ವಕ್ರತುಂಡೋಕ್ತಿ: ಸಂಬಳ ಕೊಟ್ಟರೆ ಪತ್ರಕರ್ತರು ರಾಜಕಾರಣಿಗಳನ್ನು ಬೈಯುತ್ತಾರೆ; ಕೊಡದಿದ್ದರೆ….

ಜನವರಿ 14, 2011

ನೀವು ಒಪ್ಪಿ, ಬಿಡಿ, ಬೇಕಾದರೆ ರಾಜೀನಾಮೆ ಕೊಡಿ. ಆದರೆ `ನನಗೂ, ನಾನು ಬರೆಯುವುದಕ್ಕೂ, ಮ್ಯಾನೇಜ್‌ಮೆಂಟ್‌ಗೂ ಯಾವ ಸಂಬಂಧವೂ ಇಲ್ಲ; ನಾನೇ ಬೇರೆ, ನನ್ನ ಸ್ಟೈಲೇ ಬೇರೆ’ ಎಂದು ಹೇಳುವಂತಿಲ್ಲ. ಇವತ್ತು ಕನ್ನಡವೇನು, ಜಗತ್ತಿನ ಪತ್ರಿಕಾರಂಗವೇ ಬಹುತೇಕವಾಗಿ ಖಾಸಗಿ ವ್ಯಕ್ತಿಗಳ ಕೈಯಲ್ಲಿದೆ. ಆದರೂ ಇಂಥ ಮ್ಯಾನೇಜ್‌ಮೆಂಟ್ ಪ್ರಭಾವವನ್ನೂ ಮೀರಿದ ಐದು ಪತ್ರಿಕೆಗಳು ಜೂಲಿಯಾನ್ ಅಸಾಂಜ್‌ನ ವಿಕಿಲೀಕ್ಸ್ ದಾಖಲೆಗಳನ್ನು ಪ್ರಕಟಿಸಿದ್ದು ಒಂದು ದಾಖಲೆಯೇ ಹೌದಲ್ವರ? ಮ್ಯಾನೇಜ್‌ಮೆಂಟ್‌ಗೂ, ಸಿಬ್ಬಂದಿಗಳಿಗೂ ತಿಕ್ಕಾಟ ಇದ್ದಿದ್ದೆ. ಆದರೆ ಅದನ್ನು ವೃತ್ತಿಯ ಅವಧಿಯಲ್ಲಿ ಪ್ರಕಟಿಸಿ ಹೊರಬರುವುದಕ್ಕೂ, ಆಮೇಲೆ ವಿಷ ಕಾರುವುದಕ್ಕೂ ವ್ಯತ್ಯಾಸವಿದೆ.

ವಿಜಯ ಕರ್ನಾಟಕ ನೋಡಿ? ಒಂದು ಕಡೆ ವಿಜಯ ಕರ್ನಾಟಕದ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್‌ರವರೇ (ಸುನಿಲ್ ರಾಜಶೇಖರ್) ವಿಶ್ವೇಶ್ವರ ಭಟ್ಟರು ಉನ್ನತ ವ್ಯಾಸಂಗಕ್ಕೆ ಹೋಗಬೇಕೆಂದು ಕೆಲಸ ಬಿಟ್ಟರು, ನಮ್ಮ ಮಾತನ್ನೂ ಕೇಳಲಿಲ್ಲ ಎಂದು ಅತ್ಯಂತ ಸಭ್ಯತೆಯಿಂದ ತಮ್ಮ ಸಿಬ್ಬಂದಿಗಳಿಗೆ ಪತ್ರ ಕಳಿಸಿಕೊಟ್ಟರು. ಅದರಲ್ಲಿ ಭಟ್ಟರನ್ನು ಅತ್ಯಂತ ಗೌರವದಿಂದ ನೆನೆಸಿಕೊಂಡರು.

ಆದರೆ ವಿಶ್ವೇಶ್ವರ ಭಟ್ಟರು ವೆಬ್‌ಸೈಟ್ ಶುರು ಮಾಡಿದ್ದೇ ತಡ, ಇದೇ ಸುನಿಲ್ ರಾಜಶೇಖರ್ ಒಬ್ಬ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ವ್ಯಕ್ತಿ ಎಂದು ಹೀನಾಮಾನವಾಗಿ ಹೀಗಳೆದಿದ್ದಾರೆ. ಇದೇ ವ್ಯಕ್ತಿಯ ಕೆಳಗೇ ಸಂಪಾದಕ ಎಂದು ವಿಶ್ವೇಶ್ವರ ಭಟ್ಟರು ಕೆಲಸ ಮಾಡಲಿಲ್ಲವೆ? ಆಗ ಅವರಿಗೆ ಈ ಬಗೆಯ `ಛೀ, ಥೂ’ ಎಂಬ ವೈಯ್ಯಾರ, ಒನಪು ಇರಲಿಲ್ಲವೆ?

ವಿಶ್ವೇಶ್ವರ ಭಟ್ಟರ ಸ್ಯಾಂಪಲ್‌ಗಳು ಇಲ್ಲಿವೆ:

ಕೇಳ್ರಪ್ಪೋ ಕೇಳಿ – 11 ಜನವರಿ 2011

1/11/11 • (6)

ಬೆಂಗಳೂರು ಪತ್ರಕರ್ತ, ಪ್ರೆಸ್ ಕ್ಲಬ್
ಅದ್ಯಾವನೋ ಸುನೀಲ್ ರಾಜಶೇಖರ ನಂತೆ, ಮಹಾ ಕಿರಿಕ್ ಅಂತೆ..

ಗಂಡಸರು ಅಥವಾ ಹೆಂಗಸರ ಬಗ್ಗೆ ಮಾತ್ರ ಕೇಳ್ರಪ್ಪೋ ಕೇಳಿ.  ಮೂರನೇ ಲಿಂಗಿಗಳ ಬಗ್ಗೆ ಆಸಕ್ತಿಯಿಲ್ಲ, ಸಾರಿ !

ಕೇಳ್ರಪ್ಪೋ ಕೇಳ್ರಿ  14 ಜನವರಿ 2011

ಸದಾನಂದ ಜೋಷಿ, ಬಾಣಸವಾಡಿ

ನೀವಿಲ್ಲದ ವಿಜಯ ಕರ್ನಾಟಕ ಗಂಡೋ, ಹೆಣ್ಣೋ ?

– ಆಗಲೇ ಹೇಳಿದೆನಲ್ಲ, ಆ ಸುನಿಲ್ ರಾಜಶೇಖರ ಇರೋ ತನಕ ಅದು ಅವೆರಡೂ ಆಗಿರಲು ಹೇಗೆ ಸಾಧ್ಯ?

ವರ್ಷಗಟ್ಟಳೆ ಒಬ್ಬ ಸಿಇಓ ಕೆಳಗೆ ಕೆಲಸ ಮಾಡಿ, ಅವರು ತನ್ನನ್ನು ಮನೆಗೆ ಕಳಿಸಿದರು ಎಂಬ ಸಿಟ್ಟಿಗೆ ಹೀಗೆಲ್ಲ ಜರೆಯುವುದನ್ನು ನೋಡಿದರೆ ಪತ್ರಿಕೋದ್ಯಮದ ಬಗ್ಗೆ ಮಣಗಟ್ಟಳೆ ಬರೆದವರು ಇವರೇನಾ ಅನ್ನಿಸೋದಿಲ್ವರ? ಹೊಗಳುಭಟ್ಟಂಗಿಗಳ ಕಾಮೆಂಟುಗಳನ್ನೇ ಹಾಕಿಕೊಂಡು, ೨೩ ವರ್ಷದಿಂದ ಸ್ನೇಹಿತರಾಗಿದ್ದವರನ್ನೂ ಜರೆಯುತ್ತ ಕೋಟೆಯೊಳಗೆ ಕವಳ ಜಗಿದು ರಸವನ್ನು ಮನಸ್ಸಿಗೆ ಬಂದ ದಿಕ್ಕಿನಲ್ಲೆಲ್ಲ ಉಗುಳೋ ಭಟ್ಟರಿಗೂ, ಶಿರಸಿ ಮಾರಿಜಾತ್ರೇಲಿ ಬೆರಳಿಗೆ ಬ್ಲೇಡು ಸಿಕ್ಕಿಸಿಕೊಂಡು  ಅಡ್ಡಾಡುವ ಸೈಕೋಗಳಿಗೂ ಅಂಥ ವ್ಯತ್ಯಾಸವಿದ್ದಂತೆ ಕಾಣಿಸುವುದಿಲ್ಲ.

ವ್ಯಕ್ತಿತ್ವ ವಿಕಸನ, ಸಭ್ಯತೆ, ಪದೋನ್ನತಿ, – ಒಂದೆ ಎರಡೆ ಇವರು `ವಿಜಯ ಕರ್ನಾಟಕದಲ್ಲಿ ಬರೆದ, ಬರೆಯಿಸಿದ ವ್ಯಕ್ತಿತ್ವ ವಿಕಸನದ ಮಾಲೆಗಳು? ಈಗ ಯಾಕೆ ಹೀಗೆ ವ್ಯಕ್ತಿತ್ವೇ ಇಲ್ಲದವರಂತೆ ತಮಗೆ ತಾವೇ ಪ್ರಶ್ನೆ ಕೇಳಿಕೊಂಡು, ಉತ್ತರ ಬರೆಸುತ್ತ ಕೂತಿದ್ದಾರೆ? ಒಂದು ತಿಂಗಳಿಂದ ಇವರಿಗೆ ಒಂದಾದರೂ ಒಳ್ಳೆ ಕಾಲಂ ಬರೆಯೋ ಉಮೇದು ಬರಲಿಲ್ವಲ್ಲ?

ಉಳಿದೆಲ್ಲ ಘೋಸ್ಟ್ ರೈಟಿಂಗ್‌ನ ಥರಾನೇ ಈ ವೆಬ್‌ಸೈಟೂ ಭಟ್ಟರನ್ನು ಸದಾ ಹೊಗಳಿ ಅಟ್ಟಕ್ಕೇರಿಸುವ ಜನರಿಂದಲೇ ಬರೆಸಲ್ಪಟ್ಟಿದೆ ಎಂಬುದು ಅವರ ಆಪ್ತವಲಯದಿಂದಲೇ ವಿಮರ್ಶಕಿಗೆ ಬಂದ ಸುದ್ದಿ. ಅವರ ಜಾಲತಾಣವನ್ನು ಮಾಡುತ್ತಿರುವ ಕಚೇರಿಯಿಂದಲೂ ಅಂಥದ್ದೇ ಸುದ್ದಿ ಬಂದಿದೆ.

ವಾಸ್ತವ ಜಗತ್ತಿನಲ್ಲೇ ಭೂತಕಾಲಮಿಸ್ಟರ ಸಂಸ್ಕೃತಿಯನ್ನು ಬೆಳೆಸಿದವರಿಗೆ ಭ್ರಮಾಜಗತ್ತಿನಲ್ಲೂ ಇಂಥ ಕಪೋಲಕಲ್ಪಿತ ಕಾಲಂ, ಪ್ರಶ್ನೋತ್ತರಗಳನ್ನು ಮುಂದುವರೆಸುವುದು ದೊಡ್ಡದಾಗೇನೂ ಕಾಣಿಸುವುದಿಲ್ಲ. ಆದರೆ ಹಿಂದಿನ ಬ್ಲಾಗಿನಲ್ಲೆ ಬರೆದ ಹಾಗೆ, ಇವರಿಗೆ ವೆಬ್ ಜಗತ್ತಿನಲ್ಲಿ ಇರಬೇಕಾದ ಪ್ರಾಥಮಿಕ ಸಭ್ಯತೆಯೂ ಇಲ್ಲ.

ಹೋಗಲಿ, ಕೆಲಸ ಬಿಟ್ಟ ಮೇಲೆ ಮ್ಯಾನೇಜ್‌ಮೆಂಟನ್ನು ಷಂಡರೆಂದು ಜರೆಯುವ ಭಟ್ಟರು ಮುಂದೆ ಯಾವ ಮ್ಯಾನೇಜ್‌ಮೆಂಟ್ ಕೆಳಗೆ ಕೆಲಸ ಮಾಡುತ್ತಾರೆ ಎಂಬುದು ಕುತೂಹಲಕರ. (ಭಟ್ಟರು ತಾವೇ ಮ್ಯಾನೇಜ್‌ಮೆಂಟ್ ಆಗಿ ಪತ್ರಿಕೆ ಶುರು ಮಾಡಿದರೆ ಒಳ್ಳೇದೇ ಬಿಡಿ, ಚರ್ಚೆಯೇ ಇಲ್ಲ). ಹಾಗೆ ಭಟ್ಟರನ್ನು ಸೇರಿಸಿಕೊಳ್ಳುವವರು ಒಮ್ಮೆ ಸುನಿಲ್ ರಾಜಶೇಖರ್‌ಗೆ ಫೋನ್ ಮಾಡಿ ವಿಚಾರ ತಿಳಿದುಕೊಳ್ಳುವುದು ಒಳ್ಳೆಯದು. `ಉನ್ನತವ್ಯಾಸಂಗಕ್ಕೆ ಹೋಗಬೇಕೆಂದ ಭಟ್ಟರು ಇಲ್ಲೇ ಉಳಿದು ಭಟ್ಟರ ರಾಜೀನಾಮೆ ಪ್ರಕಟಿಸಿದ ಸುನಿಲ್ ವಿರುದ್ಧವೇ `ಕೆಳಮಟ್ಟದಬೈಗುಳದ ಸಮರ ಸಾರಿರುವುದು ವಿಚಿತ್ರ.

ಇದನ್ನೇ ವಕ್ರತುಂಡೋಕ್ತಿಯಾಗಿ ಹೇಳಬೇಕ್ರಪಾ, ನೀವೆಲ್ಲಾ ಕೇಳ್ರಪ್ಪೋ ಕೇಳಿ ಅನ್ನಬೇಕಪಾ ಅಂದ್ರ (ಯಾಕ್ರಿ ಯಶವಂತ ನಿಮ್ಮ ಡೈಲಾಗೇ ಕೇಳ್ದಂಗಾತೇನು?!!)

ಸಂಬಳ ಕೊಟ್ಟರೆ ಪತ್ರಕರ್ತರು ರಾಜಕಾರಣಿಗಳನ್ನು ಬೈಯುತ್ತಾರೆ; ಕೊಡದಿದ್ದರೆ ಮ್ಯಾನೇಜ್‌ಮೆಂಟನ್ನು ಉಗಿಯುತ್ತಾರೆ.

5 Responses to “ವಕ್ರತುಂಡೋಕ್ತಿ: ಸಂಬಳ ಕೊಟ್ಟರೆ ಪತ್ರಕರ್ತರು ರಾಜಕಾರಣಿಗಳನ್ನು ಬೈಯುತ್ತಾರೆ; ಕೊಡದಿದ್ದರೆ….”

 1. Venkatanarayana Says:

  I really feel sorry for what I am hearing about Mr. Vishweshwara Bhat. He started his Journalism probably under me in Samyukta Karnataka. He was repeatedly remembering that I who gave him the first PTI Copy to translate.Really he had all the qualities of a very good journalist and was very brilliant. The soul of Late K SHAMARAO who introduced him to journalism must be repenting for this act.
  Venkatanarayana
  Former Resident Editor, Samyukta Karnataka, Former Editor:Kannada Prabha, Usha Kirana, The Times of India(K)(Both are Earstwhile Pride Publications of Vijayanand Printers Ltd. the present owners of VK., Mangala weekly, Sanje Karnataka and former News Co-Ordinater, Udaya TV.

 2. mahanagar Says:

  ಕನ್ನಡ ಪತ್ರಿಕೋದ್ಯಮದಲ್ಲಿ ಕಳೆದ ೩೦ ವರ್ಷಗಳಿಂದ ಎಲ್ಲ ತರಹದ ಏರಿಳಿತಗಳನ್ನು ಕಂಡಿರುವ ನನ್ನಂಥವನಿಗೆ ವಿ.ಕ. ಹಾಗೂ ವಿ.ಭಟ್ಟರ ಕಿಕ್‌ ಔಟ್ ಪ್ರಕರಣ ಏನೂ ವಿಶೇಷ ಎನಿಸಲಿಲ್ಲ. ಆದರೆ ಇದರಲ್ಲಿ ಭಟ್ಟರ ಪಾತ್ರ ೬ ಕೊಟ್ಟರೆ ಅತ್ತೆ ಕಡೆ ೩ ಕೊಟ್ಟರೆ ಸೊಸೆಯ ಕಡೆಗೆ ಎಂಬ ಗಾದೆ ಮಾತನ್ನು ನೆನಪಿಸಿತು.
  ಇರಲಿ ಬಿಡಿ, ದೊಡ್ಡ ದೊಡ್ಡ ಪತ್ರಕರ್ತರದ್ದು ಸುದ್ದಿಗಳೂ ದೊಡ್ಡವು ! ಹಗರಣಗಳು ಮತ್ತು ರಾಡಿಯಾ ರಂಪಾಟಗಳು ಬಹಳ ದೊಡ್ಡವಾಗಿರುತ್ತವೆ. ಅತೀ ಶೀಘ್ರದಲ್ಲೆ ಅರಂಭಿಸಲಿರುವ ನನ್ನ ಆನಲಾಯಿನ್ ಪತ್ರಿಕೆಯಲ್ಲಿ ಈ “ಸುದ್ದಿ ಸೂರಪ್ಪ ಹಾಗೂ ಸೂರಮ್ಮ” ಗಳ ಸಲುವಾಗಿ ರಂಜಕ ಆದರೆ ಸತ್ಯಕ್ಕೆ ಸಮೀಪದ ವರದಿಗಳು, ಅಚ್ಚುಕಟ್ಟಾಗಿ ಪ್ರಕಟಿಸುವವನಿದ್ದೇನೆ. ವಿಶ್ವಾಸವಿರಲಿ, ನೀವೂ ಇದಕ್ಕೆ ಬರೆಯಬಹುದು. ಮತ್ತೊಮ್ಮೆ ತಮ್ಮನ್ನು ಕಾಣುವೆ………….ವಲ್ಲಭ .ಬಿ.ದೇಸಾಯಿ, ಪತ್ರಕರ್ತರು…..ಎರಡನೇ ರಾಜಧಾನಿ…೫೯೦೦೧೧.vallabh.b.desai@gmail.com

 3. Girish Hampali Says:

  Amazing. I like your approach! But Bhat is a good writer, may be he is disheartened at the moment as he is jobless or he has kept only few people around him and behaving like them,,,

 4. nanu nane Says:

  Bhattra twitter profile nodi….innu chief editor age iddare.
  —————————–
  http://twitter.com/vishweshbhat

  Name Vishweshwar Bhat
  Loc:ation Bangalore
  Bio I am a Chief Editor of Vijay Karnataka, a largest selling newspaper in Karnataka, India
  ————————–


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: