ಪ್ರಜಾವಾಣಿ ವೆಬ್‌ಸೈಟಿನ ಬೀಟಾ ವರ್ಶನ್ ನೋಡಿದೀರ?

ಜನವರಿ 29, 2011

ಯಾವಾಗಲೋ ಯೂನಿಕೋಡ್‌ಗೆ ಹೋಗಿದ್ದ ಪ್ರಜಾವಾಣಿ ಈಗ ತನ್ನದೇ ಕಾರಣಗಳಿಗೆ ವೆಬ್‌ಸೈಟನ್ನು ಮರುವಿನ್ಯಾಸಗೊಳಿಸಿದೆ. ಇದೇನೋ ಸ್ವಾಗತಾರ್ಹ. ಈ ವೆಬ್‌ಸೈಟಿನ ಬಗ್ಗೆ ವಿಮರ್ಶಕಿಯ ಅಭಿಪ್ರಾಯಗಳು ಹೀಗಿವೆ:

  • ಡ್ರಾಪ್‌ಡೌನ್ ಮೆನ್ಯು ಕೊಟ್ಟಿರುವುದು ತುಂಬಾ ಅನುಕೂಲ. ಅದರಲ್ಲೂ ಜಿಲ್ಲಾ ಸುದ್ದಿಗಳಿಗೆ, ವಾಚಕರ ವಾಣಿಗಳಿಗೆ ಮೊದಲನೇ ಪುಟದಿಂದಲೇ ಜಾಗ ನೀಡಿರುವುದು ಒಂದು ಪ್ರಜಾತಾಂತ್ರಿಕವಾದ, ಸೂಕ್ತವಾದ ಕ್ರಮ.
  • ಇದಿಷ್ಟೇ ಒಳ್ಳೆಯ ಸಂಗತಿ. ಉಳಿದಂತೆ ಬೀಟಾ ವರ್ಶನ್‌ನಲ್ಲಿ ತಾಜಾ ಸುದ್ದಿಗಳೇನೂ ಕಾಣಲಿಲ್ಲ. ದಿನದ ಬೆಳಗಿನ ಆವೃತ್ತಿಯ ಸುದ್ದಿಗಳೇ ಇತ್ತೀಚಿನ ಸುದ್ದಿಗಳ ವಿಭಾಗದಲ್ಲೂ ಇದ್ದವು. ಪ್ರಜಾವಾಣಿಯು ಪ್ರಿಂಟ್ ಆವೃತ್ತಿಯಂತೆಯೇ ಪ್ರತಿ ರಾತ್ರಿ ಎಡಿಶನ್ ಪ್ರಕಟ ಮಾಡುವ ಪರಿಪಾಠವನ್ನೇ ಮುಂದುವರೆಸಿದ್ರೆ ಏನು ಪ್ರಯೋಜನ? ತಾಜಾ ಸುದ್ದಿ ಅಂದ್ರೆ ದಟ್ಸ್‌ಕನ್ನಡದಲ್ಲಿ ಹಿಂದೊಮ್ಮೆ ಬರ್‍ತಾ ಇದ್ದ ಹಾಗೆ ಸುದ್ದಿಗಳು ಬಹುಬೇಗ (ಬಂದ ಹಾಗೆಯೇ) ಪ್ರಕಟವಾಗಬೇಕು. (ಅರೆ, ಕೆಲವು ತಾಜಾ ಸುದ್ದಿಗಳೂ ಫ್ಲಾಶ್ ಆಗಿದ್ದು ಆಮೇಲೆ ಕಂಡಿತು ಅನ್ನಿ. ಇದರ ಪ್ರಮಾಣ ಹೆಚ್ಚಬೇಕೇನೋ).
  • ಇಡೀ ವೆಬ್‌ಸೈಟಿನಲ್ಲಿ ಖಾಲಿಜಾಗಕ್ಕೆ ಬೆಲೆಯೇ ಇಲ್ಲ. ವಿವಿಧ ಬಾಕ್ಸ್‌ಗಳು, ಜಾಹೀರಾತುಗಳು ಅಡ್ಡಾದಿಡ್ಡಿಯಾಗಿ ಕಾಣಿಸುತ್ತಿವೆ. ಅಂಚಿನಿಂದ ಅಂಚಿನವರೆಗೆ ಮ್ಯಾಟರ್ ಹಾಕುವುದಕ್ಕೆ ಕಂಪ್ಯೂಟರಿನಲ್ಲಿ ಅವಕಾಶ ಇರಬಹುದು. ಆದರೆ ಅತ್ತ ಇತ್ತ ಮಾರ್ಜಿನ್ ಬಿಡುವುದರಲ್ಲಿ, ಕಾಲಂ ನಡುವಣ ಸ್ಪೇಸ್‌ಗಳನ್ನು (ಇದನ್ನು ಗಟರ್ ಸ್ಪೇಸ್ ಅನ್ನೋದೇ ವಿಚಿತ್ರ) ಅಂದವಾಗಿ ಕಾಣಿಸುವುದರಲ್ಲೇ ವಿನ್ಯಾಸದ ಮಜಾ ಇದೆ ಅಲ್ವರ?
  • ಒಂದು ಪುಟದಲ್ಲಿ ಯಾವುದು ಮುಖ್ಯ ಸುದ್ದಿ ಅನ್ನೋದು ಕಣ್ಣು ಹಾಯಿಸಿದ ಕೂಡಲೇ ಗೊತ್ತಾಗಬೇಕು. ಅದಕ್ಕೆ ತಕ್ಕಂತೆ ಹೆಡಿಂಗ್‌ಗಳನ್ನು ರೂಪಿಸಬೇಕು; ಫಾಂಟ್‌ಗಳ ಸೈಜನ್ನು ನಿರ್ಧರಿಸಬೇಕು. ಈಗಿರುವಂತೆ, ಹೆಡಿಂಗ್‌ಗಳಲ್ಲಿ ವಜನ್ ಇಲ್ಲ.
  • ಇನ್ನು ತಪ್ಪುಗಳಿಗೆ ವಿನ್ಯಾಸ ಹೊಣೆಯಲ್ಲ! ವಾಕ್ಯರಚನೆಯ ಹಲವಾರು ತಪ್ಪುಗಳು ಇವತ್ತಿನ ಪುಟದಲ್ಲಿ ನುಗ್ಗಿವೆ. ಅವನ್ನೆಲ್ಲ ಸೂಕ್ತವಾಗಿ ಪರಿಶೀಲಿಸದೇ ಬಿಟ್ಟರೆ, ಮುಂದಿನ ದಿನಗಳಲ್ಲಿ ಪ್ರಜಾವಾಣಿಯು ಭಾಷಾ ಮಾಲಿನ್ಯಕ್ಕೆ ಕಾರಣವಾಗಬಹುದು.
  • ಮುಖಪುಟ (ಮುಖ್ಯಪುಟ, ಹೋಮ್‌ಪೇಜ್) ತುಂಬಾ ಉದ್ದ. ಅಷ್ಟು ಉದ್ದ ಓದುವುದಕ್ಕೆ ಜನರಿಗೆ ಆಸಕ್ತಿ ಇರೋದಿಲ್ಲ. ಮುಖ್ಯಪುಟವು ಹತ್ತು ಇಂಚಿಗಿಂತ ಉದ್ದ ಇದ್ದರೆ ಅಂಥ ಪುಟವನ್ನು ಓದೋರ ಸಂಖ್ಯೆ ತೀರಾ ಕಡಿಮೆ.
  • ಪಠ್ಯವನ್ನು ಓದುವುದಕ್ಕೆ ಫಾಂಟ್ ಗಾತ್ರ ಹಿಗ್ಗಿಸುವ, ಕುಗ್ಗಿಸುವ ಅವಕಾಶ ಕಲ್ಪಿಸಿದ್ದು ತುಂಬಾ ಒಳ್ಳೆಯದು. ಆದರೆ ಒಮ್ಮೆ ಒಬ್ಬ ವಿಸಿಟರ್ ಒಂದು ಫಾಂಟ್ ಗಾತ್ರವನ್ನು ಬಯಸಿದರೆ, ಇಡೀ ವೆಬ್‌ಸೈಟಿನ ಎಲ್ಲಾ ಬರಹಗಳೂ ಅದೇ ಗಾತ್ರಕ್ಕೆ ಹೊಂದಿಕೆಯಾಗುವುದು ಒಳ್ಳೆಯದು. ಇಲ್ಲವಾದರೆ ಪ್ರತೀ ಸಲವೂ ಕ್ಲಿಕ್ ಮಾಡುತ್ತ ಕೂರಬೇಕು. ಅದರಲ್ಲೂ, ಹಿಗ್ಗಿಸುವ ಪ್ಲಸ್ ಕೊಂಡಿಯನ್ನು ಕ್ಲಿಕ್ಕಿಸಿದರೆ ಮೊದಲು ಫಾಂಟ್ ಗಾತ್ರ ಚಿಕ್ಕದಾಗುತ್ತದೆ; ಎರಡನೇ ಕ್ಲಿಕ್‌ನಿಂದಲೇ ದೊಡ್ಡದಾಗುತ್ತೆ; ಇದೇನು ತಾಂತ್ರಿಕ ಗೊಂದಲವೋ, ಪರಿಹರಿಸಿ.

ಏನೇ ಆಗಲಿ, ಜಾಲತಾಣವನ್ನು ಸುಧಾರಿಸೋ ಯತ್ನವಂತೂ ಕಣ್ಣಿಗೆ ಕಾಣುತ್ತದೆ; ಅದೇ ಒಳ್ಳೆಯ ಸಂಗತಿ. ಪ್ರಜಾವಾಣಿಯಂಥ ಪತ್ರಿಕೆಗಳು ಮಲ್ಟಿಮೀಡಿಯಾ ಪ್ರಕಟಣೆಯಲ್ಲಿ ಉದಯವಾಣಿ ಜಾಲತಾಣವನ್ನು ಮೀರಿಸುವುದು ಯಾವಾಗ? ಉದಯವಾಣಿ ಸದ್ಯದ ಮಟ್ಟಿಗೆ ಕನ್ನಡ ಪತ್ರಿಕೆಗಳಲ್ಲೇ ಅತ್ಯಂತ ಸುಧಾರಿತ, ಆಧುನಿಕ ಮಾಧ್ಯಮ ನಿರೂಪಣೆಯ ಪರಿಕಲ್ಪನೆಗಳನ್ನು ಒಗ್ಗೂಡಿಸಿರುವ ವೆಬ್‌ಸೈಟ್ ಹೊಂದಿರುವ ಏಕೈಕ ಪತ್ರಿಕೆ. ಅಲ್ವರ?

 

 

2 Responses to “ಪ್ರಜಾವಾಣಿ ವೆಬ್‌ಸೈಟಿನ ಬೀಟಾ ವರ್ಶನ್ ನೋಡಿದೀರ?”

  1. Ravi Says:

    ಖಂಡಿತವಾಗಿಯೂ ಒಪ್ಪ ತಕ್ಕ ಮಾತು. ತಂತ್ರಜ್ಞಾನಕ್ಕೆ ಬಂದಾಗ ಉದಯವಾಣಿಯ ಮೀರಿಸುವ ಪತ್ರಿಕೆ ಇಲ್ಲ ಕನ್ನಡದಲ್ಲಿ. ಉದಯವಾಣಿ ತನ್ನದೇ ಆದ youtube ವಾಹಿನಿಯನ್ನೂ ಹೊಂದಿದೆ. ಉತ್ತಮ ವೀಡಿಯೋಗಳ ಸಂಗ್ರಹವನ್ನೂ ಹೊಂದಿದೆ.. http://www.youtube.com/user/udayavanionline


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: