ಮುಸ್ಲಿಂ ದೇಶಗಳ ಕ್ರಾಂತಿ: ಮೀಡಿಯಾ ಜಿಂದಾಬಾದ್

ಜನವರಿ 30, 2011

ಅಂದು ಯೆಮೆನ್. ಇಂದು ಈಜಿಪ್ಟ್. ಎಲ್ಲೆಲ್ಲೂ ಕ್ರಾಂತಿಯ ಘೋಷಣೆ. ಪ್ರಜಾತಂತ್ರಕ್ಕಾಗಿ ಮುಸ್ಲಿಂ ದೇಶಗಳಲ್ಲಿ ಹೋರಾಟ; ರಕ್ತಪಾತ. ವೆಬ್ ೨.೦ ಯುಗದ ಈ ಹೊಸ ಕ್ರಾಂತಿಗಳಿಗೆ ಫೇಸ್‌ಬುಕ್, ಟ್ವಿಟರ್, ಮೊಬೈಲ್, ಹ್ಯಾಮ್, – ಎಲ್ಲ ಮಾಧ್ಯಮಗಳ, ಜಾಲತಾಣಗಳ ಬಳಕೆ.

ಇತ್ತೀಚೆಗಷ್ಟೆ ಯೆಮೆನ್‌ನಲ್ಲಿ ನಡೆದ ಕ್ರಾಂತಿಯಲ್ಲಿ ಆ ದೇಶದ ಸರ್ವಾಧಿಕಾರಿ ಓಡಿಹೋದ ಸುದ್ದಿ ಹಳತಾಗಿಬಿಟ್ಟಿದೆ. ಯಾಕೆಂದರೆ ಈಜಿಪ್ಟಿನಲ್ಲಿ ೮೨ರ ವೃದ್ಧ ಸರ್ವಾಧಿಕಾರಿ ಹೊಸ್ನಿ ಮುಬಾರಕ್ ವಿರುದ್ಧ ದಂಗೆ ಎದ್ದಿದೆ. ಮೊದಲು ಏನೋ ಒಂಥರ ಗಲಾಟೆ ಎಂದು ಸುಮ್ಮನಿದ್ದ ಮಾಧ್ಯಮಗಳೀಗ ಕ್ರಾಂತಿ ವ್ಯಾಪ್ತಿ, ಪರಿಣಾಮವನ್ನು ಕಂಡು ಬೆಚ್ಚಿವೆ. ಶನಿವಾರದ ಬೆಳಗಿನಿಂದ ಈಜಿಪ್ಟಿನದೇ ಸುದ್ದಿ. ಕ್ಷಣಕ್ಷಣಕ್ಕೂ ಬದಲಾಗ್ತಾ ಇರೋ ಈ ಎಲ್ಲ ಕ್ರಾಂತಿಯ ಹಾದಿಯಲ್ಲಿ ಮೂಡಿದ್ದು ಮಾಧ್ಯಮದ ಹೆಜ್ಜೆಗಳೇ. ವಿಮರ್ಶಕಿ ಈ ಬಗ್ಗೆ ಬೆಳಕು ಚೆಲ್ಲೋ ವಿಶೇಷ ಲೇಖನ ಇದು.

ಶನಿವಾರ ರಾತ್ರಿ: ಈಜಿಪ್ಟಿನಲ್ಲಿ ಇಂಟರ್‌ನೆಟ್ ಇನ್ನೂ ಜೀವ ಪಡೆದಿಲ್ಲ. ಕೆಲವು ಹ್ಯಾಮ್ ರೇಡಿಯೋಗಳ ಸಂದೇಶಗಳಷ್ಟೇ ಬಂದಿವೆ. ಮೋಡೆಮ್‌ಗಳಿಂದಲೂ ಸಂದೇಶಗಳು ಬರ್‍ತಿವೆ. ಕೈರೋದ ಬೀದಿಯಲ್ಲಿ ಏನು ನಡೀತು ಎಂದು ಅಲ್ ಜಝೀರಾ ಟಿವಿ ಚಾನೆಲ್ ವರದಿ ಮಾಡ್ತಾ ಇದೆ. ಇಂಟರ್‌ನೆಟ್ ಹರಿವಿಗಾಗಿ ಕ್ರಿಪ್ಟೋಗ್ರಫಿಯಿಂದ ಹಿಡಿದು ಎಲ್ಲ ಯತ್ನಗಳೂ ನಡೆದಿವೆ.

ಶುಕ್ರವಾರ ರಾತ್ರಿ: ಈಜಿಪ್ಟಿನಲ್ಲಿ ಇಂಟರ್‌ನೆಟ್‌ಗೆ ಸಂಪೂರ್ಣ ತಡೆ ಒಡ್ಡಿದ ಹಾಗೆ ಕಾಣಿಸುತ್ತಿದೆ. ಕೆಲವು ಕಾರ್ಪೋರೇಟ್ ಜಾಲಗಳಷ್ಟೇ ಕೆಲಸ ಮಾಡುತ್ತಿವೆ.

ಐರೋಪ್ಯ ಸಮುದಾಯದ ವಿ ಬ್ಯುಲ್ಡ್ ಎಂಬ ಜಾಲತಾಣದಲ್ಲಿ ಕಂಡುಬರೋ ಸಂದೇಶಗಳಿವು!

[22:20] <press57> what is happening?

[22:20] <press57> Is internet working?

[22:20] <@chrisk> well, right now the internet is shut off in Egypt

[22:20] <@chrisk> so we are trying alternative means of communication

[22:20] <press57> can I know you?

[22:20] <press57> r u from the webuild group?

[22:20] <press57> ok

[22:20] <@chrisk> we are telecomix. telecomix.org werebuild.eu

[22:21] <@chrisk> yes. we are the telecomix community

[22:21] <press57> how you can build alternate routes?

[22:21] == ediqus [~eqidus@CPE00222d726638-CM00222d726634.cpe.net.cable.rogers.com] has joined #press

[22:21] <@chrisk> press57: we have found old modem pools outside egypt, that we spread to egyptians

[22:21] <@chrisk> also, we are listening on shortwave amateur radio

[22:21] <press57> that is great..

[22:22] <press57> fine .. congratulations for keeping the communication

[22:22] <@chrisk> they are being used. but very very limited traffic of course

[22:22] <press57> anyhow, the news is spread….

[22:22] <@chrisk> we hope so. it is important for the world to know what is going on.

[22:22] <press57> but is there any press release which can explain the latest position?

[22:22] <press57> any latest status report?

[22:23] <@jaywalk> press57: check the wiki

[22:23] <press57> ok

[22:23] <@jaywalk> it contains plenty of the current progress

[22:23] <@chrisk> yes. on werebuild.eu you have the current operations

[22:23] <@jaywalk> but no, no time to write press releases:)

[22:23] <press57> I understand

[22:23] <@chrisk> also, huffington post wrote about our projects here http://www.huffingtonpost.com/2011/01/29/anonymous-internet-egypt_n_815889.html

 

ಇಲ್ಲಿ ಪ್ರೆಸ್ ೫೭ ಅನ್ನೋದು ವಿಮರ್ಶಕಿ (೩೦.೧.೨೦೧೧ ಶನಿವಾರ ರಾತ್ರಿ ಹತ್ತೂವರೆ ಸಮಯದಲ್ಲಿ) ಮಾಡಿದ ಚಾಟ್. ಈಜಿಪ್ಟಿನ ಜನರ ಹೋರಾಟಕ್ಕೆ ಮಾಧ್ಯಮ ಸೇತುವಾದ ಈ ವೆಬ್‌ಸೈಟನ್ನು ಅಭಿನಂದಿಸ್ಲೇ ಬೇಕಲ್ವರ?

Public Pad

Version 880
Saved Jan 30, 2011

military just turned back a firetruck  that protestors were trying to stop

This is a pad of useful info about ham radio to be faxed into egypt: 

http://sendfreefax.net/send-free-fax-Egypt.php

http://www.computerworld.com/s/article/9207058/Without_Internet_Egyptians_find_new_ways_to_get_online

http://www.localegypt.com (goldmine)

 

Backup of this pad in case piratenpad goes down again:

http://typewith.me/dZDYeMq5u5

(Only use if this page goes down)

 

Dialup info:

http://pad.telecomix.org/gomtugep

 

Main Pad / faxing information:

http://piratenpad.de/opegypttgt

 

http://sendfreefax.net/send-free-fax-Egypt.php

 

—————————-Begin fax—————————

 

ಇದು ಪೈರೇಟ್ ಎನ್ ಪ್ಯಾಡ್ ಅನ್ನೋ ವೆಬ್‌ಸೈಟಿನಲ್ಲಿ ಕಾಣೋ ಗೀಚುಹಾಳೆ.

ನೋಡಿ ಹೇಗಿದೆ, ಈಜಿಪ್ಟಿನ ಕ್ರಾಂತಿಯಲ್ಲಿ ಮಾಧ್ಯಮದ ಪಾತ್ರ! ಇವತ್ತಿನ ದಿ ಹಿಂದೂ ಪತ್ರಿಕೆಯಲ್ಲಿ ಅಲ್ ಜಝೀರಾ ಟಿವಿ ಚಾನೆಲ್ ಹೇಗೆ ಈಜಿಪ್ಟ್ ಮತ್ತು ಇತರೆ ಅಮೆರಿಕಾ ಸ್ನೇಹಿ ಮುಸ್ಲಿಂ ದೇಶಗಳಲ್ಲಿ ಕ್ರಾಂತಿಯ ಬೀಜ ಬಿತ್ತಿತು ಎಂಬ ವಿವರವಾದ ಲೇಖನವಿದೆ.

ದೇಶಗಳು ನಮ್ಮನ್ನು ತಡೆಗಟ್ಟಿದಾಗ ನಾವು ರೂಪಾಂತರಗೊಳ್ಳುತ್ತೇವೆ ಎಂದು ವಿಬ್ಯುಲ್ಡ್‌ನ ಒಬ್ಬ ಕಾರ್ಯಕರ್ತ ತನ್ನ ಟ್ವಿಟರ್ ಸಂದೇಶದಲ್ಲಿ ಬರೆದಿದ್ದನಂತೆ. ಅದನ್ನೇ ನೂರಾರು ಈಜಿಪ್ಶಿಯನ್ನರು ಮಾಡುತ್ತಿದ್ದಾರೆ. ಲ್ಯಾಂಡ್‌ಲೈನುಗಳು, ಫ್ಯಾಕ್ಸ್‌ಗಳು, ಹ್ಯಾಮ್‌ಗಳು ಎಲ್ಲವೂ ಬಳಕೆಯಾಗುತ್ತಿವೆ. ಅಲ್ಲದೆ ಮೋಡೆಮ್ ಮೂಲಕ ನೇರ ಸಂಪರ್ಕವೂ ಸಾಧ್ಯವಾಗುತ್ತಿದೆ. (ಅರೆ, ಇದೇನಪಾ ಅಂತ ಕೇಳಬೇಡಿ. ಡಯಲ್ ಅಪ್ ಮೋಡೆಮ್ ಇದ್ದಾಗ ಮೋಡೆಮ್‌ಗಳ ಮೂಲಕವೇ ನೇರವಾಗಿ ಫೈಲುಗಳು ರವಾನೆಯಾಗುತ್ತಿದ್ದವು).

ಈಜಿಪ್ಟಿನ ಸರ್ಕಾರವು ಬಹುತೇಕ ಎಲ್ಲ ಇಂಟರ್‌ನೆಟ್ ಸೇವೆಗಳನ್ನೂ ಸ್ಥಗಿತಗೊಳಿಸಿದೆ. ಹಲವಾರು ಮೊಬೈಲ್ ನೆಟ್‌ವಕ್‌ಗಳು ಸತ್ತೇಹೋಗಿವೆ. ಶೇ. ೮ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ನೂರ್ ಐ ಎಸ್ ಪಿ, ಲ್ಯಾಂಡ್‌ಲೈನುಗಳು ಮತ್ತು ಡಯಲ್ ಅಪ್ ಮೋಡೆಮ್‌ಗಳು ಮಾತ್ರವೇ ಈಗ ಸಂವಹನಕ್ಕೆ ಇರುವ ಮಾಧ್ಯಮಗಳಾಗಿವೆ.

ಇಂಥ ಡಯಲ್ ಅಪ್ ಮೋಡೆಮ್‌ಗಳಿಗೆ ಸಂಖ್ಯೆಯನ್ನು ಕೊಡಲು ಫ್ರೆಂಚ್ ಡಾಟಾ ನೆಟ್‌ವರ್ಕ್ ಅನ್ನೋ ಸಂಸ್ಥೆ ಮುಂದೆ ಬಂದಿದೆ. ದೂರವಾಣಿ ಮೂಲಕ ಟ್ವೀಟ್ ಮಾಡುವುದೂ ನಡೆದಿದೆ. ವಿಕಿಲೀಕ್ಸ್ ಬಿಡುಗಡೆ ಮಾಡಿದ  ಈಜಿಪ್ಟಿನಲ್ಲಿ ಹೊಸ್ನಿ ಮುಬಾರಕ್ ನಡೆಸಿದ ಮಾನವ ಹಕ್ಕುಗಳ ದಮನದ ವಿವರಗಳು ಎಲ್ಲೆಡೆ ಫ್ಯಾಕ್ಸ್ ಆಗುತ್ತಿವೆ. ಹ್ಯಾಮ್ ರೇಡಿಯೋ ಆಪರೇಟರ್‌ಗಳಿಗೆ ಮೋರ್ಸ್ ಕೋಡಿನಲ್ಲಿ ಸಂದೇಶಗಳೂ ಬಂದಿವೆ.

೨೦೦೫ರಲ್ಲಿ ನೇಪಾಳ, ೨೦೦೭ರಲ್ಲಿ ಬರ್ಮಾ ಸರ್ಕಾರಗಳೂ ಇಂಟರ್‌ನೆಟ್ ಸಂಪರ್ಕವನ್ನು ಕಡಿದಿದ್ದವಂತೆ. ಹಾಗಂತ ತುನೀಸಿಯಾದಲ್ಲಿ ಇಂಟರ್‌ನೆಟ್ ಸಂಪರ್ಕ ಅಷ್ಟಾಗಿ ಸತ್ತಿರಲಿಲ್ಲ.

ಈಜಿಪ್ಟಿನಲ್ಲಿ ೧.೭೦ ಕೋಟಿ ಇಂಟರ್‌ನೆಟ್ ಸಂಪರ್ಕಗಳಿವೆ. ೪೦ ಲಕ್ಷ ಫೇಸ್‌ಬುಕ್ ಸದಸ್ಯರಿದ್ದಾರೆ.

ಸ್ವಾತಂತ್ರ್ಯ ಗಳಿಸೋದಕ್ಕೆ ಭಾರತದಲ್ಲಿ ಮಹಾತ್ಮಾ ಗಾಂಧಿ ಕೂಡಾ ಮಾಧ್ಯಮವನ್ನು ಬಳಸಿಕೊಂಡರು. ಈಗಲೂ ಮಾಧ್ಯಮವೇ ಸ್ವಾತಂತ್ರ್ಯದ ಬೇಡಿಕೆಗೆ, ಪ್ರಜಾತಂತ್ರದ ಹಕ್ಕೊತ್ತಾಯಕ್ಕೆ ದನಿಗೂಡಿಸಿದೆ. ನಾಯಕರಿಲ್ಲದ ಹೋರಾಟಕ್ಕೆ ದನಿಯನ್ನಾದರೂ ಕೊಡುವ ಇಂಥ ಕೆಲಸ ಶ್ಲಾಘನೀಯ. (ಈಜಿಪ್ಟಿನ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ರಾಜಕಾರಣಿ ಮೊಹಮ್ಮದ್ ಎಲ್‌ಬರದೀ ಈಗ ಈ ಹೋರಾಟಕ್ಕೆ ಧುಮುಕಿದ್ದಾರೆ ಎಂದು ತಡರಾತ್ರಿಯ ವರದಿಗಳು ತಿಳಿಸಿವೆ).

ಅದಕ್ಕೇ ಹೇಳೋದು: ಮಾಧ್ಯಮಗಳು ಯಾವುದೇ ವ್ಯಕ್ತಿಯ ಸ್ವತ್ತಲ್ಲ; ಅವು ಮನುಕುಲದ ಧ್ವನಿಯಾಗಿ ಇರುವುದಕ್ಕಷ್ಟೇ ರೂಪುಗೊಂಡವು. ಇಂಥ ಮಾಧ್ಯಮಗಳನ್ನು ವ್ಯಕ್ತಿಗತ ದುರುಪಯೋಗಕ್ಕೆ ಬಳಸಿಕೊಳ್ಳುವುದು, ಐಷಾರಾಮಿ ಸಂದೇಶಗಳನ್ನು ರವಾನಿಸಲು ಬಳಸುವುದು ತಪ್ಪು.

 

 

 

 

6 Responses to “ಮುಸ್ಲಿಂ ದೇಶಗಳ ಕ್ರಾಂತಿ: ಮೀಡಿಯಾ ಜಿಂದಾಬಾದ್”

 1. srinivasa.ts Says:

  lekhana channagide… adre idaralli ond mahiti tappide.neevu yemen balasuvalli tunisia balasabekittu. yakandre.. tunisiadalli dange mugidu, abed ali emba sarvadhikari desha bittu hodi hogi 3 vaara aytu. innu yemennalli ideega thane dange shuruvagide. allina sarvadhikari saleh innu adhikara tyajisilla.

 2. Nagalingamurthy B P Says:

  Such Articles are welcome from the point of spreading true facts irrespective of region ,religion

 3. ರವಿಪ್ರಕಾಶ Says:

  ಒಳ್ಳೆ ಲೇಖನ.

  • Suvvi Says:

   This is great stuff! This article shows the character and caliber of author. Instead of churning one more rumor mill and targeting some individuals, it is a welcome step. Any day this is a great story idea, which should have appeared in mainstream papers by this time. Vimarshaki is far ahead of major media at least in Karnataka. How many of our editors got a clue about what is happening in Egypt? Our so called ‘celebrity-journos’, who write loads of articles on any thing under the Sun and run blogs to counter somebody, are aware about this silent revolution whichis happening in our times.
   Good job Vimarshaki, who ever you are, hats off to you.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: