ವಿಕ: ‘ಸೂರ್ಯಂ’ಗೂ ಶಿಕಾರಿ, ಪರಾಗಕ್ಕೂ ಸ್ಪರ್ಶ

ಡಿಸೆಂಬರ್ 26, 2010

ಕಾಲಮಿಸ್ಟರ ಕಾಲಂ ನಿಷ್ಠೆ ಈಗ ಪ್ರಕಟ. ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಯವರಿಂದ ಹಿಡಿದು, ರವಿ ಬೆಳಗೆರೆ, ಶ್ರೀವತ್ಸ ಜೋಶಿ ಎಲ್ಲರೂ ‘ವಿಜಯ ಕರ್ನಾಟಕ’ದ ತಮ್ಮ ಕಾಲಂ ಗಳನ್ನು ಮುಂದುವರಿಸಿದ್ದಾರೆ. ಬಹುಶಃ ಓದುಗರೇ ಪ್ರಭುಗಳು ಹೊರತು ಇನ್ನಾರೂ ತಮ್ಮ ಪ್ರತಾಪಗಳನ್ನು ತೋರಲಾರರು ಎಂದು ಅವರಿಗೆಲ್ಲ ಖಚಿತವಾಗಿರಬೇಕು.

ಶ್ರೀವತ್ಸ ಜೋಶಿಯವರು ತಮ್ಮ ಕಾಲಂನ್ನು ಎಂದಿನಂತೆ ಪಿ ಡಿ ಎಫ್ ಮಾಡಿ ಓದುಗವೃಂದಕ್ಕೆ ರವಾನಿಸಿ ಹೀಗೆ ಟಿಪ್ಪಣಿ ಹಾಕಿದ್ದಾರಂತೆ:

“ನಿರ್ಧಾರ: `ಜನಗಳ ಮನ’ವನ್ನು ಅರ್ಥಮಾಡಿಕೊಂಡು ನಾನು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಭಾನುವಾರದ ಪರಾಗಸ್ಪರ್ಶ ಅಂಕಣವನ್ನು ಮುಂದುವರಿಸಲು ನಿರ್ಧರಿಸಿದ್ದೇನೆ. ನನ್ನ ಈ ನಿಲುವು ಬಹುತೇಕ ಓದುಗರಿಗೆ ಖುಶಿಯನ್ನೇ ಕೊಡುತ್ತದೆಂದು ನಂಬಿದ್ದೇನೆ.  ವಿಶ್ವೇಶ್ವರ ಭಟ್ ಸಂಪಾದಕರಾಗಿ ವಿಜಯ ಕರ್ನಾಟಕದಲ್ಲಿ  ಅಂಕಣ ಬರವಣಿಗೆಗೆ ನನಗೆ ಪ್ರೋತ್ಸಾಹ ಕೊಟ್ಟವರು. ಅವರು ರಾಜೀನಾಮೆ ಸಲ್ಲಿಸಿದ್ದರಿಂದ ’ನಾನೂ ವಿಕ ಪತ್ರಿಕೆಗೆ ಬರೆಯುವುದನ್ನು ಕೂಡಲೇ ನಿಲ್ಲಿಸಲೇ?’ ಎಂದು ನನಗೆ ಒಮ್ಮೆ ಅನಿಸಿದ್ದು ನಿಜ. ಒಂದೆಡೆ ’ವಿಕ ದಲ್ಲಿ ಏನು ಬದಲಾವಣೆಗಳಾದರೂ ಆಗಲಿ, ಪರಾಗಸ್ಪರ್ಶ ಮಾತ್ರ ಖಂಡಿತವಾಗಿಯೂ ನಿಲ್ಲಿಸಬೇಡಿ’ ಎಂದು ತುಂಬಾ ಜನರಿಂದ ಇಮೇಲ್ಸ್ ಬರುತ್ತಿದ್ದರೆ ಕೆಲವೇಕೆಲವರು ಮಾತ್ರ ‘ವಿಭಟ್ ಹೊರನಡೆಯುವಂತಾದ ವಿಕ ಪತ್ರಿಕೆಯಲ್ಲಿ ಇನ್ನ್ಯಾಕೆ ಬರವಣಿಗೆ ಮುಂದುವರೆಸುತ್ತೀರಿ?’ ಎಂದು ಸ್ವಲ್ಪ ಆಗ್ರಹ/ಆಕ್ಷೇಪ ಹೊತ್ತ ಅಭಿಪ್ರಾಯ ವ್ಯಕ್ತಪಡಿಸಿದ್ದೂ ಉಂಟು. ಒಟ್ಟಿನಲ್ಲಿ ಕಳೆದೆರಡು ವಾರ ಮನಸ್ಸಿನಲ್ಲಿ ಸಾಕಷ್ಟು ಗೊಂದಲ, ಧರ್ಮಸಂಕಟ. ಕುರುಕ್ಷೇತ್ರದಲ್ಲಿ ನಿಂತಿದ್ದ ಅರ್ಜುನನಿಗೂ ಅಷ್ಟು ಗೊಂದಲವಿತ್ತೋ ಇಲ್ಲವೋ ಎಂದು ನಾನು ಸ್ನೇಹಿತರ ಬಳಿ ತಮಾಷೆಗೆ ಹೇಳುತ್ತಿದ್ದೆ. ಆದರೆ ಕೊನೆಗೂ, “ಜನ ಸಾಮಾನ್ಯ ಓದುಗರು, ಈಎಲ್ಲ ಬದಲಾವಣೆಗಳಿಂದ ನಿರ್ಲಿಪ್ತರಾದವರು, ಪ್ರತಿ ಭಾನುವಾರ ’ಪರಾಗಸ್ಪರ್ಶ’ ಅಂಕಣವನ್ನು ಪ್ರೀತಿಯಿಂದ ಎದುರುನೋಡುತ್ತಿರುವವರು ಬಹಳಷ್ಟಿದ್ದಾರೆ, ಅವರನ್ನೆಲ್ಲ ನಿರಾಶೆಗೊಳಿಸಬಾರದು. ಬರೆಯುವ ಉತ್ಸಾಹವಿರುವಾಗ, ಪ್ರಕಟಿಸುತ್ತೇವೆ ಎನ್ನುವ ಸಂಪಾದಕರಿರುವಾಗ, ಬರೆದದ್ದನ್ನು ಆಸಕ್ತಿಯಿಂದ ಓದುವವರಿರುವಾಗ ಸುಮ್ಮನೆ ಹಠಾತ್ತಾಗಿ ಬರವಣಿಗೆ ನಿಲ್ಲಿಸುವುದು ಸರಿಯಲ್ಲ” – ಎಂಬ ಒಂದು ವಿವೇಚನೆ ನನ್ನ ತಲೆಯಲ್ಲಿ ಹೊಳೆದದ್ದರ ಪರಿಣಾಮವಾಗಿ ಈಗ ಹಾಗೆಯೇ ಮಾಡಿದ್ದೇನೆ.  ನಿಮ್ಮೆಲ್ಲರ ಪ್ರೋತ್ಸಾಹ, ಸಲಹೆ-ಸೂಚನೆ, ವಿಮರ್ಶೆ, ಟೀಕೆಟಿಪ್ಪಣಿಗಳನ್ನು ಇನ್ನುಮುಂದೆಯೂ ತುಂಬುಹೃದಯದಿಂದ ಸ್ವಾಗತಿಸುತ್ತೇನೆ. ಇದೇ ಸಂದರ್ಭದಲ್ಲಿ, ‘ಹೊಸ ಕ್ಯಾಲೆಂಡರ್ ವರ್ಷ 2011 ಎಲ್ಲರಿಗೂ ಒಳ್ಳೆಯದನ್ನು ತರಲಿ’ ಎಂದು ಹಾರೈಸುತ್ತೇನೆ.”

ಹೀಗೆ ಇನ್ನೂ ಹಲವು ಕಾಲಮಿಸ್ಟರು ವಿಜಯಕರ್ನಾಟಕದಲ್ಲಿ ಮುಂದುವರಿಯಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ವಿಮರ್ಶಕಿಗೆ ತಿಳಿಸಿವೆ. ಸೋಮವಾರದಿಂದ ಶುಕ್ರವಾರದವರೆಗೆ ಕಾದು ನೋಡೋಣ! ಆದರೆ ಹೋಟೆಲ್ ನಿಷ್ಠರ ಕಾಲಂ ಬರದಿದ್ದರೆ ಸಾಕು. ಅವರ ಹೋಟೆಲಿನಲ್ಲಿ ಅಡುಗೆ ಮಾಡುವ ಬಾಣಸಿಗರು ಬೇರೆ ಇರುವಂತೆ, ಕಾಲಂ ಬರೆಯುವವರೂ ಬೇರೆಯೇ ಇದ್ದರು ಎಂಬುದು ವಿಮರ್ಶಕಿಗೆ ತಡವಾಗಿ ಗೊತ್ತಾಗಿದೆ. ಇಂಥ ಭೂತ(ಘೋಸ್ಟ್)ಕಾಲಮಿಸ್ಟರು  ಇರುವುದಕ್ಕಿಂತ ಇಲ್ಲದಿರುವುದೇ ಲೇಸು.

ಕಾಲಮಿಸ್ಟರನ್ನು ವ್ಯಕ್ತಿನಿಷ್ಠರಾಗಿರಬೇಕೆಂದು ಹೇಳುವುದೇ ದೊಡ್ಡ ತಪ್ಪು. ಕಾಲಮಿಸ್ಟರು ಎಂದೆಂದೂ ಸಮಷ್ಟಿನಿಷ್ಠರಾಗಿರಬೇಕು. ಸಮಾಜವೇ ಮುಖ್ಯ ಹೊರತು ಕಾಲಮ್ಮಿಗೆ ನಿಮಿತ್ತರಾದವರ ಅಪ್ಪಣೆಯಂತೇ ನಡೆಯಬೇಕಿಲ್ಲ. ಕಾಲಮಿಸ್ಟರನ್ನು ಹುಡುಕುವುದು ಸಂಪಾದಕರ ಹೊಣೆ. ಉಳಿಸಿಕೊಳ್ಳುವುದೂ ಅವರದೇ ಹೊಣೆ. ವಿಶ್ವೇಶ್ವರ ಭಟ್ಟರು ಒಳ್ಳೆ ಕಾಲಮಿಸ್ಟರನ್ನು ಹುಡುಕಿದ್ದಾರೆ ಎಂದು ಜನ ಮತ್ತು ಈಗ ಉಸ್ತುವಾರಿ ಸಂಪಾದಕರು ಒಪ್ಪಿಕೊಂಡಂತಾಯಿತು. ಏನೇ ಇರಲಿ, ಇದು ಒಳ್ಳೆಯ ಬೆಳವಣಿಗೆ. ಕಾಲಮಿಸ್ಟರಿಗೆ ಎಷ್ಟು ಜನಪ್ರಿಯತೆ ಇದೆ ಎಂಬುದನ್ನೂ ಕಾಲಂ ಸೆಂಟಿಮೀಟರಿನಲ್ಲಿ ಅಳೆದ ಹಾಗಾಯ್ತು!

 

Advertisements

9 Responses to “ವಿಕ: ‘ಸೂರ್ಯಂ’ಗೂ ಶಿಕಾರಿ, ಪರಾಗಕ್ಕೂ ಸ್ಪರ್ಶ”

 1. mahanagar Says:

  hi,
  naanu yaara vidhaveyoo alla. yaara appaneyannoo padedavanalla. i dont believe in the Fan Pressure. Nanage abhimaanigalu illa. Odugaru saaku. Avaru thamma ichcheyannu barahagaarara mele heruvudilla. Naaleyinda nillisibiduththene antha hedarisuvavaru aarogyavantha odugaralla. Jaana oduga thanage bekaaddu oduththaane. Kasada butti kevala sampadakara soththu alla. Ithihaasada kasada butti sadaa baayi theredirutthade. Biddavanu baanasiganoo aaga bahudu, Bhattanoo aagabahudu, Belagereyoo aagabahudu, Huli-Simha-Naayi-Nari…. yaaru bekaadaroo aagabahudu. Alwe?

  Ravi Belagere

  ಹಾಯ್ !
  ನಾನು ಯಾರ ವಿಧವೆಯೂ ಅಲ್ಲ. ಯಾರ ಅಪ್ಪಣೆಯನ್ನು ಪಡೆದವನಲ್ಲಾ. ಅಭಿಮಾನಿಗಳ ಒತ್ತಡ ಎನ್ನುವದನ್ನು ನಾನು ನಂಬುವದಿಲ್ಲ. ನನಗೆ ಅಭಿಮಾನಿಗಳು ಇಲ್ಲ . ಓದುಗರು ಸಾಕು . ಅವರು ತಮ್ಮ ಇಚ್ಛೆಯನ್ನು ಬರಹಗಾರರ ಮೇಲೆ ಹೇರುವದಿಲ್ಲ. ನಾಳೆಯಿಂದ ನಿಲ್ಲಿಸಿಬಿಡುತ್ತೇನೆ ಅಂತ ಹೆದರಿಸುವವರು ಆರೋಗ್ಯವಂತ ಓದುಗರಲ್ಲ. ಜಾಣ ಓದುಗ ತನಗೆ ಬೇಕಾದ್ದು ಓದುತ್ತಾನೆ. ಕಸದ ಬುಟ್ಟಿ ಕೇವಲ ಸಂಪಾದಕರ ಸೊತ್ತು ಅಲ್ಲ. ಇತಿಹಾಸದ ಕಸದ ಬುಟ್ಟಿ ಸದಾ ಬಾಯಿ ತೆರೆದಿರುತ್ತದೆ. ಬಿದ್ದವನು ಬಾಣಸಿಗನೂ ಆಗಬಹುದು, ಭಟ್ಟನೂ ಆಗಬಹುದು,ಬೆಳಗೆರೆಯೂ ಆಗಬಹುದು, ಹುಲಿ-ಸಿಂಹ-ನಾಯಿ-ನರಿ…….ಯಾರು ಬೇಕಾದರೂ ಆಗಬಹುದು ಅಲ್ವೇ..?
  ರವಿ ಬೆಳಗೆರೆ………….

  ……………ಇವರ ಮಾತು ನಿಜಕ್ಕೂ ಸತ್ಯ. ಕನ್ನಡ ಪತ್ರಿಕೆಗಳನ್ನು,ಪುಸ್ತಕಗಳನ್ನು ಕೊಂಡು ಓದುವ ಕನ್ನಡ ಓದುಗನೇ ಸರ್ವತಂತ್ರ ಸ್ವತಂತ್ರ ,ಸಾರ್ವಭೌಮನೇ ಸರಿ !
  ವಲ್ಲಭ ದೇಸಾಯಿ…

 2. gopal Says:

  odugaru yarappana sottoo alla.olle content iddare tabloidannoo odtaare. if times management or kannadaprabha if they are reader oriented they will have to kick of the asses at their butts, be it lion or a duck

 3. aleshi Says:

  we stoped Vijayakaranataka news paper from 20-dec-10,

 4. sheela Says:

  Akkoo, read Hi Bangalore this week…he read about you

 5. ಕವಿಸ್ವರ,ಶಿಕಾರಿಪುರ Says:

  ಒಂದು ಅಂಶ ಸ್ಪಷ್ಟವಾಗುತ್ತಿದೆ, ಎಡಪಂಥೀಯರು ವೈರುಧ್ಯ ತೋರಿಸಿದರೆ, ಬಲಪಂಥೀಯರು ಸದಾ ದ್ವೇಷ ಸಾಧಿಸುತ್ತಾರೆಂದು. ಸೈಟು ಪುರಾಣ ಜಾಹಿರುಗೊಂಡಿದ್ದನ್ನು ಸಹಿಸದ ಸೈಟು ರಕ್ಷಕರು ವೈಯಕ್ತಿಕ ನಿಂದನೆ ಎಂದು ಬೆಳಗೆರೆಯ ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ. ರವಿಯೂ ಪ್ರಶ್ನಾತೀತರೇನಲ್ಲ. ಆದರೆ ಇವರ ಸೊಕ್ಕು ಮತ್ತು ಅಭಿಮಾನಿಗಳ ‘ಗರ್ವ’ ವಾಕರಿಕೆ ತರಿಸುತ್ತಿದೆ.

 6. ravi belagere Says:

  hi,
  naanu yaara vidhaveyoo alla. yaara appaneyannoo padedavanalla. i dont believe in the Fan Pressure. Nanage abhimaanigalu illa. Odugaru saaku. Avaru thamma ichcheyannu barahagaarara mele heruvudilla. Naaleyinda nillisibiduththene antha hedarisuvavaru aarogyavantha odugaralla. Jaana oduga thanage bekaaddu oduththaane. Kasada butti kevala sampadakara soththu alla. Ithihaasada kasada butti sadaa baayi theredirutthade. Biddavanu baanasiganoo aaga bahudu, Bhattanoo aagabahudu, Belagereyoo aagabahudu, Huli-Simha-Naayi-Nari…. yaaru bekaadaroo aagabahudu. Alwe?

  Ravi Belagere

 7. sahana Says:

  Your are right akko…
  mirchi swalpa jasti agide..
  mirchi elladiddaru nadiyutte alwe akko..


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: