೆ ಇಲ್ವರ? ಅದು ಈಗ (ಇದೇ ಡಿಸೆಂಬರ್ ೧೬ರಂದು) ಡಾಟಾಸ್ಟೋರ್ ಅನ್ನೋ ವೆಬ್‌ಸೈಟನ್ನೇ ಶುರು ಹಚ್ಕಂಡದೆ. ‘ಫ್ಯಾಕ್ಟ್ಸ್ ಆರ್ ಸೇಕ್ರೆಡ್’ ಅನ್ನೋದು ಈ ವೆಬ್‌ಸೈಟ್‌ನ ಮಂತ್ರ. ಎಷ್ಟೋ ಥರದ ಡಾಟಾಶೀಟ್‌ಗಳನ್ನ ಈ ವೆಬ್‌ಸೈಟಿನಲ್ಲಿ ನೋಡಿ ನೀವೂ ಕಲೀಬೌದು. ಬಹುಶಃ ಪತ್ರಿಕೋದ್ಯಮದಲ್ಲೇ ಇಂಥದ್ದೊಂದು ವೆಬ್‌ಸೈಟ್ ಇದೇ ಮೊದಲು ಇರಬೇಕು. ಉದಾಹರಣೆಗೆ ವಿಕಿಲೀಕ್ಸ್ ಡಾಟಾ ಎಷ್ಟು ಅನೌನ್ಸ್ ಆಗ್ಬುಟ್ಟಿದೆ, ಯಾವ್ಯಾವ ಭಾಗದ ವಿಷ್ಯ ಲೀಕ್ ಆಗಿದೆ ಎಲ್ಲದನ್ನೂ ಈ ವೆಬ್‌ಸೈಟ್‌ನಲ್ಲಿ ಮ್ಯಾಪಿಂಗ್ ಮಾಡಿದಾರೆ. ಅಲ್ಲೂ ಟಿಮ್ ಬರ್ನರ್ಸ್ ಲೀ ಹೇಳಿದ್ದನ್ನೇ ಬರೆದವ್ರೆ:

[Journalism is] going to be about poring over data and equipping yourself with the tools to analyse it and picking out what’s interesting. And keeping it in perspective, helping people out by really seeing where it all fits together, and what’s going on in the country.

ಇನ್ನೂ ಮಜಾ  ಅಂದ್ರೆ ಈ ವೆಬ್‌ಸೈಟಿನಲ್ಲಿ ಡಾಟಾಜರ್ನಲಿಸಂ ಕುರಿತು ಹಲವಾರು ಲೇಖನಗಳಿವೆ. ಅವನ್ನೆಲ್ಲ ಪತ್ರಿಕೋದ್ಯಮದ ಸೀರಿಯಸ್‌ನೆಸ್ ಇದ್ದವರು ಓದಬಹುದು. ಉದಾಹರಣೆಗೆ ಓಪನ್‌ಕಾರ್ಪೋರೇಟ್ ಎಂಬ ಚಳವಳಿ. ಇಲ್ಲಿ ೩೮,೯೬,೯೨೩ ಕಾರ್ಪೋರೇಟ್ ಸಂಸ್ಥೆಗಳ ಮಾಹಿತಿಯನ್ನು ಕೊಡುವ ಜಾಲತಾಣದ ಪರಿಚಯ ಇದೆ. ಇದನ್ನು ಓಪನ್ ಡಾಟಾ ಕಾಮನ್ಸ್ ಎಂಬ ನಿಯಮಗಳಡಿಯಲ್ಲಿ ಎಲ್ರೂ ಮುಕ್ತವಾಗಿ ಮಾಹಿತಿಗಳನ್ನು ಬಳಸುವುದಕ್ಕೆ ಅನುಮತಿ ನೀಡಿದಾರೆ. ಇದಕ್ಕಾಗಿ ಈ ಸೈಟಿನವ್ರು ಪ್ರತ್ಯೇಕವಾಗಿ ಡಾಟಾ ಟೂಲ್ ಸಾಫ್ಟ್‌ವೇರ್‌ಗಳನ್ನು, ಪ್ರೋಗ್ರಾಮ್‌ಗಳನ್ನು ರೂಪಿಸಿದಾರೆ!

ಕಾಮೆಂಟ್ ಈಸ್ ಫ್ರೀ; ಬಟ್ ಫ್ಯಾಕ್ಟ್ಸ್ ಆರ್ ಸೇಕ್ರೆಡ್’ ಅಂತ ಗಾರ್ಡಿಯನ್‌ನ ಸ್ಥಾಪಕ ಸಂಪಾದಕ ಸಿ ಪಿ ಸ್ಕಾಟ್ ಹೇಳಿದ್ದೇ ಈ ಸೈಟಿನ ವೇದವಾಕ್ಯ ಆಗಿರೋದು ವಿಶೇಷ. ಅಂದ್ರೆ ೧೯೨೧ರಲ್ಲಿ ಆತ ಹೇಳಿದ್ದು ಈಗ ಒಂದು ಪ್ರಮುಖ ಜರ್ನಲಿಸಂ ಕೊಂಬೆಯಾಗಿದೆಯಲ್ವರ?!!

ಬರೀ ಈ ಪೇಪರ್‌ಗೇ ಸೀಮಿತವಾಗಿರೋ ನಮ್ಮ ಕನ್ನಡ ಪತ್ರಿಕೋದ್ಯಮ ಎಲ್ಲಿ? ಈ ಡಾಟಾ ಜರ್ನಲಿಸಂ ಎಲ್ಲಿ? ಒಂದು ಒಳ್ಳೆ ಲೈಬ್ರರೀನೂ ಇಲ್ಲದ ನಮ್ಮ ಪತ್ರಿಕಾ ಕಚೇರಿಗಳಿಂದ ಇಂಥ ನವಯುಗದ ಜರ್ನಲಿಸಂ ಕೆಲಸಗಳು ನಡೆಯುತ್ತವೆ ಅನ್ನೋ ಭ್ರಮೆ ಇಟ್ಕಬೇಡಿ. ಆದ್ರೆ ನೀವು ಪ್ಯಾಶನೇಟ್ ಪತ್ರಕರ್ತರಾಗಿದ್ರೆ ಇದನ್ನೆಲ್ಲ ತಿಳ್ಕೋಳೋದನ್ನೆಲ್ಲ ಬಿಡಬ್ಯಾಡಿ!

ಒಂದು ಪುಸ್ತಕವಾಗೋವಷ್ಟು ಮಾಹಿತಿ ಗುಡ್ಡೆ ಹಾಕಿ ದಿನಗಟ್ಲೆ ಓದಿ ಈ ಸುದ್ದಿ ಬರೆದಿವ್ನಿ. ನೀವಾರ ಇದನ್ನ ಉಪಯೋಗ ಮಾಡ್ಕಳಿ. ಸುಮ್ನೆ ವಿಮರ್ಶಕಿ ಯಾವುದೋ ಗಾಸಿಪ್ ಬರೀತಾಳೆ ಅಂತ ಕಾಯ್ತ ಕೂತ್ಕಬೇಡಿ!

ಚಲೋ ಪತ್ರಿಕೋದ್ಯಮ, ಟ್ರಾನ್ಸ್‌ಪರೆಂಟ್ ಪತ್ರಿಕೋದ್ಯಮ, ಸರ್ಕಾರಕ್ಕೆ ಚಲೋ ಮಾತು ಹೇಳೋ ಪತ್ರಿಕೋದ್ಯಮ, ಜನರಿಗೆ ಸರಿಯಾದ ಮಾಹಿತಿ ನೀಡೋ ಪತ್ರಿಕೋದ್ಯಮ – ಇದೇ ಇವತ್ತಿನ ಅಗತ್ಯ ಅಲ್ವರ?

Advertisements

6 Responses to “ವೆಲ್‌ಕಮ್: ಡಾಟಾ ಜರ್ನಲಿಸಂ !”

 1. ಸುನಾಥ Says:

  ವಿಮರ್ಶಕಿ,
  ತುಂಬ ಸ್ವಾರಸ್ಯಕರ ಮಾಹಿತಿಯನ್ನು ಕೊಟ್ಟಿರುವಿರಿ. ವಿಶ್ವಪತ್ರಿಕಾಮಾಧ್ಯಮ ಯಾವ ರೀತಿ ಬೆಳೀತಾ ಇದೆ ಅಂತ ನೋಡಿದಾಗ ಬೆರಗು ಹಾಗು ಖುಶಿ ಆಗ್ತಾ ಇವೆ. ಕನ್ನಡದಲ್ಲೂ ಇದು ಸಾಧಿಸಲಿ ಅನ್ನೋದು ನಮ್ಮಂತಹ ಸಾಮಾನ್ಯರ ಬಯಕೆ. ಇಂತಹ ಇನ್ನಷ್ಟು ಮಾಹಿತಿ ನಿಮ್ಮಿಂದ ಬರಲಿ ಎಂದು ವಿನಂತಿಸುತ್ತೇನೆ.

 2. sahana Says:

  ನಮ್ಮ ಕನ್ನಡ ಪತ್ರಿಕೋದ್ಯಮ ಎಲ್ಲಿ? ಈ ಡಾಟಾ ಜರ್ನಲಿಸಂ ಎಲ್ಲಿ? ಒಂದು ಒಳ್ಳೆ ಲೈಬ್ರರೀನೂ ಇಲ್ಲದ ನಮ್ಮ ಪತ್ರಿಕಾ ಕಚೇರಿಗಳಿಂದ …
  yaakko dictionary ne erolla…

 3. vimarshaki Says:

  adityabharadwaja, ಅಣಾ ನಿನ್ನಂಥವ್ರ ಸಂಖ್ಯೆ ಹೆಚ್ಚಾಗ್ಲಿ! ಈ (e ಅಲ್ಲ!) ಕನ್ನಡ ಪತ್ರಿಕೋದ್ಯಮದಲ್ಲಿ ಹಿಂಗೆ ಬರೀಬೇಕಪಾ ಅಂದ್ರೆ ಓದವ್ರೂ ಬೇಕಲ ಮತ್ತೆ? ನಿಮ್ಮಂಥವ್ರು ಇಷ್ಟಪಟ್ರೆ ಹಿನ್ನೂ ಹೆಂಥೆಂಥದೋ ಕಥೇನೆಲ್ಲ ಬರೀಯೋದಕ್ಕೆ ನಂಗೂ ವಸಿ ಕುಷಿ! ಏನಾರಾ ಇರ್ಲಿ, ಆದಷ್ಟೂ ಬ್ಯಾಲನ್ಸ್ ಮಾಡ್ಕಂಡು ಬರಿಯಣ ಅಂತ ಟ್ರೈ ಮಾಡ್ತಿವ್ನಿ ಕಣಣೋ! ಎಲ್ಲಾರಾ, ಯಾರ್ಯಾರ ಇಂಜಕ್ಷನ್ ಚುಚ್ಚಿಬುಟ್ರೆ ಅಂತ ಬಯ!!


  • bhaya yakakko..i understand the need for the anonymity in this work. mediada vatavarana shtu holaseddu hogide. ivattu ondu criticge avakashave illadantagi hogide, madiyoo navu alle irabekalla?

   nannadu ondu blogide.. adiloka.blogspot.com..modalu baritidde..amele nillisibittidde, iga monneyinda matte bareyakke suru hachivni..ninu onchuru nodi helakko..i welcome a good critic always..


 4. vimarshakiya benamitanada kuritu nannadondu asamaadhaanavittadaroo ittiichege i blogu baruttiruva ritige adara nitige adu inconsequential.

  for a student of journalism like me, the above article on data journalism is an eye opener. yavdo RTI, scamu, kagada patra hididu bareda matrakke adanne data journalism andukondubittirtivi navu, nanoo seri. nimma lekhana patrikodyamada ananta vistara, sadhyategalu mattu javaabdaaigalede ondu apoorva insight nidide. thanks.

 5. Avinash Kannammanavar Says:

  ಯಕ್ಕಾ,, you simply Rock!!!!!


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: