ಮಹಿಳಾ ದಿನಕ್ಕಿಂತ ಮುನ್ನ ಮತ್ತು ಮಹಿಳಾ ದಿನದಂದು ಕನ್ನಡದ ಎರಡು ಪತ್ರಿಕೆಗಳು ಬರೆದ ಸುದ್ದಿಗಳು ಹೀಗಿವೆ:
ಇವು ವಿಜಯ ಕರ್ನಾಟಕದಲ್ಲಿ ಇತ್ತೀಚೆಗೆ ಒಂದೇ ದಿನ ಬಂದ ಸುದ್ದಿತುಣುಕುಗಳು
ಮೊದಲನೇದು ಕಾಮಸೂತ್ರ ಪುಸ್ತಕದ ಬಗ್ಗೆ ತುರುಕಿದ ಸುದ್ದಿ. ಎರಡನೇದು ಒಳಚೆಡ್ಡಿ ಕಳಚುತ್ತಿರುವ ಹುಡುಗಿಯ ಚಿತ್ರ. ಇವೆರಡೂ ಈ ನಂಬರ್ 1 ಪತ್ರಿಕೆಗೆ ಬೇಕಾಗಿತ್ತೆ?
ಇದು ಕನ್ನಡಪ್ರಭದ ಮುಖಪುಟದ (8.3.2011) ಮೊದಲ ವಾಕ್ಯ.
ಅರುಣಾ ಶಾನಭಾಗರನ್ನು ಉಳಿದ ಮಹಿಳಾ ಮಣಿಯವರ ಜೊತೆಗೆ ಸೇರಿಸಿದ್ದು ಸರಿಯೆ? ನೀವೇ ಹೇಳಬೇಕು. ಅಲ್ಲದೆ ದಯಾಮರಣವನ್ನು ಕೇಳಿದಾಕೆ ಅವರಲ್ಲ, ಅವರ ಸ್ನೇಹಿತೆ ಎಂದು ಕರೆದುಕೊಂಡಾಕೆ. ಹಾಗೆ ನೋಡಿದರೆ ಇದು ಮಹಿಳಾ ದಿನದ ದಿನ ಬಂದ ತೀರ್ಪು ಎನ್ನುವುದನ್ನು ಹೊರತುಪಡಿಸಿದರೆ ಮಾನವೀಯ ಅಂತಃಕರಣದ ಸುದ್ದಿಯೇ ಹೊರತು ಮಹಿಳೆಗೇ ಸಂಬಂಧಿಸಿದ್ದಲ್ಲ. ಅರುಣಾ ಶಾನಭಾಗರು ಎಂದೂ ಸ್ವತಃ ಪ್ರಚಾರ ಬಯಸಿಲ್ಲ. ದಯಾಮರಣದಂಥ ಗಂಭೀರ ನೀತಿನಿರೂಪಣೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದರೆ ಅದನ್ನು ಪ್ರಚಾರ ಎಂದು ಕರೆಯಬಹುದೆ? (ಹಾಗಂತ ಅರುಣಾ ಈ ಹಿಂದೆ ಅತ್ಯಾಚಾರಕ್ಕೆ ಒಳಗಾಗಿದ್ದನ್ನು ಮರೆಯುವಂತಿಲ್ಲ; ಆದರೆ ನ್ಯಾಯಾಲಯ ತೀರ್ಪು ಕೊಟ್ಟಿದ್ದು ದಯಾಮರಣದ ವಿಷಯದಲ್ಲಿ). ಒಳಪುಟದಲ್ಲಿ ಜಯಂತ್ ಕಾಯ್ಕಿಣಿ ಲೇಖನವನ್ನೂ ಓದಿದರೆ ಈ ಟೀಕೆ ಸರಿಯೆ, ತಪ್ಪೆ ಎಂದು ನಿರ್ಧರಿಸಬಹುದು!
ಮಾರ್ಚ್ 11, 2011 at 4:38 ಫೂರ್ವಾಹ್ನ
ಹೋದೆಯಾ… ಅಂದ್ರೆ ಬಂದೆ ಗವಾಕ್ಷೀಲಿ ಅನ್ನುವಂತೆ ಮತ್ತೆ ಪ್ರತ್ಯಕ್ಷವಾಗಿದ್ದೀರಲ್ಲ! ಇಷ್ಟು ದಿವಸಗಳ ನಿಮ್ಮ ಅಜ್ಞಾತವಾಸದ ರಹಸ್ಯವೇನು? 🙂
ಮತ್ತೊಂದು ಪ್ರಶ್ನೆ – ನಿಮ್ಮ ಇರುವಿಕೆ ಮತ್ತು ಬ್ಗಾಗುವಿಕೆ ಯಾರ್ಯಾರ ಮೇಲೋ ಯಾವ್ಯಾವುದೋ ರೀತಿಯ ಗಂಭೀರ ಸಂಶಯಗಳಿಗೆ ಕಾರಣವಾಗಿದೆ – ಇದರ ಅರಿವೇನಾದರೂ ನಿಮಗಿದೆಯಾ? ನಿಮ್ಮ ನಿಜ ನಾಮಧೇಯವನ್ನು ನೀವೇ ಯಾಕೆ ಬಹಿರಂಗಗೊಳಿಸಬಾರದು? ಭಯವಾ?
ಮಾರ್ಚ್ 9, 2011 at 10:36 ಫೂರ್ವಾಹ್ನ
ದಯಾಮರಣದ ಬಗ್ಗೆ ನ್ಯಾಯಾಲಯ ತೀರ್ಪು ಪ್ರಕಟಿಸಿದ ನಂತರ ನಡೆದದ್ದೇನು? ಎಲ್ಲಾ ವಾಹಿನಿಗಳಲ್ಲೂ, ಅರುಣಾರ ಹಿಂದಿನ ಮತ್ತು ಈಗಿನ ಚಿತ್ರಗಳನ್ನು ಪದೇ ಪದೇ ತೊರಿಸುತ್ತಾ ಪ್ರಚಾರ ನೀಡಿ ಸಾಧಿಸಿದ್ದೇನು? ಆಕೆ ಇದನ್ನೆಲ್ಲಾ ನೋಡುವ ಸ್ಥಿತಿಯಲ್ಲಿ ಇದ್ದಿದ್ದರೆ, ಆಕೆಗೆ ಎಷ್ಟು ನೋವಾಗುತ್ತಿದ್ದಿರವಹುದು. ಇಂಥ ಪ್ರಚಾರದ ಅಗತ್ಯವಿತ್ತೇ? ಅನ್ನುವುದೂ ಕೂಡ ಪ್ರಶ್ನೆಗಳೇ…
ವಿಮರ್ಶಕಿ: ನೀವು ಹೇಳೋದ್ರಲ್ಲಿ ತಪ್ಪಿಲ್ಲ. ಆದರೆ ಈ ಪ್ರಚಾರದಲ್ಲಿ ಅರುಣಾದೇನೂ ಪಾತ್ರವಿಲ್ಲ. ಈ ಪಟ್ಟಿಯಲ್ಲಿ ಇರುವ ಎಲ್ಲರೂ ತಾವೇ ಸ್ವತಃ ಪ್ರಚಾರ ಬಯಸಿದವರು; ಅರುಣಾ ಪ್ರಚಾರಕ್ಕೆ ಬಂದಿದ್ದು ಇತರರಿಂದ. ಆಕೆಯ ಕರುಣಾಜನಕ ಕಥೆಯನ್ನು ಪ್ರಚಾರ ಎಂದು ತಿಳಿಯಬೇಕೆ ? ಉಳಿದೆಲ್ಲರ ಜೊತೆಗೆ ಸೇರಿಸಬೇಕೆ ಅನ್ನೋದೇ ನನ್ನ ಪ್ರಶ್ನೆ.
ಏಪ್ರಿಲ್ 14, 2011 at 7:48 ಫೂರ್ವಾಹ್ನ
ಯಾರದೋ ನೋವಿಗೆ ಹೀಗೆ ಪ್ರಾಸ ಬದ್ಧ ವಾಕ್ಯಗಳನ್ನು ಬರೆಯಲು ಪತ್ರಿಕೆಗೆ ನಾಚಿಕೆಯಾಗಲಿಲ್ಲವೇನೋ?